YAHOO ಭಾರತ ಸೇವಾ ನಿಬಂಧನೆಗಳು

 1. ನಿಬಂಧನೆಗಳಿಗೆ ಸಮ್ಮತಿ
  Yahoo ಭಾರತಕ್ಕೆ ಸ್ವಾಗತ. Yahoo ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಸನ್ನಿವೇಶ ಆಧರಿಸಿ "Yahoo", "ನಾವು" ಅಥವಾ "ನಮ್ಮಗಳು") ಕೆಳಗಿನ ಸೇವಾ ನಿಬಂಧನೆಗಳಿಗೆ ಒಳಪಟ್ಟು ನಿಮಗೆ ಸೇವೆಯನ್ನು ಒದಗಿಸುತ್ತದೆ (ಕೆಳಗೆ ವ್ಯಾಖ್ಯಾನಿಸಿದಂತೆ), ನಿಮಗೆ ಸೂಚನೆಯನ್ನು ನೀಡದೆಯೇ ಕಾಲಕಾಲಕ್ಕೆ ನಾವು ಈ ಸೇವೆಯನ್ನು ಪರಿಷ್ಕರಿಸಬಹುದು. ನೀವು ಸೇವಾ ಷರತ್ತುಗಳ ಅತ್ಯಂತ ಇತ್ತೀಚಿನ ಆವೃತ್ತಿಯನ್ನು ಕೆಳಗೆ ಪರಿಶೀಲಿಸಬಹುದು: https://policies.yahoo.com/in/kn/yahoo/terms/utos/index.html. ಅಂತೆಯೇ, ನಿರ್ದಿಷ್ಟ Yahoo ಸೇವೆಗಳು ಅಥವಾ ತೃತೀಯ ಪಕ್ಷದ ಸೇವೆಗಳನ್ನು ಬಳಕೆ ಮಾಡುವಾಗ, ನೀವು ಮತ್ತು Yahoo, ಕಾಲಕಾಲಕ್ಕೆ ಪ್ರಕಟಿಸುವ ಅನ್ವಯಿಸುವ ಅಂಥ ಯಾವುದೇ ಪ್ರಕಟಿತ ಮಾರ್ಗಸೂಚಿಗಳಿಗೆ ಅಥವಾ ನಿಯಮಗಳಿಗೆ ಒಳಪಟ್ಟಿರುತ್ತೀರಿ. ಬದಲಾವಣೆಗೊಳ್ಳಬಹುದಾದ ಇಂಥ ಎಲ್ಲ ಮಾರ್ಗಸೂಚಿಗಳು ಅಥವಾ ನಿಯಮಗಳನ್ನು ಸೇವಾ ನಿಬಂಧನೆಗಳಲ್ಲಿ ಈ ಮೂಲಕದ ಉಲ್ಲೇಖದಿಂದ ಸೇರಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ನಿಯಮಗಳು ಅಥವಾ ಮಾರ್ಗದರ್ಶಿಗಳು ಸೇವೆಯ ನಿರ್ದಿಷ್ಟ ಭಾಗಕ್ಕೆ ಸಂಬಂಧಿಸಿರುತ್ತವೆ ಮತ್ತು ಆ ಭಾಗಕ್ಕೆ ಸೇವಾ ನಿಬಂಧನೆಯನ್ನು ಅನ್ವಯಿಸುವುದಕ್ಕಾಗಿ ನಿಮಗೆ ಸಹಾಯ ಮಾಡುತ್ತವೆ, ಆದರೆ ಸೇವಾ ನಿಬಂಧನೆ ಮತ್ತು ಯಾವುದೇ ಮಾರ್ಗದರ್ಶಿ ಅಥವಾ ನಿಯಮದ ನಡುವೆ ವ್ಯತ್ಯಯಗಳಿದ್ದಲ್ಲಿ ಸೇವಾ ನಿಬಂಧನೆಯೇ ಅಂತಿಮವಾಗುತ್ತದೆ. ನಾವು ಕಾಲಕಾಲಕ್ಕೆ ವಿಭಿನ್ನ ಸೇವಾ ನಿಬಂಧನೆಗಳಿಂದ ಮೇಲ್ವಿಚಾರಣೆಗೊಳಪಡುವ ಸೇವೆಗಳನ್ನು ಕೂಡ ಒದಗಿಸಬಹುದು, ಇಂಥ ಸಂದರ್ಭದಲ್ಲಿ, ಸೇವಾ ನಿಬಂಧನೆಯು, ಒಂದು ವೇಳೆ ಅಭಿವ್ಯಕ್ತವಾಗಿ ಕೆಲವು ಸೇವೆಗಳನ್ನು ಹೊರತುಪಡಿಸಿದ ಪಕ್ಷದಲ್ಲಿ ಇಂಥ ಬೇರೆ ಸೇವೆಗಳಿಗೆ ಅಂಥ ಬೇರೆ ಸೇವಾ ನಿಬಂಧನೆಗಳಿಂದ ಹೊರತುಪಡಿಸಿರುವ ಮಟ್ಟಿಗೆ ಅನ್ವಯಿಸುವುದಿಲ್ಲ. Yahoo ಭಿನ್ನವಾದ ಸೇವಾ ನಿಬಂಧನೆಗಳಿಂದ ಮೇಲ್ವಿಚಾರಣೆಗೊಳಪಡುವ ಬೇರೆ ಸೇವೆಗಳನ್ನು ಕೂಡ ಕಾಲಕಾಲಕ್ಕೆ ಒದಗಿಸಬಹುದು. ಭಿನ್ನವಾದ ಸೇವಾ ನಿಬಂಧನೆಗಳಿಂದ ಮೇಲ್ವಿಚಾರಣೆಗೊಳಪಡುವ ಇಂಥ ಬೇರೆ ಸೇವೆಗಳಿಗೆ ಈ ಸೇವಾ ನಿಬಂಧನೆಗಳು ಅನ್ವಯಿಸುವುದಿಲ್ಲ.
 2. ಸೇವೆಯ ವಿವರಣೆ
  Yahoo ಸದ್ಯಕ್ಕೆ ಬಳಕೆದಾರರಿಗೆ ಹಲವಾರು ಸಂವಹನ ಸಾಧನಗಳು, ಆನ್ಲೈನ್ ಫೋರಂಗಳು, ಶಾಪಿಂಗ್ ಸೇವೆಗಳು, ವೈಯಕ್ತಿಕಗೊಳಿಸಿದ ವಿಷಯ ಮತ್ತು ತನ್ನ ಸ್ವತ್ತುಗಳ ನೆಟ್ವರ್ಕ್ ಮೂಲಕ ("ಸೇವೆ") ಬ್ರಾಂಡೆಡ್ ಪ್ರೋಗ್ರಾಮಿಂಗ್ ಸೇರಿದಂತೆ ಆನ್-ಲೈನ್ ಸಂಪನ್ಮೂಲಗಳ ಸಂಪದ್ಭರಿತ ಸಂಗ್ರಹಕ್ಕೆ ಪ್ರವೇಶ ಒದಗಿಸುತ್ತದೆ. ವರ್ಲ್ಡ್ ವೈಡ್ ವೆಬ್, ಮೊಬೈಲ್ ದೂರವಾಣಿ, ಅಥವಾ ಸಂವಹನ ಸೇವೆಗಳು (SMS(ಶಾರ್ಟ್ ಮೆಸೇಜ್ ಸರ್ವೀಸ್)ನಂಥವು) ಮತ್ತು /ಅಥವಾ ಬೇರೆ ಇಂಟರ್ನೆಟ್ ಅಥವಾ ದೂರಸಂಪರ್ಕ ಸೇವೆಗಳು ಅಥವಾ ಬೇರೆ ಪ್ರೋಟೊಕಾಲ್ಗಳ ಮೂಲಕ (WAP (ವೈರ್ಲೆಸ್ ಅಪ್ಲಿಕೇಷನ್ ಪ್ರೋಟೊಕಾಲ್) ನಂಥವು) (ರಚನಾತ್ಮಕವಾಗಿ, "ಚಾನೆಲ್ಗಳು") ಸೇರಿದಂತೆ, ಆದರೆ ಇವುಗಳಿಗೆ ಸೀಮಿತವಾಗದಂತೆ Yahoo ನ ತೀರ್ಮಾನದ ಅನುಸಾರ ಗೊತ್ತಿಲ್ಲದ, ಅಥವಾ ಇನ್ನು ಮುಂದೆ ಅಭಿವೃದ್ಧಿಗೊಳಿಸುವ ಹಲವಾರು ಮಾಧ್ಯಮಗಳ ಅಥವಾ ಸಾಧನಗಳ ಮೂಲಕ ಪ್ರವೇಶಿಸಬಹುದು ಅಥವಾ ಲಭ್ಯಗೊಳಿಸಿಕೊಳ್ಳಬಹುದು. ಸೇವೆಯಲ್ಲಿ Yahooನಿಂದ ಬರುವ ಕೆಲವು ಸಂವಹನಗಳು ಸೇರುತ್ತವೆ, ಅವುಗಳೆಂದರೆ, ಸೇವಾ ಪ್ರಕಟಣೆಗಳು, ಆಡಳಿತಾತ್ಮಕ ಸಂದೇಶಗಳಂಥವು. ಸುದ್ದಿಪತ್ರ, ಮತ್ತು ಈ ಸಂವಹನಗಳನ್ನು Yahoo ಸದಸ್ಯತ್ವದ ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ನೀವು ಅವುಗಳನ್ನು ಪಡೆದುಕೊಳ್ಳುವ ಆಯ್ಕೆಯನ್ನು ತ್ಯಜಿಸಲು ಸಾಧ್ಯವಿಲ್ಲ.

  ಅಭಿವ್ಯಕ್ತವಾಗಿ ಬೇರೆ ರೀತಿ ಹೇಳದೇ ಇದ್ದಲ್ಲಿ, ಹೊಸ Yahoo ಸ್ವತ್ತುಗಳ ಬಿಡುಗಡೆ ಸೇರಿದಂತೆ ಪ್ರಸಕ್ತ ಸೇವೆಯನ್ನು ವೃದ್ಧಿಸುವ ಅಥವಾ ಸಂಪದ್ಭರಿತಗೊಳಿಸುವ ಯಾವುದೇ ಹೊಸ ಲಕ್ಷಣಗಳು ಸೇವಾ ನಿಬಂಧನೆಗಳಿಗೆ ಒಳಪಟ್ಟಿರುತ್ತವೆ. ಸೇವೆಯನ್ನು "ಇರುವಂತೆ" ಒದಗಿಸಲಾಗುತ್ತದೆ ಹಾಗೂ ಸಮಯಾವಧಿಗಳು, ಅಳಿಸುವಿಕೆ, ತಪ್ಪು-ರವಾನೆ ಅಥವಾ ಯಾವುದೇ ಬಳಕೆದಾರ ಸಂವಹನಗಳನ್ನು ಶೇಖರಿಸುವಲ್ಲಿನ ವೈಫಲ್ಯ ಅಥವಾ ವೈಯಕ್ತೀಕರಣ ಸೆಟ್ಟಿಂಗ್ಸ್ಗೆ ಸಂಬಂಧಿಸಿ ಯಾವುದೇ ಜವಾಬ್ದಾರಿಯನ್ನೂ Yahoo ಹೊರುವುದಿಲ್ಲ ಎಂಬುದನ್ನು ನೀವು ತಿಳಿದಿದ್ದೀರಿ ಮತ್ತು ಒಪ್ಪುತ್ತೀರಿ.

  ಸೇವೆಯ ಬಳಕೆಗಾಗಿ ನೀವು ನೇರವಾಗಿ ಅಥವಾ ವೆಬ್ ಆಧರಿತ ವಿಷಯವನ್ನು ಪ್ರವೇಶಿಸುವ ಸಾಧನಗಳ ಮೂಲಕ ಪ್ರವೇಶವನ್ನು ಪಡೆಯತಕ್ಕದ್ದು ಮತ್ತು ಸೇವೆಗೆ ಇಂಥ ಪ್ರವೇಶಕ್ಕೆ ಸಂಬಂಧಿಸಿ ಯಾವುದೇ ಸೇವಾ ಶುಲ್ಕವನ್ನು ಅನ್ವಯಿಸುವ ಹಣಪಾವತಿ ನಿಬಂಧನೆಗಳಿಗೆ ಅನುಸಾರವಾಗಿ ಪಾವತಿ ಮಾಡಬೇಕು. ಇಂಥ ಶುಲ್ಕಗಳನ್ನು ಮತ್ತು ಹಣಪಾವತಿಯ ನಿಬಂಧನೆಗಳನ್ನು ಕಾಲಕಾಲಕ್ಕೆ ಬದಲಾಯಿಸಬಹುದು, ಮತ್ತು ಇಂಥ ಬದಲಾವಣೆಗಳನ್ನು ನಿಮಗೆ ಇಮೇಲ್ ಅಥವಾ ಸೂಚನೆಗಳು ಅಥವಾ ಸೇವೆಯ ಮೇಲಿನ ಸೂಚನೆಗಳಿಗೆ ಲಿಂಕ್ಗಳ ಮೂಲಕ ಅಥವಾ ಬೇರೆ ಸೂಕ್ತವಾದ ವಿಧಾನಗಳ ಮೂಲಕ ಸೂಚಿಸಲಾಗುತ್ತದೆ. ಕೆಲವು ಚಾನೆಲ್ಗಳ ಮೂಲಕ ಮಾತ್ರವೇ ಸೇವೆಯ ಕೆಲವು ಭಾಗಗಳು ಲಭ್ಯವಾಗುತ್ತವೆ ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ. ಸೇವೆಯನ್ನು ನೀವು ಪ್ರವೇಶಿಸುವುದಕ್ಕೆ ಅಥವಾ ಯಾವುದೇ ಚಾನೆಲ್ಗಳನ್ನು ಬಳಕೆ ಮಾಡುವುದಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ ಅಥವಾ ಬಾಧ್ಯಸ್ಥರೂ ಅಲ್ಲ ಎಂಬುದನ್ನು ಕೂಡ ನೀವು ಮಾನ್ಯ ಮಾಡುತ್ತೀರಿ.

  ಅಂತೆಯೇ, ಪ್ರಸ್ತುತವಾದ ಚಾನೆಲ್ ಬಳಕೆ ಮಾಡುವುದಕ್ಕೆ ನೀವು ಕಂಪ್ಯೂಟರ್ ಮತ್ತು ಮೋಡಂ, ಮೊಬೈಲ್ ಟೆಲಿಫೋನ್ ಅಥವಾ ಬೇರೆ ಸೂಕ್ತ ಪ್ರವೇಶ ಸಾಧನ ಸೇರಿದಂತೆ ಎಲ್ಲ ಸಲಕರಣೆಗಳನ್ನೂ ನೀವು ಒದಗಿಸತಕ್ಕದ್ದು ಹಾಗೂ ಅಂಥ ಚಾನೆಲ್ ಬಳಕೆಗೆ ಅನ್ವಯಿಸುವ ಯಾವುದೇ ಶುಲ್ಕಗಳನ್ನೂ ಪಾವತಿ ಮಾಡತಕ್ಕದ್ದು. ಏನೇ ಆದರೂ ಯಾವುದೇ ಚಾನೆಲ್ನಿಂದ ಸೇವೆಗೆ ಪ್ರವೇಶವನ್ನು ಪಡೆಯುವುದಕ್ಕಾಗಿ ನೀವು ಬಳಕೆ ಮಾಡುವ ಹಾರ್ಡ್ವೇರ್, ಸಾಫ್ಟ್ವೇರ್ ಅಥವಾ ಬೇರೆ ಸಲಕರಣೆಯ ಸೆಟಪ್, ಕನ್ಫಿಗರೇಷನ್ ಅಥವಾ ಹೊಂದಾಣಿಕೆಗೆ ನೀವು ಮಾತ್ರವೇ ಜವಾಬ್ದಾರರು ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ. ಇಡಿಯಾಗಿ ಅಥವಾ ಸೇವೆಯ ಯಾವುದೇ ಭಾಗಕ್ಕಾಗಿ ನಿಮ್ಮ ಹಾರ್ಡ್ವೇರ್, ಸಾಫ್ಟ್ವೇರ್ ಅಥವಾ ಬೇರೆ ಸಲಕರಣೆಯಲ್ಲಿ ಯಾವುದೇ ಬದಲಾವಣೆ ಅಗತ್ಯವಾದರೆ, ನೀವು ನಿಮ್ಮದೇ ಖರ್ಚಿನಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರಬೇಕು. ನಾವು ಸೇವೆಯಲ್ಲಿ ಇಂಥ ಯಾವುದೇ ಬದಲಾವಣೆಗಳು ಅಗತ್ಯವಾದರೆ ನಿಮಗೆ ಇಮೇಲ್ ಅಥವಾ ಸೂಚನೆಗಳು ಅಥವಾ ಸೇವೆಯ ಮೇಲಿನ ಸೂಚನೆಗಳಿಗೆ ಲಿಂಕ್ಗಳ ಮೂಲಕ ಅಥವಾ ಬೇರೆ ಸೂಕ್ತವಾದ ವಿಧಾನಗಳ ಮೂಲಕ ಮಾಹಿತಿಯನ್ನು ನೀಡುತ್ತೇವೆ.

  ಬೇರೆ ರೀತಿಯಲ್ಲಿ ಅಭಿವ್ಯಕ್ತವಾಗಿ ಹೇಳದೇ ಇದ್ದಲ್ಲಿ, ಸೇವೆಯ ಭಾಗವಾಗಿರುವ ಯಾವುದೇ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಅಥವಾ ಸಂಬಂಧಿತ ತೃತೀಯ ಪಕ್ಷದ ಬದ್ಧತೆಯ ಕೊಡುಗೆ ಎಂದು ಭಾವಿಸಬೇಕಾಗಿಲ್ಲ, ಆದರೆ ಇದು ನಿಮಗೆ ಒಂದು ಖರೀದಿ ಬೇಡಿಕೆ ನೀಡಲು ಆಹ್ವಾನವನ್ನೂ ಒಳಗೊಂಡಿರುತ್ತದೆ. ಸೇವೆಯ ಭಾಗವಾಗಿ ಲಭ್ಯಗೊಳಿಸಲಾಗಿರುವ ನಮ್ಮ ಅಥವಾ ಯಾವುದೇ ತೃತೀಯ ಪಕ್ಷದ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಗುತ್ತಿಗೆಗಳಿಗೆ ಸಂಬಂಧಿಸಿ, ನಾವು ಅಥವಾ ಪ್ರಸ್ತುತ ತೃತೀಯ ಪಕ್ಷವು ಅದಕ್ಕಾಗಿ ನಿಮ್ಮ ಖರೀದಿ ಬೇಡಿಕೆಯನ್ನು ಒಪ್ಪಿಕೊಂಡಾಗ ಅಥವಾ ನಿಮಗೆ ನಿಮ್ಮ ಖರೀದಿ ಬೇಡಿಕೆಗೆ ಸಂಬಂಧಿಸಿದ ಉತ್ಪನ್ನ ಅಥವಾ ಸೇವೆಯನ್ನು ಒದಗಿಸಿದಾಗ ಇವು ಇತ್ಯರ್ಥಗೊಂಡಿವೆ ಎಂದು ಭಾವಿಸಲಾಗುತ್ತದೆ.

  ಭಾರತೀಯ ಕಾನೂನಿನ ಅನುಸಾರ ಅಶ್ಲೀಲ ಎಂದು ಪರಿಗಣಿಸಿರುವ ವಿಷಯವನ್ನು Yahoo ನಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂಡಿಯಾ ಸೈಟ್, ಮತ್ತು ಬಳಕೆದಾರರನ್ನು Yahoo ನಲ್ಲಿ ಯಾವುದೇ ಅಶ್ಲೀಲ ವಿಷಯವನ್ನೂ ಪ್ರಕಟಿಸದಂತೆ ನಿಷೇಧಿಸಲಾಗಿದೆ. ಇಂಡಿಯಾ ಸೈಟ್ Yahoo ಇಂಡಿಯಾ, ಬಳಕೆದಾರರ ಸೇವಾ ನಿಬಂಧನೆಯ ಉಲ್ಲಂಘನೆಯಾಗಿರುವ ಯಾವುದೇ ಅಶ್ಲೀಲ ವಿಷಯವನ್ನು ಸಕಾಲಿಕವಾಗಿ ತೆಗೆಯಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಕಠಿಣ ಪರಿಶೀಲನೆಯನ್ನು ನಡೆಸುತ್ತದೆ, ಬಳಕೆದಾರರು ನಾವು ಇನ್ನೂ ತೆಗೆಯದೇ ಇರುವ ಕೆಲವು ಅಶ್ಲೀಲ ವಿಷಯವನ್ನು ಕೆಲವು ಸಲ ನೋಡಬೇಕಾಗಬಹುದು. ಸೇವೆಯನ್ನು ಬಳಕೆ ಮಾಡುವಾಗ ತಮಗೆ ಕಾಣಿಸುವ ಇಂಥ ಅಶ್ಲೀಲ/ಆಕ್ಷೇಪಾರ್ಹ ವಿಷಯವನ್ನು Yahoo ಗೆ ತಿಳಿಯುವಂತೆ ಮಾಡಲು ತಮ್ಮ ಅತ್ಯುತ್ತಮವಾದ ಪ್ರಯತ್ನವನ್ನು ಮಾಡಬೇಕು.
 3. ನಿಮ್ಮ ನೋಂದಣಿ ಬಾಧ್ಯತೆಗಳು
  ನಿಮ್ಮ ಸೇವಾ ಬಳಕೆಯನ್ನು ಪರಿಗಣಿಸಿ, ನೀವು ಇವುಗಳಿಗೆ ಒಪ್ಪುತ್ತೀರಿ:
  1. ಸೇವೆಯ ನೋಂದಣಿ ನಮೂನೆಯಲ್ಲಿ ನಿಮ್ಮನ್ನು ಪ್ರೇರೇಪಿಸಿರುವಂತೆ ನಿಮ್ಮ ಬಗ್ಗೆ ಸತ್ಯವಾದ, ನಿಖರವಾದ, ಪ್ರಸ್ತುತವಾದ ಮತ್ತು ಪರಿಪೂರ್ಣವಾದ ಮಾಹಿತಿಯನ್ನು ನೀಡುವುದು (ಇಂಥ ಮಾಹಿತಿಯು "ನೋಂದಣಿ ದತ್ತಾಂಶ"ವಾಗಿರುತ್ತದೆ) ಹಾಗೂ
  2. ನೋಂದಣಿ ದತ್ತಾಂಶವನ್ನು ಸತ್ಯಯುತವಾಗಿ, ನಿಖರವಾಗಿ, ಪ್ರಸ್ತುತವಾಗಿ ಹಾಗೂ ಪರಿಪೂರ್ಣವಾಗಿ ಇರುವಂತೆ ನೋಡಿಕೊಳ್ಳುವುದು ಮತ್ತು ಅದನ್ನು ಸಕಾಲಿಕವಾಗಿ ಪರಿಷ್ಕರಿಸುವುದು. ನೀವು ಸತ್ಯಯುತವಲ್ಲದ, ನಿಖರವಲ್ಲದ, ಪ್ರಸ್ತುತವಲ್ಲದ ಅಥವಾ ಪರಿಪೂರ್ಣವಲ್ಲದ ಮಾಹಿತಿಯನ್ನು ಒದಗಿಸಿದರೆ, ಅಥವಾ ಇಂಥ ಮಾಹಿತಿಯು ಸತ್ಯಯುತವಲ್ಲ, ನಿಖರವಲ್ಲ, ಪ್ರಸ್ತುತವಲ್ಲ ಅಥವಾ ಪರಿಪೂರ್ಣವಲ್ಲ ಎಂದು ನಂಬಲು Yahoo ಸಕಾರಣ ಅಂಶಗಳನ್ನು ಹೊಂದಿದ್ದರೆ, Yahoo ನಿಮ್ಮ ಖಾತೆಯನ್ನು ರದ್ದುಗೊಳಿಸುವ ಅಥವಾ ನಿಲ್ಲಿಸುವ ಮತ್ತು ಎಲ್ಲ ಪ್ರಸಕ್ತ ಮತ್ತು ಭವಿಷ್ಯದ ಸೇವಾ (ಅಥವಾ ಅಲ್ಲಿನ ಯಾವುದೇ ಭಾಗ) ಬಳಕೆಯನ್ನು ನಿಮಗೆ ಬಾಧ್ಯತೆಯಾಗದ ರೀತಿಯಲ್ಲಿ ತಿರಸ್ಕರಿಸುವ ಹಕ್ಕನ್ನು ಹೊಂದಿದೆ. ನಾವು ನಿರ್ದಿಷ್ಟವಾಗಿ ಮಕ್ಕಳು ಸೇರಿದಂತೆ ಎಲ್ಲ ಬಳಕೆದಾರರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಚಿಂತೆಯನ್ನು ಹೊಂದಿದ್ದೇವೆ. ಆದರೆ, ವಿಸ್ತಾರವಾದ ಬಳಕೆದಾರ ಸಮುದಾಯಕ್ಕೆ ಖುಷಿಕೊಡುವುದಕ್ಕಾಗಿ ಸೇವೆಯನ್ನು ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ದಯವಿಟ್ಟು ನೆನಪಿಡಿ. ಇದೇ ರೀತಿ, ನೀವು ಹೆತ್ತವರು ಅಥವಾ ಕಾನೂನುಬದ್ಧ ಪೋಷಕರಾಗಿದ್ದಲ್ಲಿ, ಯಾವುದೇ ಸೇವೆಗಳು ಮತ್ತು/ಅಥವಾ ವಿಷಯ (ಕೆಳಗಿನ ವಿಭಾಗ 6ರಲ್ಲಿ ವ್ಯಾಖ್ಯಾನಿಸಿರುವಂತೆ) ನಿಮ್ಮ ಮಗುವಿಗೆ ಸೂಕ್ತವೇ ಎಂಬುದನ್ನು ತೀರ್ಮಾನಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಅಂತೆಯೇ, ನೀವು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ನಿಮಗೆ ಯಾವುದೇ ಸೇವೆಗಳು ಮತ್ತು/ಅಥವಾ ವಿಷಯ ಸೂಕ್ತವೇ ಎಂಬುದನ್ನು ತಿಳಿಯಲು ನಿಮ್ಮ ಹೆತ್ತವರು ಅಥವಾ ಕಾನೂನುಬದ್ಧ ಪೋಷಕರನ್ನು ಸಂಪರ್ಕಿಸಿ.
  ಪೂರ್ವಸಿದ್ಧವಾಗಿರುವುದನ್ನು ಪರಿಗಣಿಸದೇ, ನೀವು ಬಳಕೆದಾರರಾಗಿ ನೋಂದಣಿಗೊಳ್ಳದಿರುವಾಗಲೇ ಸೇವೆಯ ಕೆಲವು ಭಾಗಗಳಿಗೆ ನಾವು ಪ್ರವೇಶವನ್ನು ಒದಗಿಸುತ್ತೇವೆ. ಆ ಸಂದರ್ಭದಲ್ಲಿ, ನಿಮ್ಮ ಗುರುತು ನಾವು ಸೂಕ್ತವೆಂದು ಭಾವಿಸುವ ಬೇರೆ ವಿಧಗಳ ಗುರುತಿಸುವಿಕೆಗಳನ್ನು ಆಧರಿಸಿರುತ್ತದೆ. ಸೂಕ್ತವಾದ ಸಂದರ್ಭಗಳಲ್ಲಿ, ನಿಮ್ಮ ಮೊಬೈಲ್ ದೂರವಾಣಿಯನ್ನು ಗುರುತಿಸುವ ದತ್ತಾಂಶವನ್ನು ಅಥವಾ ನಿಮ್ಮ ನೆಟ್ವರ್ಕ್ ಆಪರೇಟರ್ ಒದಗಿಸಿರುವ ಸಂವಹನಗಳ ಚಂದಾದಾರಿಕೆ ಸಂಖ್ಯೆಯನ್ನು ಆಧರಿಸಿರಬಹುದು. ಇಂಥ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ನಮಗೆ ಬಹಿರಂಗಗೊಳಿಸಬಹುದು ಮತ್ತು ಸೇವಾ ನಿಬಂಧನೆಯೊಂದಿಗೆ ಬಳಕೆ ಮಾಡಬಹುದು ಎಂಬುದಕ್ಕೆ ನೀವು ಒಪ್ಪುತ್ತೀರಿ.
 4. YAHOO ಖಾಸಗಿತನದ ನೀತಿ
  ನೋಂದಣಿ ದತ್ತಾಂಶ ಮತ್ತು ನಿಮ್ಮ ಬಗೆಗಿನ ಕೆಲವು ಬೇರೆ ಮಾಹಿತಿಯು ನಮ್ಮ ಖಾಸಗಿತನದ ನೀತಿಗೆ ಒಳಪಟ್ಟಿರುತ್ತದೆ ಮತ್ತು ಇದನ್ನು ಸೇವಾ ನಿಬಂಧನೆಯಲ್ಲಿ ಉಲ್ಲೇಖಿಸಲಾಗಿದೆ ಮತ್ತು ಇದು ಸೇವಾ ನಿಬಂಧನೆಯ ಭಾಗವೂ ಆಗಿದೆ. ನಿಮ್ಮ ಬಗೆಗಿನ ನೋಂದಣಿ ದತ್ತಾಂಶವನ್ನು ಮತ್ತು ಇಂಥ ಬೇರೆ ಮಾಹಿತಿಯನ್ನು ಕೊಡುವ ಅಥವಾ ಲಭ್ಯಗೊಳಿಸುವ ಮೂಲಕ, ಖಾಸಗಿತನ ನೀತಿಯಲ್ಲಿ ಹೇಳಿದ ಪ್ರಕಾರ ಇಂಥ ಮಾಹಿಯನ್ನು ನಾವು ಬಳಕೆ ಮಾಡಬಹುದು ಅಥವಾ ತೃತೀಯ ಪಕ್ಷಗಳಿಗೆ ಬಿಡುಗಡೆ ಮಾಡಬಹುದು ಎಂಬುದನ್ನು ನೀವು ಒಪ್ಪುತ್ತೀರಿ ಮತ್ತು ಮಾನ್ಯ ಮಾಡುತ್ತೀರಿ ಮತ್ತು ನೀವು ಇಂಥ ಬಳಕೆ ಹಾಗೂ ಬಹಿರಂಗಪಡಿಸುವಿಕೆಗೆ ನಿಮ್ಮ ಸಮ್ಮತಿಯನ್ನು ನೀಡುತ್ತೀರಿ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಪೂರ್ತಿ ಖಾಸಗಿತನ ನೀತಿಯನ್ನು ಇಲ್ಲಿ ನೋಡಿರಿ https://policies.yahoo.com/in/en/yahoo/privacy/index.htm. ಸೇವೆಯನ್ನು ಬಳಕೆ ಮಾಡುವ ಮೂಲಕ ನೀವು ಈ ಮಾಹಿತಿಯ ಸಂಗ್ರಹಣೆ ಮತ್ತು ಬಳಕೆಗೆ (ಖಾಸಗಿತನ ನೀತಿಯಲ್ಲಿ ನಿಗದಿಪಡಿಸಿರುವ ಪ್ರಕಾರ), ಈ ಮಾಹಿತಿಯನ್ನು ಯುನೈಟೆಡ್ ಸ್ಟೇಟ್ಸ್ ಮತ್ತು/ಅಥವಾ ಬೇರೆ ದೇಶಗಳಿಗೆ ಶೇಖರಣೆ, ಸಂಸ್ಕರಣೆ ಮತ್ತು Yahoo! ಹಾಗೂ ಅದರ ಸಹಯೋಗಿಗಳ ಬಳಕೆಗಾಗಿ ವರ್ಗಾವಣೆ ಮಾಡುವುದೂ ಸೇರಿದಂತೆ, ಸಮ್ಮತಿಯನ್ನು ನೀಡಿರುವುದಾಗಿ ಒಪ್ಪಿಕೊಳ್ಳುತ್ತೀರಿ.
 5. ಸದಸ್ಯರ ಖಾತೆ, ಪಾಸ್ವರ್ಡ್ ಮತ್ತು ಸುರಕ್ಷತೆ
  ಸೇವೆಯ ನೋಂದಣಿ ಪ್ರಕ್ರಿಯೆಯನ್ನು ಮುಗಿಸಿದ ನಂತರ ನೀವು ಪಾಸ್ವರ್ಡ್ ಹಾಗೂ ಖಾತೆಯ ಹುದ್ದೆಯನ್ನು ಪಡೆಯುತ್ತೀರಿ. ನೀವು ಪಾಸ್ವರ್ಡ್ ಹಾಗೂ ಖಾತೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಜವಾಬ್ದಾರರಾಗಿದ್ದೀರಿ, ಮತ್ತು ನಿಮ್ಮ ಪಾಸ್ವರ್ಡ್ ಅಥವಾ ಖಾತೆಯ ಅಡಿಯಲ್ಲಿ ಉಂಟಾಗುವ ಎಲ್ಲ ಚಟುವಟಿಕೆಗಳಿಗೆ ಜವಾಬ್ದಾರರಾಗಿದ್ದೀರಿ. ನೀವು ಮುಂದಿನವುಗಳಿಗೆ ಒಪ್ಪುತ್ತೀರಿ (a) ನಿಮ್ಮ ಪಾಸ್ವರ್ಡ್ ಅಥವಾ ಖಾತೆಯ ಯಾವುದೇ ಅನಧಿಕೃತ ಬಳಕೆ ಅಥವಾ ಸುರಕ್ಷತೆಯ ಉಲ್ಲಂಘನೆ ಕುರಿತು Yahoo ಗೆ ತಕ್ಷಣವೇ ಸೂಚನೆ ನೀಡುವುದು, ಮತ್ತು (b) ಪ್ರತಿ ಅವಧಿಯ ಅಂತ್ಯದಲ್ಲಿ ನೀವು ನಿಮ್ಮ ಖಾತೆಯಿಂದ ನಿರ್ಗಮಿಸುತ್ತೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು. ಈ ವಿಭಾಗ 5ರೊಂದಿಗೆ ಹೊಂದಿಕೊಳ್ಳಲು ನಿಮ್ಮ ವೈಫಲ್ಯದಿಂದಾಗಿ ಉಂಟಾಗುವ ಯಾವುದೇ ನಷ್ಟಕ್ಕೆ ಅಥವಾ ಹಾನಿಗೆ Yahoo ಬಾಧ್ಯಸ್ಥವಾಗುವುದಿಲ್ಲ ಅಥವಾ ಈ ರೀತಿ ಬಾಧ್ಯಸ್ಥಗೊಳಿಸುವಂತಿಲ್ಲ.
 6. ಸದಸ್ಯರ ನಡವಳಿಕೆ
  ಸಾರ್ವಜನಿಕವಾಗಿ ಪ್ರಕಟಿಸಿರುವ ಅಥವಾ ಖಾಸಗಿಯಾಗಿ ವರ್ಗಾಯಿಸಿರುವ, ಎಲ್ಲ ಮಾಹಿತಿ, ದತ್ತಾಂಶ, ಪಠ್ಯ, ಸಾಫ್ಟ್ವೇರ್, ಸಂಗೀತ, ಧ್ವನಿ, ಫೋಟೊಗ್ರಾಫ್ಗಳು, ಗ್ರಾಫಿಕ್ಸ್, ವೀಡಿಯೋ, ಸಂದೇಶಗಳು ಅಥವಾ ಬೇರೆ ವಿಷಯಕಗಳಿಗೆ ("ವಿಷಯ") ಅಂಥ ವಿಷಯವು ಯಾವ ವ್ಯಕ್ತಿಯಿಂದ ಬಂದಿದೆಯೋ ಆ ವ್ಯಕ್ತಿಯೇ ಜವಾಬ್ದಾರರಾಗಿರುತ್ತಾರೆ ಎಂಬುದನ್ನು ನೀವು ತಿಳಿದಿದ್ದೀರಿ ಮತ್ತು ಮಾನ್ಯ ಮಾಡುತ್ತೀರಿ. ಇದರ ಅರ್ಥವೇನೆಂದರೆ, ನೀವು ಅಪ್ಲೋಡ್ ಮಾಡುವ, ಪ್ರಕಟಿಸುವ, ಇಮೇಲ್ ಮಾಡುವ ಅಥವಾ ಬೇರೆ ರೀತಿಯಲ್ಲಿ ಸೇವೆಯ ಮೂಲಕ ಬೇರೆ ರೀತಿಯಲ್ಲಿ ವರ್ಗಾವಣೆ ಮಾಡುವ ಎಲ್ಲ ವಿಷಯಕ್ಕೆ Yahoo ಸೇವೆಯ ಮೂಲಕ ಪ್ರಕಟಿಸಿರುವ ವಿಷಯವನ್ನು ನಿಯಂತ್ರಣ ಮಾಡುವುದಿಲ್ಲ, ಮತ್ತು ಹೀಗಿದ್ದಲ್ಲಿ, ಅಂಥ ವಿಷಯದ ನಿಖರತೆ, ಸಮಗ್ರತೆ ಅಥವಾ ಗುಣಮಟ್ಟದ ಖಾತರಿಯನ್ನು ನೀಡುವುದಿಲ್ಲ. ಸೇವೆಯನ್ನು ಬಳಕೆ ಮಾಡುವ ಮೂಲಕ ಉಲ್ಲಂಘನಾತ್ಮಕ, ಅಶ್ಲೀಲ ಅಥವಾ ಆಕ್ಷೇಪಾರ್ಹ ವಿಷಯಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ ಎಂಬುದನ್ನು ನೀವು ಒಪ್ಪುತ್ತೀರಿ. ನಾವು ಅಥವಾ ನಮಗೆ ಪರವಾನಗಿ ನೀಡುವವರು, ಸರಬರಾಜುದಾರರು, ಮಾರಾಟಗಾರರು, ಮೂಲ ಕಂಪನಿ, ಹಿಡುವಳಿ ಕಂಪನಿ, ಅಂಗಸಂಸ್ಥೆ ಅಥವಾ ಸಂಬಂಧಿತ ಕಂಪನಿಗಳು, ಸದಸ್ಯರು, ಅಧಿಕಾರಿಗಳು, ಏಜೆಂಟರು ಅಥವಾ ಉದ್ಯೋಗಿಗಳು ಯಾವುದೇ ಸಂದರ್ಭದಲ್ಲೂ, ಯಾವುದೇ ರೀತಿಯಲ್ಲಿ ಉಲ್ಲಂಘನಾತ್ಮಕ, ಅಶ್ಲೀಲ ಅಥವಾ ಆಕ್ಷೇಪಾರ್ಹ ವಿಷಯಕ್ಕೆ ಒಡ್ಡುವಿಕೆ, ಯಾವುದೇ ವಿಷಯದಲ್ಲಿ ಯಾವುದೇ ದೋಷಗಳು ಅಥವಾ ಬಿಟ್ಟುಹೋಗಿರುವ ವಿಷಯಗಳು, ಅಥವಾ ಯಾವುದೇ ಪ್ರಕಟಿತ, ಇಮೇಲ್ ಮಾಡಿರುವ ಅಥವಾ ಬೇರೆ ರೀತಿಯಲ್ಲಿ ವರ್ಗಾವಣೆ ಮಾಡಿರುವ ವಿಷಯದ ಬಳಕೆಯ ಪರಿಣಾಮವಾಗಿ ಉಂಟಾದ ಯಾವುದೇ ಬಗೆಯ ಯಾವುದೇ ನಷ್ಟ ಅಥವಾ ಹಾನಿ ಸೇರಿದಂತೆ ಆದರೆ ಇದಷ್ಟೇ ಸೀಮಿತವಾಗದಂತೆ, ಯಾವುದೇ ವಿಷಯಕ್ಕೆ ಬಾಧ್ಯಸ್ಥರಾಗಿರುವುದಿಲ್ಲ.
  ನೀವು ಸೇವೆಯನ್ನು ಇವುಗಳಿಗಾಗಿ ಬಳಕೆ ಮಾಡದೇ ಇರಲು ಒಪ್ಪುತ್ತೀರಿ:
  1. ಎಲ್ಲ ಪ್ರಸ್ತುತವೆನಿಸುವ ಕಾನೂನು ವ್ಯಾಪ್ತಿಗಳಲ್ಲಿ ಕಾನೂನುಬಾಹಿರ, ಹಾನಿಕಾರಕ, ಬೆದರಿಕೆ ಒಡ್ಡುವ, ಬಯ್ಗುಳ ಒಳಗೊಂಡಿರುವ, ಶೋಷಣೆ ಮಾಡುವ, ನ್ಯಾಯವಿರುದ್ಧವಾದ, ಮಾನನಷ್ಟ ಉಂಟುಮಾಡುವ, ಅವಾಚ್ಯವಾದ, ಅಶ್ಲೀಲವಾದ, ಮಾನಹಾನಿಕರ, ಇತರರ ಖಾಸಗಿತನವನ್ನು ಉಲ್ಲಂಘಿಸುವ, ದ್ವೇಷದಿಂದ ಕೂಡಿರುವ, ಅಥವಾ ಜನಾಂಗೀಯವಾಗಿ, ಬುಡ್ಡಕಟ್ಟಿನಿಂದ ಅಥವಾ ಬೇರೆ ರೀತಿಯಲ್ಲಿ ಆಕ್ಷೇಪಾರ್ಹವಾದುದು ಅಥವಾ ಸಾರ್ವಜನಿಕ ಹಿತಾಸಕ್ತಿ, ಸಾರ್ವಜನಿಕ ಸುವ್ಯವಸ್ಥೆ ಅಥವಾ ರಾಷ್ಟ್ರೀಯ ಸೌಹಾರ್ದತೆಗೆ ವಿರುದ್ಧವಾದುದು;
  2. ಯಾವುದೇ ರೀತಿಯಲ್ಲಿ ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕವಾದುದು;
  3. Yahoo! ಅಧಿಕಾರಿ,ಫೋರಂ ಮುಖ್ಯಸ್ಥ, ಮಾರ್ಗದರ್ಶಿ ಅಥವಾ ಆತಿಥೇಯರ ಕುರಿತು ಸೇರಿದಂತೆ, ಆದರೆ ಇದಕ್ಕೆ ಸೀಮಿತವಲ್ಲದಂತೆ ಮೂರ್ತೀಕರಿಸುವುದು, ಅಥವಾ ಸುಳ್ಳು ಹೇಳಿಕೆ ನೀಡುವುದು ಅಥವಾ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ಬೇರೆ ರೀತಿಯಲ್ಲಿ ತಪ್ಪಾಗಿ ಪ್ರತಿನಿಧಿಸುವುದು;
  4. ಬದಲಿಸುವುದಕ್ಕಾಗಿ ಮತ್ತು/ಅಥವಾ ಸೇವೆಯ ಮೂಲಕ ರವಾನಿಸಿದ ಯಾವುದೇ ವಿಷಯದ ಮೂಲವನ್ನು ಮರೆಮಾಚುವ ಉದ್ದೇಶದಿಂದ ವಂಚನೆಯಿಂದ ತಲೆಬರಹಗಳನ್ನು ರಚಿಸುವುದು ಅಥವಾ ಗುರುತಿಸುವ ಮಾಹಿತಿಯನ್ನು ಬೇರೆ ರೀತಿ ತಿರುಚುವುದು;
  5. ಯಾವುದೇ ಕಾನೂನು ಅಥವಾ ಕರಾರಿನ ಅಥವಾ ಸ್ವತ್ತನ್ನು ಇಟ್ಟುಕೊಳ್ಳುವ ಸಂಬಂಧಗಳ (ಔದ್ಯೋಗಿಕ ಸಂಬಂಧಗಳ ಭಾಗವಾಗಿ ಅಥವಾ ಬಹಿರಂಗ ನಿಷೇಧ ಒಪ್ಪಂದಗಳ ಭಾಗವಾಗಿರುವ ಒಳಗಿನ ಮಾಹಿತಿ, ಮಾಲಿಕತ್ವ ಮತ್ತು ಗೌಪ್ಯತಾ ಮಾಹಿತಿಯಂಥದ್ದು) ಅಡಿಯಲ್ಲಿ ಯಾವುದೇ ವಿಷಯವನ್ನು ಬೇರೆ ರೀತಿಯಲ್ಲಿ ಅಪ್ಲೋಡ್ ಮಾಡುವ, ಪ್ರಕಟಿಸುವ ಅಥವಾ ಬೇರೆ ರೀತಿಯಲ್ಲಿ ವರ್ಗಾಯಿಸುವ ಹಕ್ಕು ನಿಮಗೆ ಇರುವುದಿಲ್ಲ
  6. ಯಾವುದೇ ಪಕ್ಷದ ಪೇಟೆಂಟ್, ಟ್ರೇಡ್ಮಾರ್ಕ್, ವ್ಯಾಪಾರ ರಹಸ್ಯ, ಕೃತಿಸ್ವಾಮ್ಯ ಅಥವಾ ಮಾಲಿಕತ್ವದ ಹಕ್ಕುಗಳನ್ನು (“ಹಕ್ಕುಗಳು”) ಉಲ್ಲಂಘಿಸುವ ಯಾವುದೇ ವಿಷಯವನ್ನು ಅಪ್ಲೋಡ್ ಮಾಡುವುದು, ಪ್ರಕಟಿಸುವುದು, ಇಮೇಲ್ ಮಾಡುವುದು ಅಥವಾ ಬೇರೆ ರೀತಿಯಲ್ಲಿ ವರ್ಗಾವಣೆ ಮಾಡುವುದು;
  7. ಯಾವುದೇ ಕೋರಿಕೆಯಿಲ್ಲದ ಅಥವಾ ಅನಧಿಕೃತ ಜಾಹೀರಾತನ್ನು, ಜಾಹೀರಾತು ವಿಷಯಕಗಳನ್ನು, “ಜಂಕ್ ಮೇಲ್ಗಳನ್ನು”, “ಸ್ಪಾಮ್”, “ಸರಪಣಿ ಪತ್ರಗಳು”, “ಪಿರಾಮಿಡ್ ಯೋಜನೆಗಳು” ಅಥವಾ ಯಾವುದೇ ಬೇರೆ ರೂಪದ ಕೋರಿಕೆ, ಆ ಉದ್ದೇಶಗಳಿಗಾಗಿ ನಿಗದಿಪಡಿಸಿರುವ ಆ ಪ್ರದೇಶಗಳಲ್ಲಿರುವುದನ್ನು ಹೊರತುಪಡಿಸಿ (ಶಾಪಿಂಗ್ ರೂಮ್ಗಳಂಥವು) ಅಪ್ಲೋಡ್ ಮಾಡುವುದು, ಸಲ್ಲಿಸುವುದು, ಇಮೇಲ್ ಮಾಡುವುದು, ಅಥವಾ ಬೇರೆ ರೀತಿಯಲ್ಲಿ ವರ್ಗಾವಣೆ ಮಾಡುವುದು;
  8. ಯಾವುದೇ ಕಂಪ್ಯೂಟರ್ ಸಾಫ್ಟ್ವೇರ್ ಅಥವಾ ಹಾರ್ಡ್ವೇರ್ ಅಥವಾ ದೂರವಾಣಿ ಸಲಕರಣೆಗಳ ಕಾರ್ಯನಿರ್ವಹಣೆಗೆ ಅಡಚಣೆಮಾಡುವ, ನಾಶಗೊಳಿಸುವ ಅಥವಾ ಕೆಲಸ ಸೀಮಿತಗೊಳಿಸುವ ಸಾಫ್ಟ್ವೇರ್ ವೈರಸ್ಗಳನ್ನು ಅಥವಾ ಬೇರೆ ಯಾವುದೇ ಕಂಪ್ಯೂಟರ್ ಕೋಡ್, ಫೈಲ್ಗಳು ಅಥವಾ ಪ್ರೋಗ್ರಾಂಗಳನ್ನು ಹೊಂದಿರುವ ಯಾವುದೇ ವಿಷಯವನ್ನು ಅಪ್ಲೋಡ್, ಪ್ರಕಟಣೆ,ಇಮೇಲ್ ಅಥವಾ ಬೇರೆ ರೀತಿ ಲಭ್ಯಗೊಳಿಸುವುದು ಅಥವಾ ವರ್ಗಾವಣೆ ಮಾಡುವುದು;
  9. ಸಂಭಾಷಣೆಯ ಸಹಜ ಹರಿವಿಗೆ ಅಡ್ಡಿಯುಂಟುಮಾಡುವುದು, ಇದು ಸ್ಕ್ರೀನ್ ಒಂದು, ಸೇವೆಯ ಬೇರೆ ಬಳಕೆದಾರರಿಗಿಂತ ವೇಗವಾಗಿ ಟೈಪ್ ಮಾಡಲು ಸಾಧ್ಯವಾಗುವಂತೆ “ಸ್ಕ್ರಾಲ್” ಮಾಡುವುದು, ಅಥವಾ ನೈಜ ಸಮಯದ ವಿನಿಮಯಗಳಲ್ಲಿ ತೊಡಗಿಕೊಳ್ಳುವ ಅಥವಾ ನಾವು ಒದಗಿಸಿದಂತೆ ಸೇವೆಯನ್ನು ಇರುವಂತೆ ಆಧಾರದಮೇಲೆ ಬಳಕೆ ಮಾಡುವ ಬೇರೆ ಬಳಕೆದಾರರ ಸಾಮರ್ಥ್ಯದ ಮೇಲೆ ನೇತ್ಯಾತ್ಮಕವಾಗಿ ಪರಿಣಾಮ ಬೀರುವುದು;
  10. ಸೇವೆಗೆ ಸಂಪರ್ಕಗೊಂಡಿರುವ ಸೇವೆ ಅಥವಾ ಸರ್ವರ್ಗಳ ಅಥವಾ ನೆಟ್ವರ್ಕ್ಗಳ ಜೊತೆ ಹಸ್ತಕ್ಷೇಪ ನಡೆಸುವ ಅಥವಾ ಅಡಚಣೆ ಉಂಟುಮಾಡುವ, ಅಥವಾ ಸೇವೆಗೆ ಸಂಪರ್ಕಿತಗೊಂಡಿರುವ ನೆಟ್ವರ್ಕ್ಗಳ ಯಾವುದೇ ಅಗತ್ಯಗಳನ್ನು, ಪ್ರಕ್ರಿಯೆಗಳನ್ನು, ನೀತಿಗಳನ್ನು ಅಥವಾ ನಿಯಮಾವಳಿಗಳನ್ನು ಪೂರೈಸದೇ ಇರುವುದು;
  11. ಭಾರತೀಯ ಸೆಕ್ಯುರಿಟಿಗಳ ವಿನಿಮಯ ನಿಯಂತ್ರಣ ಮತ್ತು ಬೇರೆ ನಿಯಂತ್ರಣ ಪ್ರಾಧಿಕಾರಗಳು ರಚಿಸಿರುವ ಅನ್ವಯಿಸುವ ಯಾವುದೇ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕಾನೂನನ್ನು, ಭಾರತೀಯ ಸೆಕ್ಯುರಿಟಿಗಳ ವಿನಿಮಯದ ನಿಯಮಗಳು ಮತ್ತು ಕಾನೂನಿನ ಬಲವನ್ನು ಹೊಂದಿರುವ ಯಾವುದೇ ನಿಯಮಾವಳಿಗಳನ್ನು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶರಹಿತವಾಗಿ ಉಲ್ಲಂಘಿಸುವುದು;
  12. ಇತರರಿಗೆ "ತೊಂದರೆ ಕೊಡುವುದು" ಅಥವಾ ಬೇರೆ ರೀತಿಯಲ್ಲಿ ಶೋಷಣೆ ಮಾಡುವುದು;
  13. ಸೇವೆಗಳ ಮೇಲಣ ಅಥವಾ ಬೇರೆ ರೀತಿಯಲ್ಲಿನ ಉತ್ಪನ್ನಗಳ ಮತ್ತು ಸೇವೆಗಳ ಯಾವುದೇ ತೃತೀಯ ಪಕ್ಷದ ಸೇವೆ ಒದಗಿಸುವವರಿಗೆ ಸಂಬಂಧಿಸಿದ ವಂಚನೆಯ ಅಥವಾ ಕಾನೂನುಬಾಹಿರವಾದ ಕೃತ್ಯವನ್ನು ಎಸಗುವುದು
  14. ಮೇಲಿನ a. ನಿಂದ m. ವರೆಗಿನ ಪ್ಯಾರಾಗಳಲ್ಲಿ ಹೇಳಲಾದ ನಿಷೇಧಿತ ನಡವಳಿಕೆ ಮತ್ತು ಚಟುವಟಿಕೆಗಳ ಸಂಬಂಧದಲ್ಲಿ ಬೇರೆ ಯಾವುದೇ ಬಳಕೆದಾರರ ಬಗ್ಗೆ ವೈಯಕ್ತಿಕ ದತ್ತಾಂಶವನ್ನು ಸಂಗ್ರಹಿಸುವುದು ಅಥವಾ ಶೇಖರಿಸುವುದು.
  ವಿಷಯವನ್ನು Yahoo ಪೂರ್ವ ತಪಾಸಣೆ ಮಾಡಲಾಗದು ಮತ್ತು ಮಾಡುವುದಿಲ್ಲ, ಆದರೆ Yahoo ಹಾಗೂ ಅದರ ನಿಯೋಜಿತರು ನಮ್ಮ ತೀರ್ಮಾನದ ಅನುಸಾರ ಸೇವೆಯ ಮೂಲಕ ಲಭ್ಯವಿರುವ ಯಾವುದೇ ವಿಷಯವನ್ನು ತಿರಸ್ಕರಿಸುವ ಅಥವಾ ಸರಿಸುವ ಹಕ್ಕನ್ನು (ಆದರೆ ಬಾಧ್ಯತೆಯಲ್ಲ) ಹೊಂದಿರುತ್ತಾರೆ ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ. ಮೇಲೆ ಹೇಳಿರುವುದನ್ನು ಸೀಮಿತಗೊಳಿಸದೇ Yahoo ಹಾಗೂ ಅದರ ನಿಯೋಜಿತರು ಅತ್ಯುತ್ತಮ ನಂಬುಗೆಯಲ್ಲಿ ಸೇವಾ ನಿಬಂಧನೆಯನ್ನು ಉಲ್ಲಂಘಿಸುತ್ತದೆ ಎಂದೆನಿಸುವ ಅಥವಾ ಯಾವುದೇ ಬೌದ್ಧಿಕ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿತವಾಗಿದೆ ಅಥವಾ ಕೇವಲ ನಮ್ಮ ಅಭಿಪ್ರಾಯದಲ್ಲಿ ಬೇರೆ ರೀತಿ ಆಕ್ಷೇಪಾರ್ಹವಾಗಿದೆ ಎಂದೆನಿಸುವ ಯಾವುದೇ ವಿಷಯವನ್ನು ತೆಗೆಯುವ ಹಕ್ಕನ್ನು ಹೊಂದಿರುತ್ತಾರೆ, ಹೀಗೆ ತೆಗೆಯುವುದರಿಂದಾಗಿ ನಿಮಗೆ ಉಂಟಾಗುವ ನಷ್ಟ ಅಥವಾ ಹಾನಿ ಸಂಬಂಧಿಸಿದ ಯಾವುದೇ ಬಾಧ್ಯತೆಯೂ ಇರುವುದಿಲ್ಲ. ನೀವು ಯಾವುದೇ ವಿಷಯದ ಬಳಕೆಗೆ ಸಂಬಂಧಿಸಿ, ನಿಖರತೆ, ಪರಿಪೂರ್ಣತೆ, ಅಥವಾ ಅಂಥ ವಿಷಯದ ಉಪಯುಕ್ತತೆಯೂ ಸೇರಿದಂತೆ ಸಂಬಂಧಿಸಿರುವ ಎಲ್ಲ ಅಪಾಯಗಳನ್ನು ಎದುರಿಸಲು, ಮೌಲ್ಯಮಾಪನ ಮಾಡಲು ಒಪ್ಪುತ್ತೀರಿ. ಈ ನಿಟ್ಟಿನಲ್ಲಿ, Yahoo ದಲ್ಲಿನ ಮಾಹಿತಿ ಸೇರಿದಂತೆ, ಇದೊಂದಕ್ಕೆ ಸೀಮಿತಗೊಳ್ಳದಂತೆ Yahoo ರಚಿಸಿರುವ ಅಥವಾ Yahoo ಗೆ ಸಲ್ಲಿಸಿರುವ ಯಾವುದೇ ವಿಷಯದ ಮೇಲೆ ನೀವು ಅವಲಂಬಿಸದೇ ಇರಬಹುದು ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ. ಮೆಸೇಜ್ ಬೋರ್ಡ್ಸ್, Yahoo ಸಮುದಾಯಗಳು, ಮತ್ತು ಸೇವೆಯ ಬೇರೆ ಎಲ್ಲ ಭಾಗಗಳಲ್ಲಿ.
  ವಿಷಯವನ್ನು ಉಳಿಸಿಕೊಳ್ಳುವುದು ಕೆಳಗಿನ ದೃಷ್ಟಿಯಿಂದ ಸಕಾರಣವಾಗಿ ಅಗತ್ಯವಾಗಿದೆ ಎಂಬ ಅತ್ಯುತ್ತಮ ನಂಬಿಕೆಯಲ್ಲಿ, ಕಾನೂನಿನ ಪ್ರಕಾರ ಅಗತ್ಯವಾದಲ್ಲಿ Yahoo ವಿಷಯವನ್ನು ಉಳಿಸಿಕೊಳ್ಳಬಹುದು ಮತ್ತು ವಿಷಯವನ್ನು ಬಹಿರಂಗಗೊಳಿಸಲೂಬಹುದು ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ ಮತ್ತು ಒಪ್ಪುತ್ತೀರಿ:
  (a) ಕಾನೂನಿನ ಪ್ರಕ್ರಿಯೆಯೊಂದಿಗೆ ಹೊಂದಿಕೊಳ್ಳಲು;
  (b) ಸೇವಾ ನಿಬಂಧನೆಯನ್ನು ಜಾರಿಗೊಳಿಸಲು;
  (c) ಯಾವುದೇ ವಿಷಯವು ತೃತೀಯ ಪಕ್ಷಗಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ಕ್ಲೇಮುಗಳಿಗೆ ಸ್ಪಂದಿಸಲು;
  (d) ಗ್ರಾಹಕ ಸೇವೆಯ ನಿಮ್ಮ ವಿನಂತಿಗಳಿಗೆ ಸ್ಪಂದಿಸಲು; ಅಥವಾ
  (e) Yahoo ನ, ಅದರ ಬಳಕೆದಾರರ ಮತ್ತು ಸಾರ್ವಜನಿಕರ ಹಕ್ಕುಗಳು, ಸ್ವತ್ತು ಅಥವಾ ವೈಯಕ್ತಿಕ ಸುರಕ್ಷತೆಯನ್ನು ಸಂರಕ್ಷಿಸಲು.
  ನಿಮ್ಮ ವಿಷಯ ಸೇರಿದಂತೆ ಸೇವೆಯ ತಾಂತ್ರಿಕ ಸಂಸ್ಕರಣೆ ಮತ್ತು ವರ್ಗಾವಣೆ ಇವುಗಳನ್ನು ಒಳಗೊಳ್ಳಬಹುದು ಎಂಬುದನ್ನು ನೀವು ತಿಳಿದಿದ್ದೀರಿ
  (a) ವಿವಿಧ ಜಾಲಗಳಲ್ಲಿ ವರ್ಗಾವಣೆಗಳು; ಮತ್ತು
  (b) ಸಂಪರ್ಕಗೊಳ್ಳುವ ಜಾಲಗಳು ಅಥವಾ ಸಾಧನಗಳ ತಾಂತ್ರಿಕ ಅಗತ್ಯಗಳಿಗೆ ಹೊಂದಿಕೊಳ್ಳುವುದಕ್ಕಾಗಿ ಮತ್ತು ಅಳವಡಿಸಿಕೊಳ್ಳುವುದಕ್ಕಾಗಿ ಬದಲಾವಣೆಗಳು
  ಸೇವೆಯ ಯಾವುದೇ ಭಾಗವು ತೃತೀಯ ಪಕ್ಷಗಳನ್ನು ಒಳಗೊಂಡಿದ್ದರೆ ಅಥವಾ ನಾವು ಅವರ ಸಹಯೋಗದಲ್ಲಿ ಅದನ್ನು ಒದಗಿಸಿದ್ದ್ರೆ, ನೀವು ನಿಮ್ಮ ಅಲ್ಲಿನ ಪ್ರವೇಶ ಅಥವಾ ಬಳಕೆಗಾಗಿ ಸೇರಿದಂತೆ ಆ ಭಾಗದ ಸೇವೆಗೆ ಸಂಬಂಧಿಸಿ ಅಂಥ ತೃತೀಯ ಪಕ್ಷವು ನೀಡುವ ಯಾವುದೇ ಟಿಪ್ಪಣಿಗಳು, ಸೂಚನೆಗಳು, ಮಾರ್ಗದರ್ಶಿಗಳು ಅಥವಾ ನಿರ್ದೇಶನಗಳನ್ನು ಪಾಲಿಸಲು ಒಪ್ಪುತ್ತೀರಿ.
 7. YAHOO!ನಲ್ಲಿನ ಸಂಪರ್ಕಗಳ ಅಂತಾರಾಜ್ಯ ಸ್ವಭಾವ ನೆಟ್ವರ್ಕ್
  ನೀವು Yahoo ದೊಂದಿಗೆ ನೋಂದಣಿ ಮಾಡಿಕೊಂಡಾಗ, ವಿದ್ಯುನ್ಮಾನ ಸಂದೇಶಗಳನ್ನು (ಇಮೇಲ್, ಸರ್ಚ್ ಪ್ರಶ್ನೆಗಳು, Yahoo ಗೆ ಸಂದೇಶಗಳ ರವಾನೆ, ಚಾಟ್ ಅಥವಾ Yahoo ಸಮುದಾಯಗಳು, ಫೋಟೊಗಳು ಅಥವಾ ಫೈಲ್ಗಳನ್ನು Yahoo ಗೆ ಅಪ್ಲೋಡ್ ಮಾಡುವುದು ಫೋಟೊಗಳು ಅಥವಾ ಭ್ರೀಫ್ಕೇಸ್, ಮತ್ತು ಬೇರೆ ಇಂಟರ್ನೆಟ್ ಚಟುವಟಿಕೆಗಳು) ಕಳುಹಿಸಿ Yahoo ಸೇವೆಗಳನ್ನು ಬಳಕೆ ಮಾಡುವಾಗ ನೀವು ಸಂದೇಶಗಳನ್ನು, ತಮ್ಮ ಭಾಗಗಳನ್ನು ವಿದೇಶದಲ್ಲಿ ಹೊಂದಿರಬಹುದಾದ Yahoo ಕಂಪ್ಯೂಟರ್ ಜಾಲಗಳ ಮೂಲಕ ಕಳುಹಿಸುವುದನ್ನು ನೀವು ಮಾನ್ಯ ಮಾಡುತ್ತೀರಿ. ಇದರ ಪರಿಣಾಮವಾಗಿ, ಮತ್ತು Yahoo' ನ ಜಾಲ ಸಂರಚನೆಯ ಹಾಗೂ ವ್ಯವಹಾರ ಅಭ್ಯಾಸಗಳ ಮತ್ತು ವಿದ್ಯುನ್ಮಾನ ಸಂವಹನಗಳ ಸ್ವಭಾವದ, ಭೌತಿಕವಾಗಿ ನೀವು ವರ್ಗಾವಣೆಯ ಸಂದರ್ಭದಲ್ಲಿ ಎಲ್ಲೇ ಇದ್ದರೂ ಸ್ವಭಾವತಃ ದೇಶದೊಳಗಿನ ಕಾಣಿಸುತ್ತಿದ್ದರೂ ಅಂತಾರಾಷ್ಟ್ರೀಯವಾಗಿ ಫಲಿತಗೊಳ್ಳುವ ವರ್ಗಾವಣೆಗಳ ಪರಿಣಾಮವಾಗಿ ಕೂಡ. ಇದೇ ರೀತಿ, ಸೇವಾ ನಿಬಂಧನೆಗಳಿಗೆ ಒಪ್ಪುವ ಮೂಲಕ, ಸೇವೆಯ ಬಳಕೆಯು ಅಂತರ್ದೇಶೀಯ ದತ್ತಾಂಶ ವರ್ಗಾವಣೆಗಳಲ್ಲಿ ಪರಿಣಮಿಸುತ್ತದೆ ಎಂಬುದನ್ನೂ ನೀವು ಮಾನ್ಯ ಮಾಡುತ್ತೀರಿ.

  Yahoo ಮೆಸೆಂಜರ್, ವೆಬ್-ಆಧರಿತ ಆವೃತ್ತಿಗಳು ಸೇರಿದಂತೆ, ನಿಮಗೆ ಮತ್ತು ನೀವು ಸಂಪರ್ಕಿಸುವ ಜನರಿಗೆ ನಿಮ್ಮ ಸಂಭಾಷಣೆಗಳನ್ನು ನಿಮ್ಮ Yahoo ಸರ್ವರ್ಗಳಲ್ಲಿರುವ Yahoo ಖಾತೆಗಳಲ್ಲಿ ಉಳಿಸುವ ಅವಕಾಶವನ್ನು ಒದಗಿಸುತ್ತದೆ. ಇದರ ಅರ್ಥವೇನೆಂದರೆ, ನೀವು ಇಂಟರ್ನೆಟ್ಗೆ ಪ್ರವೇಶ ಹೊಂದಿರುವ ಯಾವುದೇ ಕಂಪ್ಯೂಟರಿನಿಂದ ನಿಮ್ಮ ಸಂದೇಶದ ಇತಿಹಾಸವನ್ನು ನೋಡಬಹುದು ಮತ್ತು ಸರ್ಚ್ ಮಾಡಬಹುದು. ನೀವು ಈ ಲಕ್ಷಣವನ್ನು ಬಳಕೆ ಮಾಡಿದ್ದರೂ ಅಥವಾ ಮಾಡದೇ ಇದ್ದರೂ ಬೇರೆ ಬಳಕೆದಾರರು Yahoo ನಲ್ಲಿನ ತಮ್ಮ ಖಾತೆಯಲ್ಲಿ ನಿಮ್ಮ ಜೊತೆ ಸಂಭಾಷಣೆಗಳ್ನು ಉಳಿಸಲು ಬಳಕೆ ಮಾಡುವುದನ್ನು ಆಯ್ಕೆಮಾಡಬಹುದು. ಸೇವಾ ನಿಬಂಧನೆಗೆ ನಿಮ್ಮ ಒಪ್ಪಿಗೆಯು Yahoo ಗೆ ತನ್ನ ಸರ್ವರ್ಗಳಲ್ಲಿ ಈ ಸಂವಹನಗಳನ್ನು ಸಂಗ್ರಹಿಸಲು ನಿಮ್ಮ ಸಮ್ಮತಿಯನ್ನು ಒಳಗೊಂಡಿರುತ್ತದೆ. ಕಾಲಕಾಲಕ್ಕೆ Yahoo ವು Yahoo ಮುಖಾಂತರ ನಿಮಗೆ ಟಿಪ್ಪಣಿಗಳನ್ನು ಕಳುಹಿಸುತ್ತದೆ. Yahoo ನಲ್ಲಿನ ಮಹತ್ವದ ಬದಲಾವಣೆಗಳ ಕುರಿತು ಮೆಸೆಂಜರ್ ಸೇವೆಯು ನಿಮಗೆ ತಿಳಿಸುತ್ತದೆ. ಮೆಸೆಂಜರ್ ಅಥವಾ ಸಂಬಂಧಿತ ಸೇವೆಗಳು. ನೀವು ಅನಧಿಕೃತವಾದ ರೀತಿಯಲ್ಲಿ ಸೇವೆಯನ್ನು ಪ್ರವೇಶಿಸುವ ಮೂಲಕ ಈ ಸೇವಾ ನಿಬಂಧನೆಯನ್ನು ಉಲ್ಲಂಘಿಸಿದ್ದಲ್ಲಿ ನೀವು ಇಂಥ ಸಂದೇಶಗಳನ್ನು ಪಡೆಯದೇ ಇರಬಹುದು. ಸೇವಾ ನಿಬಂಧನೆಗೆ ನಿಮ್ಮ ಒಪ್ಪಿಗೆಯಲ್ಲಿ ನೀವು ಅಧಿಕೃತವಾದ ರೀತಿಯಲ್ಲಿ ಸೇವೆಯನ್ನು ಪ್ರವೇಶಿಸಿದಾಗ ನೀವು ಪಡೆದಿದ್ದೀರಿ ಎಂದು ಭಾವಿಸಲಾಗುವ ನಿಮಗೆ ರವಾನೆ ಮಾಡಿರುವ ಯಾವುದೇ ಅಥವಾ ಎಲ್ಲ ಟಿಪ್ಪಣಿಗಳನ್ನು ಒಳಗೊಂಡಿರುತ್ತದೆ.
 8. ಅಂತರಾಷ್ಟ್ರೀಯ ಬಳಕೆಗೆ ವಿಶೇಷ ವಾಗ್ದಂಡನೆಗಳು ಮತ್ತು ರಫ್ತು ಹಾಗೂ ಆಮದು ಕ್ರೋಢೀಕರಣ
  ಅಂತರ್ಜಾಲದ ಜಾಗತಿಕ ಪ್ರಕೃತಿಯನ್ನು ಗುರುತಿಸುತ್ತಾ, ಆನ್ ಲೈನ್ ಸಂಚಲನೆ ಮತ್ತು ಒಪ್ಪಿಕೊಳ್ಳಬಹುದಾದ ಅಂಶಗಳಿಗೆ ಹಾಗೂ ಸುಸಂಬದ್ಧ ಚಾನೆಲ್ ಗಳ ಬಳಕೆಗಳಿಗೆ ಸಂಬಂಧಿಸಿದ ಎಲ್ಲಾ ಸ್ಥಳೀಯ ನಿಯಮಗಳನ್ನು ಕ್ರೋಢೀಕರಿಸಲು ನೀವು ಒಪ್ಪುತ್ತೀರಾ. ಸೇವೆ ಮತ್ತು ವರ್ಗಾವಣೆಯ ಬಳಕೆ, ತಂತ್ರಾಂಶದ ಹಂಚಿಕೆ ಮತ್ತು ಸೇರಿರುವ ಪ್ರಕ್ರಿಯೆಯನ್ನು ತಂತ್ರಜ್ಞಾನ ಮತ್ತು ಸೇವೆಯ ಮೂಲಕ ಇತರೆ ತಾಂತ್ರಿಕ ಅಂಕಿ – ಅಂಶಗಳನ್ನು ಸಂಯುಕ್ತ ಸಂಸ್ಥಾನಗಳು ಹಾಗೂ ಇತರೆ ದೇಶಗಳ ರಫ್ತು ಮತ್ತು ಆಮದು ಕಾನೂನಿಗೆ ಅಧೀನಪಡಿಸಲಾಗಿದೆ. ಅನ್ವಯಿಸುವ ಆಮದು ಮತ್ತು ರಫ್ತು ಕಾನೂನು ಮತ್ತು ನಿಯಮಗಳನ್ನು ರಫ್ತಿನ ಆಡಳಿತವನ್ನು ಮಿತಿಗೊಳಿಸದೆ ನೀವು ಪಾಲಿಸಲು ಒಪ್ಪಿಕೊಳ್ಳಿ. ನಿಯಂತ್ರಣಗಳು ನೊೀಡಿ ಮತ್ತು ಸಂಯುಕ್ತ ಸಂಸ್ಥಾನಗಳ ಮಂಜೂರು ನಿಯಂತ್ರಣ ಕಾರ್ಯಕ್ರಮಗಳು ನೊೀಡಿ ನಿರ್ದಿಷ್ಟವಾಗಿ ನೀವು ಪ್ರತಿನಿಧಿಸಿ ಸಮರ್ಥಿಸಬೇಕಾಗಿರುವುದು ಏನೆಂದರೆ: (ಅ) ನೀವು ಯಾವುದೇ ಸರ್ಕಾರಿ ರಫ್ತಿನ ಹೊರತುಪಡಿಸಿರುವ ಪಟ್ಟಿಯಲ್ಲಿ ನಿಯಂತ್ರಿತ ವ್ಯಕ್ತಿಯಾಗಿ ಗುರುತಿಸಲಾಗಿಲ್ಲ ಎಂದು ನ ೊೀಡಿ ಅಥವಾ ಆಮದು ಹಾಗೂ ರಫ್ತು ಕಾನೂನು ಹಾಗೂ ನಿಯಮಗಳಿಗೆ ಅನ್ವಯಿಸುವ ಯಾವುದೇ ಸರ್ಕಾರ ಅಥವಾ ಇತರೇ ರಫ್ತು ನಿಯಂತ್ರಿತ ದೇಶಗಳಿಗೆ ಸಂಬಂಧಿಸಿದ ಸದಸ್ಯರಲ್ಲವೆಂದು.
  (ಆ) ತಂತ್ರಾಂಶ, ತಂತ್ರಜ್ಞಾನ ಹಾಗೂ ಇತರೆ ತಾಂತ್ರಿಕ ಅಂಕಿ – ಅಂಶಗಳನ್ನು ರಫ್ತು ನಿಯಂತ್ರಿತ ವ್ಯಕ್ತಿಗಳು ಅಥವಾ ದೇಶಗಳ ಮೂಲಕ ವರ್ಗಾವಣೆ ಮಾಡುವುದಿಲ್ಲವೆಂದು;
  (ಇ) ಸೇವೆಯನ್ನು ಸಶಸ್ತ್ರ, ಅಣು, ಮಿಸೈಲ್ ರಾಸಾಯನಿಕ ಅಥವಾ ಜೀವ ವಿಜ್ಞಾನ ಆಯುಧಗಳನ್ನು ಸಂಯುಕ್ತ ಸಂಸ್ಥಾನಗಳ ರಫ್ತಿನ ಕಾನೂನನ್ನು ಉಲ್ಲಂಘಿಸಲು ಬಳಸುವುದಿಲ್ಲ. ಮತ್ತು
  (ಈ) ಸಂಯುಕ್ತ ಸಂಸ್ಥಾನಗಳು ಅಥವಾ ಇತರೆ ಸಂಬಂಧಪಟ್ಟ ರಫ್ತು ಅಥವಾ ಆಮದಿನ ಕಾನೂನುಗಳನ್ನು ಉಲ್ಲಂಘಿಸಲು ಯಾವುದೇ ತಂತ್ರಾಂಶದ ಸೇವೆ, ತಂತ್ರಜ್ಞಾನ ಅಥವಾ ತಾಂತ್ರಿಕ ಅಂಕಿ – ಅಂಶಗಳ ಮೂಲಕ ವರ್ಗಾವಣೆ ಅಪ್ ಲೋಡ್ ಹಾಗೂ ಹಂಚಿಕೆ ಮಾಡಲು ಬಳಸುವುದಿಲ್ಲ.
 9. ಸೇವೆಯ ಮೇಲಿನ ಒಳಗೊಳ್ಳುವಿಕೆಗೆ ಸಂಬಂಧಿಸಿ ಸಲ್ಲಿಸಿರುವ ಅಥವಾ ಲಭ್ಯಗೊಳಿಸಿರುವ ವಿಷಯ
  Yahoo ನೀವು ಸಲ್ಲಿಸಿರುವ ವಿಷಯದ ಮಾಲಿಕತ್ವವನ್ನು ಕ್ಲೇಮ್ ಮಾಡುವುದಿಲ್ಲ ಅಥವಾ ಸೇವೆಯ ಮೇಲಿನ ಒಳಗೊಳ್ಳುವಿಕೆಯಲ್ಲಿ ಲಭ್ಯಗೊಳಿಸುವುದಿಲ್ಲ. ಆದರೆ, ನೀವು ಸಲ್ಲಿಸುವ ಅಥವಾ ಸೇವೆಯ ಸಾರ್ವಜನಿಕವಾಗಿ ಪ್ರವೇಶಿಸುವ ಸ್ಥಳಗಳಲ್ಲಿ ಲಭ್ಯಗೊಳಿಸುವ ವಿಷಯಕ್ಕೆ ಸಂಬಂಧಿಸಿ ನೀವು Yahoo ಗೆ ವಿಶ್ವವ್ಯಾಪಿಯಾಗಿ, ರಾಯಧನ ರಹಿತ ಮತ್ತು ವಿಶೇಷವಲ್ಲದ ಕೆಳಗಿನ ಪರವಾನಗಿಯನ್ನು(ಗಳನ್ನು) ಅನ್ವಯಿಸುವ ರೀತಿಯಲ್ಲಿ ನೀಡಲು ಒಪ್ಪುತ್ತೀರಿ:
  1. ನೀವು ಸಲ್ಲಿಸುವ ಮತ್ತು Yahoo ನ ಸಾರ್ವಜನಿಕವಾಗಿ ಪ್ರವೇಶಿಸಬಲ್ಲ ಸ್ಥಳಗಳಲ್ಲಿ ಸೇರಿಸುವುದಕ್ಕಾಗಿ ಲಭ್ಯಗೊಳಿಸುವ ವಿಷಯಕ್ಕೆ ಸಂಬಂಧಿಸಿ ಸಮುದಾಯಗಳು, ಬಳಕೆ ಮಾಡಲು, ವಿತರಿಸಲು, ಮರು ನೀಡಿಕೆ ಮಾಡಲು, ಪರಿವರ್ತಿಸಲು, ಅಳವಡಿಸಿಕೊಳ್ಳಲು, ಸಾರ್ವಜನಿಕವಾಗಿ ನಡೆಸಲು ಮತ್ತು ಸೇವೆಯಲ್ಲಿ ಅಂಥ ವಿಷಯವನ್ನು ನಿರ್ದಿಷ್ಟವಾಗಿ Yahoo ಗೆ ಒದಗಿಸಲು ಮತ್ತು ಜಾಹೀರಾತಿಗಾಗಿ ಮಾತ್ರ ಸಾರ್ವಜನಿಕವಾಗಿ ಪ್ರದರ್ಶಿಸಲು ಪರವಾನಗಿ ಇಂಥ ವಿಷಯವನ್ನು ಸಲ್ಲಿಸಿರುವ ಅಥವಾ ಲಭ್ಯಗೊಳಿಸಿರುವ ಸಮುದಾಯ. ಈ ಪರವಾನಗಿಯು ನೀವು ಸೇವೆಯ ಮೇಲಿನ ಇಂಥ ವಿಷಯವನ್ನು ಸೇರಿಸಲು ಮುಂದುವರಿಸಲು ಆಯ್ಕೆಮಾಡುವ ವರೆಗೆ ಮಾತ್ರವೇ ಇರುತ್ತದೆ ಮತ್ತು ನೀವು ತೆಗೆದಾಗ ಅಥವಾ Yahoo ಸೇವೆಯಿಂದ ಅಂಥ ವಿಷಯವನ್ನು ತೆಗೆದಾಗ ರದ್ದಾಗುತ್ತದೆ.
  2. Yahoo ವನ್ನು ಹೊರತುಪಡಿಸಿ ಬೇರೆ ಸಾರ್ವಜನಿಕವಾಗಿ ಪ್ರವೇಶಿಸಬಲ್ಲ ಸ್ಥಳಗಳಲ್ಲಿ ಸೇರಿಸುವುದಕ್ಕಾಗಿ ನೀವು ಸಲ್ಲಿಸುವ ಅಥವಾ ಸೇರಿಸುವಿಕೆಗೆ ಲಭ್ಯವಾಗುವ ಫೋಟೊಗಳು, ಗ್ರಾಫಿಕ್ಸ್, ಆಡಿಯೋ ಅಥವಾ ವೀಡಿಯೋಗೆ ಸಂಬಂಧಿಸಿ. ಸಮುದಾಯಗಳು, ಬಳಕೆ, ವಿತರಣೆ, ಮರು ಸಲ್ಲಿಕೆ, ಪರಿವರ್ತನೆ, ಹೊಂದಾಣಿಕೆ, ಸಾರ್ವಜನಿಕವಾಗಿ ನೆರವೇರಿಸುವುದಕ್ಕೆ ಹಾಗೂ ಸಾರ್ವಜನಿಕವಾಗಿ ಅಂಥ ವಿಷಯವನ್ನು ಸಲ್ಲಿಕೆ ಮಾಡಿರುವ ಅಥವಾ ಲಭ್ಯಗೊಳಿಸಿರುವ ಉದ್ದೇಶಕ್ಕಾಗಿ ಮಾತ್ರವೇ ಸೇವೆಯಲ್ಲಿ ಪ್ರದರ್ಶಿಸುವುದಕ್ಕೆ ಪರವಾನಗಿ. ಈ ಪರವಾನಗಿಯು ನೀವು ಸೇವೆಯ ಮೇಲಿನ ಇಂಥ ವಿಷಯವನ್ನು ಸೇರಿಸಲು ಮುಂದುವರಿಸಲು ಆಯ್ಕೆಮಾಡುವ ವರೆಗೆ ಮಾತ್ರವೇ ಇರುತ್ತದೆ ಮತ್ತು ನೀವು ತೆಗೆದಾಗ ಅಥವಾ Yahoo ಸೇವೆಯಿಂದ ಅಂಥ ವಿಷಯವನ್ನು ತೆಗೆದಾಗ ರದ್ದಾಗುತ್ತದೆ.
  3. Yahoo! ವನ್ನು ಹೊರತುಪಡಿಸಿ ಬೇರೆ ಸಾರ್ವಜನಿಕವಾಗಿ ಪ್ರವೇಶಿಸಬಲ್ಲ ಸ್ಥಳಗಳಲ್ಲಿ ಸೇರಿಸುವುದಕ್ಕಾಗಿ ನೀವು ಸಲ್ಲಿಸುವ ಅಥವಾ ಸೇರಿಸುವಿಕೆಗೆ ಲಭ್ಯಗೊಳಿಸುವ ಫೋಟೊಗಳು, ಗ್ರಾಫಿಕ್ಸ್, ಆಡಿಯೋ ಅಥವಾ ವೀಡಿಯೋ ಹೊರತುಪಡಿಸಿ ಬೇರೆ ವಿಷಯಕ್ಕೆ ಸಂಬಂಧಿಸಿ. ಸಮುದಾಯಗಳು, ವಿಷಯದ (ಪೂರ್ಣವಾಗಿ ಅಥವಾ ಭಾಗಶಃ) ಬಳಕೆ, ವಿತರಣೆ, ಮರುಸಲ್ಲಿಕೆ, ಪರಿವರ್ತನೆ, ಅಳವಡಿಕೆ, ಪ್ರಕಟಣೆ, ಭಾಷಾಂತರ, ಸಾರ್ವಜನಿಕ ನಿರ್ವಹಣೆ ಮತ್ತು ಸಾರ್ವಜನಿಕ ಪ್ರದರ್ಶನ ಮತ್ತು ಅಂಥ ವಿಷಯವನ್ನು ಗೊತ್ತಿಲ್ಲದ ಅಥವಾ ನಂತರ ಅಭಿವೃದ್ಧಿಗೊಳಿಸುವ ಯಾವುದೇ ಸ್ವರೂಪಗಳಲ್ಲಿ ಅಥವಾ ಮಾಧ್ಯಮದಲ್ಲಿ ಒಳಗೂಡಿಸಿಕೊಳ್ಳಲು ಶಾಶ್ವತ, ಹಿಂಪಡೆಯಲಾಗದ ಮತ್ತು ಪೂರ್ಣವಾಗಿ ಉಪಪರವಾನಗಿ ನೀಡಬಹುದಾದ ಪರವಾನಗಿ.
 10. YAHOO!ಗೆ ಕೊಡುಗೆಗಳು
  ಸಲಹೆ ಅಥವಾ ಅಭಿಪ್ರಾಯ ವೆಬ್ ಪುಟಗಳ ಮುಖಾಂತರ ಐಡಿಯಾಗಳು, ಸಲಹೆಗಳು, ದಾಖಲೆಗಳು ಮತ್ತು/ಅಥವಾ ಪ್ರಸ್ತಾವನೆಗಳನ್ನು ("ಕೊಡುಗೆಗಳು") Yahoo! ಗೆ ಸಲ್ಲಿಸುವ ಮೂಲಕ ನೀವು ಇದನ್ನು ಮಾನ್ಯ ಮಾಡುತ್ತೀರಿ ಮತ್ತು ಒಪ್ಪುತ್ತೀರಿ: (a) ನಿಮ್ಮ ಕೊಡುಗೆಗಳು ಗೌಪ್ಯವಾದ ಅಥವಾ ಹಕ್ಕುಸ್ವಾಮ್ಯದ ಮಾಹಿತಿಯನ್ನು ಹೊಂದಿರುವುದಿಲ್ಲ; (b) ಕೊಡುಗೆಗಳಿಗೆ ಸಂಬಂಧಿಸಿ Yahoo! ಅಭಿವ್ಯಕ್ಯ ಅಥವಾ ಅನ್ವಯಿಸುವ ಯಾವುದೇ ಗೌಪ್ಯತೆಯ ಬಾಧ್ಯತೆಯನ್ನು ಹೊಂದಿಲ್ಲ; (c) ಯಾವುದೇ ಉದ್ದೇಶಕ್ಕಾಗಿ ಇಂಥ ಕೊಡುಗೆಗಳನ್ನು ವಿಶ್ವವ್ಯಾಪಿಯಾಗಿ ಯಾವುದೇ ಮಾಧ್ಯಮದಲ್ಲಿ, ಯಾವುದೇ ರೀತಿಯಲ್ಲಿ ಬಳಕೆ ಮಾಡಲು ಅಥವಾ ಬಹಿರಂಗಗೊಳಿಸಲು (ಅಥವಾ ಬಳಕೆ ಅಥವಾ ಬಹಿರಂಗಗೊಳಿಸುವಿಕೆಯನ್ನು ಆಯ್ಕೆ ಮಾಡದಿರಲು) Yahoo! ಅಧಿಕಾರ ಹೊಂದಿದೆ; (d) Yahoo! ಈಗಾಗಲೇ ಪರಿಗಣನೆಯಲ್ಲಿರುವ ಅಥವಾ ಅಭಿವೃದ್ಧಿಯಲ್ಲಿರುವ ಕೊಡುಗೆಗಳನ್ನು ಹೋಲುವ ಏನನ್ನಾದರೂ ಹೊಂದಿರಬಹುದು; (e) ನಿಮಗೆ ಸಂಬಂಧಿಸಿ Yahoo! ಗೆ ಯಾವುದೇ ಬಾಧ್ಯತೆಯೂ ಇಲ್ಲದಂತೆ ನಿಮ್ಮ ಕೊಡುಗೆಗಳು Yahoo! ನ ಸ್ವತ್ತುಗಳಾಗುತ್ತವೆ; ಮತ್ತು (f) ಯಾವುದೇ ಸನ್ನಿವೇಶಗಳಲ್ಲಿ ನೀವು Yahoo! ನಿಂದ ಯಾವುದೇ ರೀತಿಯ ಪರಿಹಾರ ಅಥವಾ ಮರುಪಾವತಿಗಳಿಗೆ ಅಧಿಕಾರವನ್ನು ಹೊಂದಿರುವುದಿಲ್ಲ.
 11. ಹಾನಿರಕ್ಷೆ
  ನೀವು Yahoo, ಹಾಗೂ ನಮ್ಮ ಪರವಾನಗಿದಾತರು, ಸರಬರಾಜುದಾರರು, ಮಾರಾಟಗಾರರು, ಮೂಲಕಂಪನಿ, ಅಂಗಸಂಸ್ಥೆಗಳು ಮತ್ತು ಸಂಬಂಧಿಸಿದ ಕಂಪನಿಗಳು, ಸದಸ್ಯರು, ಅಧಿಕಾರಿಗಳು, ಏಜೆಂಟರು, ಬ್ರಾಂಡ್ ಪಾಲುದಾರರು ಅಥವಾ ಬೇರೆ ಪಾಲುದಾರರು, ಮತ್ತು ಉದ್ಯೋಗಿಗಳಿಗೆ ನೀವು ನೀವು ಸಲ್ಲಿಸುವ, ಪ್ರಕಟಿಸುವ ಅಥವಾ ವರ್ಗಾವಣೆ ಮಾಡುವ ಅಥವಾ ಸೇವೆಯ ಮೂಲಕವಾಗಿ ಲಭ್ಯಗೊಳಿಸುವ ವಿಷಯದಿಂದಾಗಿ ಅಥವಾ ಸೇವೆಯನ್ನು ನೀವು ಬಳಕೆ ಮಾಡುವುದರಿಂದ, ಸೇವೆಗೆ ನಿಮ್ಮ ಸಂಪರ್ಕಗಳಿಂದ, ನೀವು ಯಾವುದೇ ಚಾನೆಲ್ಗಳನ್ನು ಬಳಕೆ ಮಾಡುವುದರಿಂದ, ನೀವು ಸೇವಾ ನಿಬಂಧನೆಯನ್ನು ಉಲ್ಲಂಘನೆ ಮಾಡುವುದರಿಂದ ಅಥವಾ ನೀವು ಬೇರೆ ಯಾವುದೇ ವ್ಯಕ್ತಿಯ ಯಾವುದೇ ಹಕ್ಕುಗಳನ್ನು ಉಲ್ಲಂಘನೆ ಮಾಡುವುದರಿಂದ ಅಥವಾ ನೀವು ಅನ್ವಯಿಸುವ ಯಾವುದೇ ಕಾನೂನನ್ನು ಉಲ್ಲಂಘಿಸುವುದರಿಂದ ಬರುವ ಯಾವುದೇ ತೃತೀಯ ಪಕ್ಷವು ಮಾಡುವ ಸಕಾರಣವಾದ ಕಾನೂನುಬದ್ಧ ಶುಲ್ಕಗಳು ಸೇರಿದಂತೆ ಯಾವುದೇ ಕ್ಲೇಮ್ ಅಥವಾ ಬೇಡಿಕೆ, ನಷ್ಟಭರ್ತಿ ಮಾಡಲು ಮತ್ತು ಹಾನಿಯಿಂದ ವಿಮುಕ್ತಿ ನೀಡಲು ಒಪ್ಪುತ್ತೀರಿ.
 12. ಸೇವೆಯನ್ನು ಮರುಮಾರಾಟ ಮಾಡದಿರುವುದು
  ನೀವು ಯಾವುದೇ ವಾಣಿಜ್ಯ ಉದ್ದೇಶಗಳಿಗಾಗಿ ಸೇವೆಯ ಯಾವುದೇ ಭಾಗವನ್ನು, ಸೇವೆಯ ಬಳಕೆಯನ್ನು ಅಥವಾ ಸೇವೆಗೆ ಪ್ರವೇಶವನ್ನು ಮರುಸಲ್ಲಿಕೆ, ನಕಲು, ಕಾಪಿ, ಮರುಮಾರಾಟ ಅಥವಾ ಶೋಷಣೆ ಮಾಡದೇ ಇರಲು ಒಪ್ಪುತ್ತೀರಿ.
 13. ಬಳಕೆ ಮತ್ತು ಸಂಗ್ರಹಣೆಗೆ ಸಂಬಂಧಿಸಿ ಸಾಮಾನ್ಯ ಅಭ್ಯಾಸಗಳು
  Yahoo, ಇಮೇಲ್ ಸಂದೇಶಗಳು, ಮೆಸೇಜ್ ಬೋರ್ಡ್ ಸಲ್ಲಿಕೆಗಳು ಅಥವಾ ಬೇರೆ ಅಪ್ಲೋಡ್ ಮಾಡಿರುವ ವಿಷಯವನ್ನು ಸೇವೆಯು ಉಳಿಸಿಕೊಳ್ಳುವ, ಸೇವೆಯಲ್ಲಿನ ಖಾತೆಯಿಂದ ಕಳುಹಿಸಿದ ಅಥವಾ ಖಾತೆಯು ಸ್ವೀಕರಿಸಿದ ಅಥವಾ ಸೇವೆಯ ಮೂಲಕ ರವಾನಿಸಲಾದ ಗರಿಷ್ಟ ಸಂಖ್ಯೆಯ ಇಮೇಲ್ ಸಂದೇಶಗಳು ಅಥವಾ ಬೇರೆ ಯಾವುದೇ ಸಂದೇಶಗಳ ಗರಿಷ್ಟ ಸಂಖ್ಯೆಯ ದಿನಗಳ, ಸೇವೆಯಲ್ಲಿನ ಖಾತೆಯು ಕಳುಹಿಸುವ ಅಥವಾ ಸ್ವೀಕರಿಸುವ ಸಂದೇಶದ ಗಾತ್ರದ, ನಿಮ್ಮ ಪರವಾಗಿ Yahoo ಸರ್ವರ್ಗಳಲ್ಲಿ ನಿಗದಿಮಾಡುವ ಗರಿಷ್ಟ ಡಿಸ್ಕ್ ಸ್ಥಳದ, ನೀವು ಸೇವೆಯನ್ನು ಕೊಟ್ಟ ಸಮಯದಲ್ಲಿ ಎಷ್ಟು ಸಾರಿ (ಮತ್ತು ಎಷ್ಟು ಗರಿಷ್ಟ ಅವಧಿಗೆ) ಪ್ರವೇಶ ಮಾಡುತ್ತೀರಿ ಎಂಬುದು ಸೇರಿದಂತೆ ಆದರೆ ಇವುಗಳಿಗಷ್ಟೇ ಸೀಮಿತವಾಗದಂತೆ ಸೇವೆಯ ಬಳಕೆಗೆ ಸಂಬಂಧಿಸಿದ ಸಾಮಾನ್ಯ ಅಭ್ಯಾಸಗಳು ಮತ್ತು ಮಿತಿಗಳನ್ನು ತನ್ನ ಸ್ವಂತ ತೀರ್ಮಾನದಲ್ಲಿ ಜಾರಿಗೆ ತರಬಹುದು ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ. ನಿರ್ದಿಷ್ಟವಾಗಿ, ಆದರೆ ಮೇಲೆ ಹೇಳಿದವುಗಳಿಗೆ ಸೀಮಿತಗೊಳ್ಳದಂತೆ, ಸೇವೆಯನ್ನು ಬಳಕೆ ಮಾಡುವ ಮೂಲಕ, ನಿಮ್ಮ ಸೇವೆಗೆ ಸಂಬಂಧಿಸಿ https://policies.yahoo.com/in/en/yahoo/privacy/index.htm ನಲ್ಲಿ ನಿಗದಿಪಡಿಸಲಾಗಿರುವ ನಮ್ಮ ಅಭ್ಯಾಸಗಳ ಹೊಂದಾಣಿಕೆಗೆ ನೀವು ಸಮ್ಮತಿಸುತ್ತೀರಿ. ಸೇವೆಯು ನಿರ್ವಹಿಸುವ ಅಥವಾ ವರ್ಗಾವಣೆ ಮಾಡುವ ಯಾವುದೇ ಸಂದೇಶಗಳ ಮತ್ತು ಬೇರೆ ಸಂವಹನಗಳ ಅಥವಾ ಬೇರೆ ವಿಷಯಗಳ ಅಳಿಸುವಿಕೆಗೆ ಅಥವಾ ಸಂಗ್ರಹಿಸುವಲ್ಲಿನ ವೈಫಲ್ಯಕ್ಕೆ ಸಂಬಂಧಿಸಿ Yahoo ಜವಾಬ್ದಾರವಾಗುವುದಿಲ್ಲ. ವಿಸ್ತೃತವಾದ ಅವಧಿಗೆ ನಿಷ್ಕ್ರಿಯವಾಗಿರುವ ಖಾತೆಗಳಿಂದ ಲಾಗ್ ಆಫ್ ಆಗುವ ಹಕ್ಕನ್ನು Yahoo ಕಾಯ್ದಿರಿಸುತ್ತದೆ ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ. ಈ ಸಾಮಾನ್ಯ ಅಭ್ಯಾಸಗಳನ್ನು ಮತ್ತು ಮಿತಿಗಳನ್ನು ಯಾವುದೇ ಸಮಯದಲ್ಲಿ ತನ್ನದೇ ತೀರ್ಮಾನದಲ್ಲಿ ಸೂಚನೆಯೊಂದಿಗೆ ಅಥವಾ ಸೂಚನೆಯಿಲ್ಲದೇ ಬದಲಾಯಿಸುವ ಹಕ್ಕನ್ನು Yahoo ಕಾಯ್ದಿರಿಸುತ್ತದೆ ಎಂಬುದನ್ನು ಕೂಡ ನೀವು ಮಾನ್ಯ ಮಾಡುತ್ತೀರಿ. ನಾವು ಈ ಸಾಮಾನ್ಯ ಅಭ್ಯಾಸಗಳನ್ನು ಮತ್ತು ಮಿತಿಗಳನ್ನು ಯಾವುದೇ ಸಮಯದಲ್ಲಿ, ನಮ್ಮದೇ ತೀರ್ಮಾನದಲ್ಲಿ, ಸೂಚನೆಯೊಂದಿಗೆ ಅಥವಾ ಸೂಚನೆಯಿಲ್ಲದೇ, ಬದಲಾಯಿಸುವ ಹಕ್ಕನ್ನು ಕಾಯ್ದಿರಿಸುತ್ತೇವೆ ಮತ್ತು ಇಂಥ ಬದಲಾವಣೆಯ ಬಳಿಕ ಸೇವೆಯನ್ನು ನೀವು ಬಳಕೆ ಮಾಡುವುದನ್ನು ಮುಂದುವರಿಸುವುದು ನಿಮ್ಮ ಒಪ್ಪಿಗೆಯನ್ನು ಒಳಗೊಂಡಿರುತ್ತದೆ ಮತ್ತು ಪರಿವರ್ತಿತ ಸಾಮಾನ್ಯ ಅಭ್ಯಾಸಗಳು ಮತ್ತು ಮಿತಿಗಳ ಕುರಿತು ಒಪ್ಪಂದವನ್ನು ಹೊಂದಬೇಕಾಗುತ್ತದೆ ಎಂಬುದನ್ನು ಕೂಡ ನೀವು ಮಾನ್ಯ ಮಾಡುತ್ತೀರಿ.
 14. ಸೇವೆಯಲ್ಲಿನ ಮಾರ್ಪಾಡುಗಳು
  Yahoo ಯಾವುದೇ ಸಮಯದಲ್ಲಿ ಅಥವಾ ಕಾಲಕಾಲಕ್ಕೆ ಸೇವೆಯನ್ನು (ಅಥವಾ ಅದರಲ್ಲಿನ ಯಾವುದೇ ಭಾಗವನ್ನು) ಸೂಚನೆಯ ಜೊತೆ ಅಥವಾ ಸೂಚನೆಯಿಲ್ಲದೇ, ಯಾವುದೇ ಕಾರಣಕ್ಕಾಗಿಯಾದರೂ, ಸಾಮಾನ್ಯವಾಗಿ ಅಥವಾ ನಿಮಗೆ ಮಾತ್ರವೇ ಸೀಮಿತವಾಗುವಂತೆ ಪರಿವರ್ತಿಸುವ ಅಥವಾ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನಿಲ್ಲಿಸುವ ಹಕ್ಕನ್ನು ಕಾಯ್ದಿರಿಸುತ್ತದೆ. ಸೇವೆಯಲ್ಲಿನ ಯಾವುದೇ ಪರಿವರ್ತನೆ, ರದ್ದತಿ ಅಥವಾ ನಿಲ್ಲಿಸುವಿಕೆಗೆ Yahoo ಯಾವುದೇ ರೀತಿಯಲ್ಲಿ ನಿಮಗೆ ಅಥವಾ ಯಾವುದೇ ತೃತೀಯ ಪಕ್ಷಕ್ಕೆ ಸಂಬಂಧಿಸಿ ಬಾಧ್ಯತೆಯನ್ನು ಹೊಂದಿರುವುದಿಲ್ಲ.
 15. ಸಮಾಪ್ತಿ
  Yahoo, ತನ್ನದೇ ತೀರ್ಮಾನದಲ್ಲಿ ಯಾವುದೇ ಕಾರಣಕ್ಕಾಗಿ, ಕಡಿಮೆ ಬಳಕೆ ಅಥವಾ ಒಂದು ವೇಳೆ Yahoo ನ ಅಭಿಪ್ರಾಯದಲ್ಲಿ ನೀವು ಸೇವಾ ನಿಬಂಧನೆಯ ವಿಷಯವನ್ನು ಅಥವಾ ತತ್ವವನ್ನು ಉಲ್ಲಂಘಿಸುವುದು ಅಥವಾ ವಿರುದ್ಧವಾಗಿ ಬಳಕೆ ಮಾಡಿರುವುದು, ಅಥವಾ ನೀವು ಬೌದ್ಧಿಕ ಹಕ್ಕುಸ್ವಾಮ್ಯವನ್ನು ಪುನರಾವರ್ತಿತವಾಗಿ ಉಲ್ಲಂಘನೆ ಮಾಡುವವರು ಎಂಬುದು ಸೇರಿದಂತೆ ಆದರೆ ಅದಕ್ಕೆ ಸೀಮಿತವಾಗದಂತೆ, ನಿಮ್ಮ ಪಾಸ್ವರ್ಡ್, ಖಾತೆಯನ್ನು (ಅಥವಾ ಅದರ ಯಾವುದೇ ಭಾಗವನ್ನು) ಅಥವಾ ಸೇವೆಯ ಬಳಕೆಯನ್ನು ರದ್ದುಗೊಳಿಸಬಹುದು ಹಾಗೂ ಸೇವೆಯೊಳಗಿನ ಯಾವುದೇ ವಿಷಯವನ್ನು ತೆಗೆಯಬಹುದು ಮತ್ತು ಕೈಬಿಡಬಹುದು. Yahoo ತನ್ನ ತೀರ್ಮಾನದಲ್ಲಿ ಕೂಡ ಮತ್ತು ಯಾವುದೇ ಸಮಯದಲ್ಲಿ ಸೇವೆಯನ್ನು ಅಥವಾ ಅದರಲ್ಲಿನ ಯಾವುದೇ ಭಾಗವನ್ನು ಸೂಚನೆಯೊಂದಿಗೆ ಅಥವಾ ಸೂಚನೆಯಿಲ್ಲದೇ, ಆಯ್ಕೆಮಾಡಿದವುಗಳಿಗಾಗಿ ಅಥವಾ ಎಲ್ಲ ಚಾನೆಲ್ಗಳಿಗೆ ಒದಗಿಸುವುದನ್ನು ನಿಲ್ಲಿಸಬಹುದು. ಈ ಸೇವಾ ನಿಬಂಧನೆಯಲ್ಲಿನ ಯಾವುದೇ ಅಂಶದಡಿಯಲ್ಲಿ ನೀವು ಸೇವೆಯನ್ನು ಪ್ರವೇಶಿಸುವುದಕ್ಕೆ ಯಾವುದೇ ನಿಲುಗಡೆಗೆ ನಿಮ್ಮ ಪ್ರವೇಶವು ಪೂರ್ವಸೂಚನೆಯಿಲ್ಲದೇ ಪರಿಣಾಮಕ್ಕೊಳಗಾಗಬಹುದು, ಹಾಗೂ Yahoo ತಕ್ಷಣವೇ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಎಲ್ಲ ಸಂಬಂಧಿತ ಮಾಹಿತಿಯನ್ನು ಹಾಗೂ ನಿಮ್ಮ ಖಾತೆಯಲ್ಲಿನ ಫೈಲ್ಗಳನ್ನು ಅಳಿಸಬಹುದು ಮತ್ತು/ಅಥವಾ ಅಂಥ ಫೈಲ್ಗಳು ಅಥವಾ ಸೇವೆಗೆ ಯಾವುದೇ ಹೆಚ್ಚಿನ ಪ್ರವೇಶವನ್ನು ನಿಷೇಧಿಸಬಹುದು ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ ಹಾಗೂ ಒಪ್ಪುತ್ತೀರಿ. ಅಂತೆಯೇ, Yahoo ಸೇವೆಗೆ ನಿಮ್ಮ ಪ್ರವೇಶವನ್ನು ಯಾವುದೇ ರೀತಿಯಲ್ಲಿ ನಿಲ್ಲಿಸುವುದಕ್ಕೆ ಸಂಬಂಧಿಸಿ ನಿಮಗೆ ಅಥವಾ ಯಾವುದೇ ತೃತೀಯ ಪಕ್ಷಕ್ಕೆ ಬಾಧ್ಯತೆಯನ್ನು ಹೊಂದುವುದಿಲ್ಲ ಎಂಬುದನ್ನು ಕೂಡ ನೀವು ಒಪ್ಪುತ್ತೀರಿ.
 16. ತೃತೀಯ ಪಕ್ಷಗಳೊಂದಿಗೆ ವ್ಯವಹರಿಸುವುದು
  ಸೇವೆಯು ನೇರವಾಗಿ ಅಥವಾ ತೃತೀಯ ಪಕ್ಷಗಳು ನಡೆಸುವ ಸೈಟ್ಗಳಿಗೆ ಲಿಂಕ್ಗಳ ರೂಪದಲ್ಲಿ ಅಂಥ ಸ್ವತಂತ್ರ ತೃತೀಯ ಪಕ್ಷಗಳ ಉತ್ಪನ್ನಗಳು ಮತ್ತು ಸೇವೆಗಳಿಗೆ ಪ್ರವೇಶವನ್ನು ಕೂಡ ಒಳಗೊಂಡಿರಬಹುದು. ತೃತೀಯ ಪಕ್ಷಗಳ ಉತ್ಪನ್ನಗಳು ಮತ್ತು ಸೇವೆಗಳು ಸೇವೆಯ ಭಾಗವಾಗಿರುವಾಗ ಈ ಉತ್ಪನ್ನಗಳು ಮತ್ತು ಸೇವೆಗಳನ್ನು ತೃತೀಯ ಪಕ್ಷಗಳು ಒದಗಿಸಿರುತ್ತಾರೆ ಎಂಬುದನ್ನು ಸೂಚಿಸಲು ನಾವು ಪ್ರಯತ್ನಿಸುತ್ತೇವೆ, ಆದರೆ ಇದು ನಮ್ಮ ಬಾಧ್ಯತೆಯಾಗಿರುವುದಿಲ್ಲ. ಎಲ್ಲ ಸಂದರ್ಭಗಳಲ್ಲಿ, ಸೇವೆಯಲ್ಲಿ ಅಥವಾ ಸೇವೆಯ (ಉತ್ಪನ್ನಗಳು ಮತ್ತು ಸೇವೆಗಳ ಸರಬರಾಜುದಾರರು, ಜಾಹೀರಾತುದಾರರು ಮತ್ತು ಸೇವೆಯ ಬೇರೆ ಬಳಕೆದಾರರು ಸೇರಿದಂತೆ ಆದರೆ ಇವುಗಳಿಗೆ ಸೀಮಿತವಾಗದೇ) ಮೂಲಕ ಕಾಣಿಸುವ ಬೇರೆ ಪಾರ್ಟಿಗಳ ಜೊತೆ ನಿಮ್ಮ ಸಂಪರ್ಕ ಅಥವಾ ವ್ಯವಹಾರಗಳು, ಅಥವಾ ಜಾಹೀರಾತುಗಳಲ್ಲಿ ಪಾಲ್ಗೊಳ್ಳುವಿಕೆ, ಸಂಬಂಧಿತ ಉತ್ಪನ್ನಗಳು ಅಥವಾ ಸೇವೆಗಳ ಹಣಪಾವತಿ ಮತ್ತು ರವಾನೆ ಸೇರಿದಂತೆ, ಅಂಥ ವ್ಯವಹಾರಗಳಿಗೆ ಸಂಬಂಧಿಸಿರುವ ಬೇರೆ ಯಾವುದೇ ನಿಬಂಧನೆಗಳು, ಷರತ್ತುಗಳು, ವಾರಂಟಿಗಳು ಅಥವಾ ಪ್ರತಿನಿಧಿತ್ವಗಳು, ಇಂಥ ವ್ಯವಹಾರಗಳು ನಿಮ್ಮ ಮತ್ತು ಅಂಥ ತೃತೀಯ ಪಕ್ಷಗಳ ನಡುವೆ ಮಾತ್ರವೇಇರುತ್ತವೆ, ಇವು ಸೇವೆಯಲ್ಲಿ ಅಥವಾ ಸೇವೆಯ ಮೂಲಕ ನಮ್ಮ ಜೊತೆ ಸಹ ಬ್ರಾಂಡ್ಗಳಾಗಿರುವ ನಮ್ಮ ಟ್ರೇಡ್ಮಾರ್ಕ್ಗಳನ್ನು ಒಳಗೊಳ್ಳಬಹುದಾದ ಯಾವುದೇ ಉತ್ಪನ್ನಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ್ದರೂ ಕೂಡ. ಸೇವೆಯಲ್ಲಿ ಅಂಥ ತೃತೀಯ ಪಕ್ಷಗಳ ಉಪಸ್ಥಿತಿ, ಅಥವಾ ಅಂಥ ತೃತೀಯ ಪಕ್ಷಗಳಿಂದ ಯಾವುದೇ ರೀತಿಯಲ್ಲಿ ಸೇವೆಯ ಬಳಕೆಯಿಂದಾಗಿ ಯಾವುದೇ ತೃತೀಯ ಪಕ್ಷಗಳ ಜೊತೆಗಿನ ಇಂಥ ಯಾವುದೇ ವ್ಯವಹಾರಗಳಿಂದ ಉಂಟಾದ ಯಾವುದೇ ನಷ್ಟ ಅಥವಾ ಹಾನಿಗೆ ನಾವು ಯಾವುದೇ ರೀತಿಯಲ್ಲೂ ಜವಾಬ್ದಾರರಾಗಲಿ ಬಾಧ್ಯಸ್ಥರಾಗಲಿ ಆಗಿರುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ
 17. ಲಿಂಕ್ಗಳು
  ಸೇವೆಯು ಅಥವಾ ತೃತೀಯ ಪಕ್ಷಗಳು ಬೇರೆ ವಿಶ್ವವ್ಯಾಪಿ ಜಾಲಕ್ಕೆ ಅಥವಾ ಬೇರೆ ಆನ್ಲೈನ್ ವಿದ್ಯುನ್ಮಾನ ಸೈಟ್ಗಳು ಅಥವಾ ಸಂಪನ್ಮೂಲಗಳಿಗೆ ಲಿಂಕ್ಗಳನ್ನು ಒದಗಿಸಬಹುದು. Yahoo ಅಂಥ ಸೈಟ್ಗಳು ಅಥವಾ ಸಂಪನ್ಮೂಲಗಳಿಗೆ ಯಾವುದೇ ನಿಯಂತ್ರಣವನ್ನೂ ಹೊಂದಿರುವುದಿಲ್ಲ ಎಂಬುದಕ್ಕೆ ನೀವು ಸಮ್ಮತಿಸುತ್ತೀರಿ, Yahoo ಇಂಥ ಬಾಹ್ಯ ಸೈಟ್ಗಳು ಅಥವಾ ಸಂಪನ್ಮೂಲಗಳ ಲಭ್ಯತೆಗೆ ಜವಾಬ್ದಾರವಾಗಿರುವುದಿಲ್ಲ ಮತ್ತು ಯಾವುದೇ ವಿಷಯ, ಜಾಹೀರಾತು, ಉತ್ಪನ್ನಗಳು, ಅಥವಾ ಅಂಥ ಸೈಟ್ಗಳು ಅಥವಾ ಸಂಪನ್ಮೂಲಗಳಿಂದ ಲಭ್ಯವಿರುವ ಬೇರೆ ವಿಷಯಗಳನ್ನು ಎಂಡಾರ್ಸ್ ಮಾಡುವುದಿಲ್ಲ ಮತ್ತು ಇದಕ್ಕೆ ಜವಾಬ್ದಾರವಾಗಿರುವುದಿಲ್ಲ ಅಥವಾ ಬಾಧ್ಯಸ್ಥವಾಗಿಯೂ ಇರುವುದಿಲ್ಲ ಎಂಬುದನ್ನು ಕೂಡ ಮಾನ್ಯ ಮಾಡುತ್ತೀರಿ. ಅಂಥ ಸೈಟ್ ಅಥವಾ ಸಂಪನ್ಮೂಲದ ಮೂಲಕ ಲಭ್ಯವಿರುವ ಅಂಥ ಯಾವುದೇ ವಿಷಯ, ವಸ್ತುಗಳು ಅಥವಾ ಸೇವೆಗಳ ಬಳಕೆಯಿಂದ ಅಥವಾ ಅವುಗಳ ಅವಲಂಬನೆಯಿಂದ ಅಥವಾ ಅದಕ್ಕೆ ಸಂಬಂಧಿಸಿ ಉಂಟಾದ ಅಥವಾ ಉಂಟಾಗಿರುವುದಾಗಿ ಆರೋಪಿತವಾದ ಯಾವುದೇ ನಷ್ಟ ಅಥವಾ ಹಾನಿಗೆ Yahoo ಏನೇ ಆದರೂ ಯಾವುದೇ ರೀತಿಯಲ್ಲಿ ಜವಾಬ್ದಾರವಾಗಲಿ ಅಥವಾ ಬಾಧ್ಯಸ್ಥವಾಗಲಿ ಆಗಿರುವುದಿಲ್ಲ ಎಂಬುದನ್ನು ಕೂಡ ಮಾನ್ಯ ಮಾಡುತ್ತೀರಿ.
 18. YAHOO ನ ಮಾಲೀಕತ್ವದ ಹಕ್ಕುಗಳು
  ಸೇವೆ ಮತ್ತು ಸೇವೆಗೆ ("ಸಾಫ್ಟ್ವೇರ್") ಸಂಬಂಧಿಸಿ ಬಳಕೆ ಮಾಡಿರುವ ಯಾವುದೇ ಅಗತ್ಯ ಸಾಫ್ಟ್ವೇರ್ ಮಾಲಿಕತ್ವದ ಮತ್ತು ಗೌಪ್ಯವಾದ ಮಾಹಿತಿಯನ್ನು ಹೊಂದಿದ್ದು ಅದನ್ನು ಅನ್ವಯಿಸುವ ಬೌದ್ಧಿಕ ಹಕ್ಕುಸ್ವಾಮ್ಯ ಹಾಗೂ ಬೇರೆ ಕಾನೂನುಗಳಿಂದ ಸಂರಕ್ಷಿಸಲಾಗುತ್ತದೆ ಎಂಬುದಕ್ಕೆ ನೀವು ಮಾನ್ಯ ಮಾಡುತ್ತೀರಿ ಮತ್ತು ಒಪ್ಪುತ್ತೀರಿ. ಪ್ರಾಯೋಜಕ ಜಾಹೀರಾತುಗಳಲ್ಲಿ ಇರುವ ವಿಷಯ ಅಥವಾ ನಿಮಗೆ ಸೇವೆಯ ಅಥವಾ ಜಾಹೀರಾತುದಾರರ ಮುಖಾಂತರ ಪ್ರಸ್ತುತಪಡಿಸಿರುವ ಮಾಹಿತಿಯನ್ನು ಕೃತಿಸ್ವಾಮ್ಯ, ಟ್ರೇಡ್ಮಾರ್ಕ್ಗಳು, ಸೇವಾ ಗುರುತುಗಳು, ಪೇಟೆಂಟ್ಗಳು ಅಥವಾ ಬೇರೆ ಮಾಲಿಕತ್ವದ ಹಕ್ಕುಗಳು ಮತ್ತು ಕಾನೂನುಗಳಿಂದ ರಕ್ಷಿಸಲಾಗುತ್ತದೆ ಎಂಬುದನ್ನು ಕೂಡ ನೀವು ಮಾನ್ಯ ಮಾಡುತ್ತೀರಿ. ನಾವು ಅಥವಾ ಜಾಹೀರಾತುದಾರರು ಅಭಿವ್ಯಕ್ತವಾಗಿ ಅನುಮತಿ ನೀಡಿರುವುದನ್ನು ಹೊರತುಪಡಿಸಿ, ನೀವು ಸೇವೆ, ಸಾಫ್ಟ್ವೇರ್ ಅಥವಾ ಪೂರ್ಣ ಅಥವಾ ಭಾಗಶಃ ವಿಷಯವನ್ನು (ನೀವೇ ರಚಿಸಿರುವ ವಿಷಯವನ್ನು ಹೊರತುಪಡಿಸಿ) ಆಧರಿಸಿ ಪರಿವರ್ತನೆ, ಅಳವಡಿಕೆ, ಬಾಡಿಗೆ, ಭೋಗ್ಯ, ಸಾಲ, ಮಾರಾಟ, ವಿತರಣೆ ಅಥವಾ ಸಾಧಾರ ಕೃತಿಗಳ ರಚನೆಯನ್ನು ಮಾಡದೇ ಇರಲು ನೀವು ಒಪ್ಪುತ್ತೀರಿ.

  ನೀವು ನಕಲು, ಮಾರ್ಪಾಟು, ಸಾಧಾರ ಕೃತಿಗಳ ರಚನೆ, ರಿವರ್ಸ್ ಎಂಜಿನಿಯರ್, ರಿವರ್ಸ್ ಅಸೆಂಬಲ್ ಮಾಡದೇ ಇದ್ದಲ್ಲಿ ಅಥವಾ ಬೇರೆ ರೀತಿಯಲ್ಲಿ ಯಾವುದೇ ಆಕರ ಕೋಡ್ ಪತ್ತೆಮಾಡಲು ಪ್ರಯತ್ನಿಸದೇ ಇದ್ದಲ್ಲಿ, ಮಾರಾಟ, ನಿಯೋಜನೆ, ಉಪಪರವಾನಗಿ, ಸುರಕ್ಷತಾ ಆಸಕ್ತಿಯ ನೀಡಿಕೆ ಅಥವಾ ಬೇರೆ ರೀತಿಯಲ್ಲಿ ಸಾಫ್ಟ್ವೇರಿನಲ್ಲಿನ ಯಾವುದೇ ಹಕ್ಕನ್ನು ವರ್ಗಾವಣೆ ಮಾಡದೇ ಇದ್ದ ಪಕ್ಷದಲ್ಲಿ Yahoo ನಮ್ಮ ಸಾಫ್ಟ್ವೇರಿನ ಆಬ್ಜೆಕ್ಟ್ ಕೋಡ್ ಅನ್ನು ಏಕೈಕ ಕಂಪ್ಯೂಟರಿನಲ್ಲಿ ಬಳಕೆ ಮಾಡಲು ವೈಯಕ್ತಿಕ, ವರ್ಗಾವಣೆರಹಿತ ಮತ್ತು ವಿಶೇಷವಲ್ಲದ ಹಕ್ಕನ್ನು ಮತ್ತು ಪರವಾನಗಿಯನ್ನು ನೀಡುತ್ತದೆ. ಸೇವೆಗೆ ಅನಧಿಕೃತ ಪರವಾನಗಿ ಪಡೆಯುವ ಉದ್ದೇಶವೂ ಸೇರಿದಂತೆ ಆದರೆ ಅದಕ್ಕೆ ಸೀಮಿತವಾಗದಂತೆ, ನೀವು ಯಾವುದೇ ವಿಧ ಅಥವಾ ರೂಪದಲ್ಲಿ ಸಾಫ್ಟ್ವೇರ್ ಅನ್ನು ಬದಲಾವಣೆ ಮಾಡದೇ ಇರಲು, ಅಥವಾ ಸಾಫ್ಟ್ವೇರಿನ ಪರಿವರ್ತಿತ ಆವೃತ್ತಿಗಳನ್ನು ಬಳಕೆ ಮಾಡದೇ ಇರಲು ಒಪ್ಪುತ್ತೀರಿ. ನೀವು ಪ್ರವೇಶದಲ್ಲಿನ ಬಳಕೆಗಾಗಿ Yahoo ಒದಗಿಸಿರುವ ಇಂಟರ್ಫೇಸ್ ಹೊರತುಪಡಿಸಿ ಬೇರೆ ಯಾವುದೇ ವಿಧದಲ್ಲೂ ಸೇವೆಯನ್ನು ಪ್ರವೇಶಿಸದೇ ಇರುವುದಕ್ಕೆ ಒಪ್ಪುತ್ತೀರಿ.
 19. ವಾರೆಂಟಿಗಳ ಡಿಸ್ಕ್ಲೇಮರ್
  ಇವನ್ನು ನೀವು ಅಭಿವ್ಯಕ್ತವಾಗಿ ಅರ್ಥಮಾಡಿಕೊಂಡಿದ್ದೀರಿ ಮತ್ತು ಒಪ್ಪುತ್ತೀರಿ:
  1. ಸೇವೆಯನ್ನು ಪ್ರವೇಶಿಸುವುದು ಅಥವಾ ಬಳಕೆ ಮಾಡುವುದರ ಅಪಾಯಕ್ಕೆ ನೀವು ಮಾತ್ರವೇ ಜವಾಬ್ದಾರರು. ಸೇವೆಯನ್ನು "ಇರುವಂತೆ" ಮತ್ತು "ಲಭ್ಯವಿರುವಂತೆ" ಎಂಬ ಆಧಾರದ ಮೇಲೆ ಒದಗಿಸಲಾಗುತ್ತದೆ. ನಾವು ಮತ್ತು ನಮ್ಮ ಪರವಾನಗಿದಾತರು, ಪೂರೈಕೆದಾರರು, ಮೂಲ ಕಂಪನಿ, ಹಿಡುವಳಿ ಕಂಪನಿ, ಅಂಗಸಂಸ್ಥೆ, ಮತ್ತು ಸಂಬಂಧಿತ ಕಂಪನಿಗಳು, ಸದಸ್ಯರು, ಕಚೇರಿಗಳು, ಏಜೆಂಟರು ಮತ್ತು ಉದ್ಯೋಗಿಗಳು ವ್ಯಾಪಾರತ್ವ, ನಿರ್ದಿಷ್ಟ ಉದ್ದೇಶಕ್ಕಾಗಿ ಅರ್ಹತೆ ಮತ್ತು ಮುಟ್ಟುಗೋಲು ನಿರೋಧವೂ ಸೇರಿದಂತೆ ಆದರೆ ಇದಕ್ಕೆ ಸೀಮಿತವಾಗದಂತೆ ಅಭಿವ್ಯಕ್ತ ಅಥವಾ ಆನ್ವಯಿಕವಾದ ಯಾವುದೇ ಬಗೆಯ ವಾರಂಟಿಗಳನ್ನು ನಿರಾಕರಿಸುತ್ತಾರೆ.
  2. Yahoo ಮತ್ತು ಅದರ ಪರವಾನಗಿದಾತರು, ಸರಬರಾಜುದಾರರು, ಮಾರಾಟಗಾರರು, ಹಿಡುವಳಿ ಕಂಪನಿ, ಅಂಗಸಂಸ್ಥೆಗಳು ಮತ್ತು ಸಂಬಂಧಿತ ಕಂಪನಿಗಳು, ಸದಸ್ಯರು, ಅಧಿಕಾರಿಗಳು, ಏಜೆಂಟರು ಮತ್ತು ಉದ್ಯೋಗಿಗಳು ಅದಕ್ಕೆ ವಾರಂಟಿಯನ್ನು ನೀಡುವುದಿಲ್ಲ
   1. ಸೇವೆಯು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ,
   2. ಸೇವೆಯು ಅನಿರ್ಬಂಧಿತವಾಗಿದ್ದು ಸಕಾಲಿಕ, ಸುರಕ್ಷಿತ, ಅಥವಾ ದೋಷರಹಿತವಾಗಿರುತ್ತದೆ,
   3. ಸೇವೆಯನ್ನು ಯಾವುದೇ ಸಮಯದಲ್ಲಿ ಅಥವಾ ಎಲ್ಲ ಸಮಯದಲ್ಲಿ ನೀವು ಆಯ್ಕೆಮಾಡಿರುವ ಅಥವಾ ಬಳಕೆ ಮಾಡುವ ಚಾನೆಲ್ ಮೂಲಕ ಪ್ರವೇಶಿಸಲಾಗುತ್ತದೆ,
   4. ಒಳಗೊಂಡಿರುವ, ವಿತರಿಸಿರುವ, ಅಥವಾ ಲಿಂಕ್ ಮಾಡಿರುವ, ಡೌನ್ಲೋಡ್ ಮಾಡಿರುವ ಅಥವಾ ಸೇವೆಯಿಂದ ಅಥವಾ ಸೇವೆಯ ಮೂಲಕ ಪ್ರವೇಶಿಸಿರುವ ಮಾಹಿತಿ, ವಿಷಯ ಅಥವಾ ಜಾಹೀರಾತುಗಳನ್ನು (ಸಮಗ್ರವಾಗಿ "ವಿಷಯ") ಅಥವಾ ಸೇವೆಯ ಬಳಕೆಯಿಂದ ಪಡೆದಿರುವ ಫಲಿತಾಂಶಗಳು ನಿಖರವಾಗಿರುತ್ತವೆ ಅಥವಾ ವಿಶ್ವಾಸಾರ್ಹವಾಗಿರುತ್ತವೆ,
   5. ನೀವು ಪ್ರದರ್ಶಿಸಿರುವ, ಖರೀದಿ ಮಾಡಿರುವ ಅಥವಾ ಸೇವೆಯ ಮೂಲಕ ಪಡೆದುಕೊಂಡಿರುವ ("ಉತ್ಪನ್ನಗಳು") ಯಾವುದೇ ಉತ್ಪನ್ನಗಳು, ಸೇವೆಗಳು, ಮಾಹಿತಿ, ಅಥವಾ ಬೇರೆ ವಸ್ತುಗಳ ಗುಣಮಟ್ಟವು ನಿಮ್ಮ ನಿರೀಕ್ಷೆಗಳನ್ನು ಪೂರೈಸುತ್ತದೆ
   6. ಸಾಫ್ಟ್ವೇರಿನಲ್ಲಿರುವ ಯಾವುದೇ ದೋಷಗಳನ್ನು ಸರಿಪಡಿಸಲಾಗುತ್ತದೆ.
  3. ಈ ಸೇವೆಯನ್ನು ಬಳಕೆ ಮಾಡಿ ಯಾವುದೇ ವಿಷಯವನ್ನು ಡೌನ್ಲೋಡ್ ಮಾಡುವುದು ಅಥವಾ ಬೇರೆ ರೀತಿಯಲ್ಲಿ ವಿಷಯವನ್ನು ಪಡೆಯುವುದು ನಿಮ್ಮ ರಿಸ್ಕ್ಗೆ ಬಿಟ್ಟಿದ್ದು ಮತ್ತು ನಿಮ್ಮ ಕಂಪ್ಯೂಟರ್ ವ್ಯವಸ್ಥೆ, ಮೊಬೈಲ್ ದೂರವಾಣಿಗೆ ದೂರವಾಣಿಗೆ ಅಥವಾ ಬೇರೆ ಪ್ರವೇಶ ಸಾಧನಕ್ಕೆ ಉಂಟಾಗುವ ಯಾವುದೇ ಹಾನಿ ಅಥವಾ ಅಂಥ ಯಾವುದೇ ವಿಷಯದ ಡೌನ್ಲೋಡ್ನಿಂದಾಗಿ ಉಂಟಾಗುವ ದತ್ತಾಂಶದ ನಷ್ಟಕ್ಕೆ ನೀವೇ ಸ್ವತಃ ಜವಾಬ್ದಾರರಾಗಿರುತ್ತೀರಿ.
  4. ಯಾವುದೇ ಅವಲಂಬನೆ ಅಥವಾ ವಸ್ತುಗಳ ಬಳಕೆಯನ್ನು ನಿಮ್ಮ ಸ್ವಂತ ತೀರ್ಮಾನದಲ್ಲಿ ಮಾಡಬೇಕು ಮತ್ತು ಅದಕ್ಕೆ ನೀವೇ ಹೊಣೆಯಾಗಿರುತ್ತೀರಿ. ನಾವು ನಮ್ಮ ಸ್ವಂತ ತೀರ್ಮಾನದ ಅನುಸಾರ ಮತ್ತು ಯಾವುದೇ ಬಾಧ್ಯತೆಯೂ ಇಲ್ಲದಂತೆ, ಯಾವುದೇ ಸುಧಾರಣೆಗಳನ್ನು ಮಾಡುವ ಅಥವಾ ಸೇವೆ ಅಥವಾ ವಸ್ತುಗಳ ಯಾವುದೇ ಭಾಗದಲ್ಲಿನ ಯಾವುದೇ ದೋಷವನ್ನು ಅಥವಾ ಬಿಟ್ಟುಹೋಗಿರುವುದನ್ನು ಸರಿಪಡಿಸುವ ಹಕ್ಕನ್ನು ಕಾಯ್ದಿರಿಸುತ್ತೇವೆ. ವಸ್ತುಗಳನ್ನು ನಮಗೆ ಇರುವಂತೆ ಮತ್ತು ಲಭ್ಯವಿರುವಂತೆ ಎಂಬ ಆಧಾರದ ಮೇಲೆ ಒದಗಿಸಲಾಗುತ್ತದೆ ಹಾಗೂ ನಾವು ಯಾವುದೇ ವಸ್ತುಗಳು ಅಥವಾ ಉತ್ಪನ್ನಗಳಿಗೆ ಸಂಬಂಧಿಸಿ ಅಭಿವ್ಯಕ್ತವಾಗಿ ವ್ಯಾಪಾರತ್ವ ಮತ್ತು ನಿರ್ದಿಷ್ಟ ಉದ್ದೇಶಕ್ಕಾಗಿ ಅರ್ಹತೆಗೆ ಸಂಬಂಧಿಸಿದ ಯಾವುದೇ ಅಥವಾ ಎಲ್ಲ ವಾರಂಟಿಗಳನ್ನು ನಿರಾಕರಿಸುತ್ತೇವೆ.
  5. ನೀವು yahoo ಅಥವಾ ಅದರ ಪರವಾನಗಿದಾತರು, ಸರಬರಾಜುದಾರರು, ಮಾರಾಟಗಾರರು, ಮೂಲ ಕಂಪನಿ, ಹಿಡುವಳಿ ಕಂಪನಿ, ಅಂಗಸಂಸ್ಥೆ ಮತ್ತು ಸಂಬಂಧಿತ ಕಂಪನಿಗಳು, ಅಧಿಕಾರಿಗಳು, ಏಜೆಂಟರು ಮತ್ತು ಉದ್ಯೋಗಿಗಳಿಂದ ಮಾತಿನ ಅಥವಾ ಲಿಖಿತ ರೂಪದ ಸಲಹೆ ಅಥವಾ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ ಅಥವಾ ಸೇವೆಯಿಂದ ಅಥವಾ ಸೇವೆಯ ಮೂಲಕ ಸೇವಾ ನಿಬಂಧನೆಯಲ್ಲಿ ಅಭಿವ್ಯಕ್ತವಾಗಿ ಹೇಳದೇ ಇರುವ ಯಾವುದೇ ವಿಷಯವು ಯಾವುದೇ ವಾರಂಟಿಯನ್ನೂ ಒದಗಿಸುವುದಿಲ್ಲ.
 20. ಬಾಧ್ಯತೆಯ ಇತಿಮಿತಿಗಳು ನಮ್ಮ ಪರವಾನಗಿದಾತರು, ಸರಬರಾಜುದಾರರು, ಮಾರಾಟಗಾರರು, ಮೂಲ ಕಂಪನಿ, ಹಿಡುವಳಿ ಕಂಪನಿ, ಅಂಗ ಸಂಸ್ಥೆ ಮತ್ತು ಸಂಬಂಧಪಟ್ಟ ಕಂಪನಿಗಳು, ಸದಸ್ಯರು, ಅಧಿಕಾರಿಗಳು, ಏಜೆಂಟರು ಮತ್ತು ಉದ್ಯೋಗಿಗಳು ಕೆಳಗೆ ತಿಳಿಸಲಾಗಿರುವ ಅಂಶಗಳಿಂದುಂಟಾಗುವ ಲಾಭಗಳ ನಷ್ಟದ ಹಾನಿಗಳು, ಪ್ರಖ್ಯಾತಿ, ಬಳಕೆ, ದತ್ತಾಂಶ ಅಥವಾ ಇತರ ನಷ್ಟಗಳನ್ನು ಒಳಗೊಂಡಂತೆ ಆದರೆ ಅಷ್ಟಕ್ಕೇ ಸೀಮಿತವಲ್ಲದಂತೆ ಯಾವುದೇ ನೇರ, ಪರೋಕ್ಷ, ಪ್ರಾಸಂಗಿಕ, ವಿಶೇಷ, ಅನುಗತ ಅಥವಾ ಎಚ್ಚರಿಕೆಯ ಹಾನಿಗಳಿಗೆ (ಒಂದು ವೇಳೆ ನಾವು ಅಥವಾ ನಮ್ಮ ಪರವಾನಗಿದಾರರು, ಸರಬರಾಜುದಾರರು, ಮಾರಾಟಗಾರರು, ಮೂಲ ಕಂಪನಿ, ಹಿಡುವಳಿ ಕಂಪನಿ, ಅಂಗ ಕಂಪನಿ ಮತ್ತು ಸಂಬಂಧಪಟ್ಟ ಕಂಪನಿಗಳು, ಸದಸ್ಯರು, ಅಧಿಕಾರಿಗಳು, ಏಜೆಂಟರು ಮತ್ತು ಉದ್ಯೋಗಿಗಳಿಗೆ ಅಂತಹ ಹಾನಿಗಳ ಸಂಭಾವ್ಯತೆಯ ಸಲಹೆ ನೀಡಲ್ಪಟ್ಟಿದ್ದರೂ ಸಹ) ಹೊಣೆಗಾರರಾಗುವುದಿಲ್ಲ ಎಂಬುದನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಒಪ್ಪಬೇಕು:
  1. ಸೇವೆ, ವಿಷಯಕಗಳು ಮತ್ತು ಉತ್ಪನ್ನಗಳು;
  2. ಸೇವೆಯ ಬಳಕೆ ಅಥವಾ ಬಳಕೆಯ ಅಸಾಮರ್ಥ್ಯ;
  3. ಖರೀದಿಸಿದ ಅಥವಾ ಪಡೆದ ಯಾವುದೇ ಸರಕುಗಳು, ದತ್ತಾಂಶ, ಮಾಹಿತಿ ಅಥವಾ ಸೇವೆಗಳ ಅಥವಾ ಸ್ವೀಕರಿಸಿದ ಸಂದೇಶಗಳ ಅಥವಾ ಸೇವೆಯ ಮೂಲಕ ಅಥವಾ ಸೇವೆಯಿಂದ ನಡೆದ ವ್ಯವಹಾರಗಳ ಫಲವಾಗಿ ಬದಲಿ ಸರಕುಗಳ ಮತ್ತು ಸೇವೆಗಳ ಸಂಗ್ರಹಣೆ ವೆಚ್ಚ;
  4. ನಿಮ್ಮ ಸಂವಹನಗಳು ಮತ್ತು ದತ್ತಾಂಶಗಳಿಗೆ ಅನಧಿಕೃತ ಗಮ್ಯತೆ ಅಥವಾ ಮಾರ್ಪಾಡು;
  5. ಸೇವೆಯಲ್ಲಿ ಯಾವುದೇ ತೃತೀಯ ಪಕ್ಷದ ಹೇಳಿಕೆಗಳು ಅಥವಾ ನಿರ್ದೇಶನ;
  6. ಸೇವೆಯನ್ನು ಬಳಸಿಕೊಂಡು ಯಾವುದೇ ಸರಕುಗಳ ಅಥವಾ ಸೇವೆಗಳ ವಿಲೇವಾರಿ ಅಥವಾ ಸಂದೇಶಗಳ ರವಾನೆ ಅಥವಾ ಸ್ವೀಕರಿಸುವಿಕೆ; ಅಥವಾ
  7. ಸೇವೆ, ವಿಷಯಕಗಳು ಅಥವಾ ಉತ್ಪನ್ನಗಳಿಗೆ ಸಂಬಂಧಿಸಿದ ಯಾವುದೇ ಇತರ ವಿಷಯ.
 21. ಬಹಿಷ್ಕರಣಗಳು ಮತ್ತು ಇತಿಮಿತಿಗಳು ಪರಿಚ್ಛೇದ 17 ಮತ್ತು 18 ರಲ್ಲಿ ನಿರೂಪಿಸಿರುವ ಹಕ್ಕು ನಿರಾಕರಣೆಗಳು ಮತ್ತು ಬಹಿಷ್ಕರಣಗಳು ನಿಮ್ಮ ಮತ್ತು ನಮ್ಮ ನಡುವಿನ ಒಪ್ಪಂದದ ಅಪಾಯಗಳು ಮತ್ತು ಲಾಭಗಳ ಒಂದು ನ್ಯಾಯಸಮ್ಮತ ಮತ್ತು ತರ್ಕಬದ್ಧ ಹಂಚಿಕೆಯನ್ನು ಪ್ರತಿನಿಧಿಸುತ್ತವೆ ಎಂಬುದನ್ನು, ನಮಗೆ ನೀವು ಒದಗಿಸಿದ ಮೌಲ್ಯದ ಮಿತಿಯಿಲ್ಲದಂತೆ ಹಾಗೂ ಹೇಳಲಾದ ಅಪಾಯಗಳಿಗೆ ಅನುಗುಣವಾಗಿ ಲಭ್ಯತೆ ಮತ್ತು ವಿಮೆ ವೆಚ್ಚಗಳು ಒಳಗೊಂಡಂತೆ ಎಲ್ಲಾ ಪ್ರಸ್ತುತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನೀವು ಮಾನ್ಯಮಾಡಿದ್ದೀರಿ. ಮುಂದಕ್ಕೆ ಈ ಹಕ್ಕು ನಿರಾಕರಣೆಗಳು ಮತ್ತು ಬಹಿಷ್ಕರಣೆಗಳನ್ನು ಅನ್ವಯಿಸಬಹುದಾದ ಕಾನೂನು ಅನುಮತಿ ನೀಡುವ ಸಂಪೂರ್ಣ ವ್ಯಾಪ್ತಿಯವರೆಗೆ ನಿರ್ಬಂಧಪಡಿಸಬಹುದು ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ.
 22. ಹಣಕಾಸು ವಿಷಯಗಳಿಗೆ ಸಂಬಂಧಿಸಿದ ಸೇವೆಗಳಿಗಾಗಿ ವಿಶೇಷ ಎಚ್ಚರಿಕೆಗಳು ಸೇವಾ ಸಂಬಂಧಿ ಕಂಪನಿಗಳು, ಸ್ಟಾಕ್ ಬೆಲೆಗಳು, ಹೂಡಿಕೆಗಳು ಅಥವಾ ಸೆಕ್ಯುರಿಟಿಗಳಿಂದ ನೀವು ಯಾವುದೇ ಸೇವೆ ರೂಪಿಸಲು ಅಥವಾ ಸೇರಲು, ಯಾವುದೇ ವರ್ತಮಾನಗಳು, ಸಂದೇಶಗಳು, ಹುಷಾರಿಗಳು ಅಥವಾ ಇತರ ಮಾಹಿತಿಯನ್ನು ಪಡೆಯಲು ಅಥವಾ ಮನವಿ ಮಾಡಲು ಉದ್ದೇಶಿದ್ದರೆ ದಯಮಾಡಿ ಮೇಲಿನ 19 ಮತ್ತು 20 ನೇ ಪರಿಚ್ಛೇದಗಳನ್ನು ಮತ್ತೊಮ್ಮೆ ಓದಿ.. ಅವು ನಿಮಗಾಗಿ ದ್ವಿವಿಧವಾಗಿ ಹೋಗಬಹುದು. ಅದರ ಜೊತೆಗೆ, ಈ ರೀತಿಯ ಮಾಹಿತಿ ನಿರ್ದಿಷ್ಟವಾಗಿ, “ಹೂಡಿಕೆದಾರರು ಎಚ್ಚರಿಕೆಯಿಂದರಲು ಬಿಡಿ” ಪದಗುಚ್ಛಕ್ಕೆ ಹೊಂದುತ್ತದೆ. ಸೇವೆಯನ್ನು ತಿಳಿವಳಿಕೆಯ ಉದ್ದೇಶದಿಂದ ಮಾತ್ರ ಒದಗಿಸಲಾಗಿದೆ, ಮತ್ತು ಸೇವೆಯಲ್ಲಿ ಒಳಗೊಂಡಿರುವ ಯಾವುದೇ ವಿಷಯವು ವಹಿವಾಟು ಅಥವಾ ಹೂಡಿಕೆ ಸಂಕಲ್ಪಗಳನ್ನು ಉದ್ದೇಶಿಸಿದ್ದಲ್ಲ. ಸೇವೆಯ ಮೂಲಕ ರವಾನಿಸಿದ ಅಥವಾ ಲಭ್ಯಗೊಳಿಸಿದ ಯಾವುದೇ ಮಾಹಿತಿಯ ನಿಖರತೆ, ಉಪಯುಕ್ತತೆ ಅಥವಾ ಲಭ್ಯತೆಗೆ Yahoo! ಮತ್ತು ಅದರ ಪರವಾನಗಿದಾರರು ಹೊಣೆಗಾರರು ಅಥವಾ ಬಾಧ್ಯಸ್ಥರಾಗುವುದಿಲ್ಲ, ಮತ್ತು ಅಂತಹ ಮಾಹಿತಿ ಆಧರಿಸಿದ ಯಾವುದೇ ವಹಿವಾಟು ಅಥವಾ ಹೂಡಿಕೆ ನಿರ್ಧಾರಗಳಿಗೆ ಹೊಣೆಗಾರರು ಅಥವಾ ಬಾಧ್ಯಸ್ಥರಾಗುವುದಿಲ್ಲ.
 23. ತೃತೀಯ-ಪಕ್ಷದ ಫಲಾನುಭವಿಗಳು ಇಲ್ಲ ಸೇವಾ ನಿಬಂಧನೆಗಳಲ್ಲಿ ಸ್ಪಷ್ಟವಾಗಿ ಒದಗಿಸಿರುವಂತೆ ಅನ್ಯಥಾ, ಈ ಒಪ್ಪಂದದಲ್ಲಿ ಯಾವುದೇ ತೃತೀಯ-ಪಕ್ಷದ ಫಲಾನುಭವಿಗಳು ಇರುವುದಿಲ್ಲ.
 24. ನೊಟೀಸ್
  ನಿಮಗೆ ನೊಟೀಸ್ಗಳನ್ನು ಇಮೇಲ್ ಅಥವಾ ವಾಡಿಕೆಯ ಅಂಚೆಯ ಮೂಲಕ ನೀಡಬಹುದು.
  ಸೇವೆಯು ಸೇವಾ ನಿಬಂಧನೆಗಳ ಬದಲಾವಣೆಗಳು ಅಥವಾ ಇತರ ವಿಷಯಗಳ ನೋಟೀಸುಗಳನ್ನು ಸೇವೆಯಲ್ಲಿ ಸಾಮಾನ್ಯವಾಗಿ ನೋಟೀಸುಗಳನ್ನು ಅಥವಾ ನೋಟೀಸುಗಳಿಗೆ ಲಿಂಕ್ಗಳನ್ನು ಪ್ರದರ್ಶಿಸುವ ಮೂಲಕ ಸಹ ಒದಗಿಸಬಹುದು. ಇಮೇಲ್ ಅಥವಾ ವಾಡಿಕೆಯ ಅಂಚೆಯ ಮೂಲಕದ ಅಂತಹ ನೋಟೀಸುಗಳು, ಮತ್ತು ಸೇವೆಯಲ್ಲಿ ಸಾಮಾನ್ಯವಾಗಿ ನೋಟೀಸುಗಳು ಅಥವಾ ನೋಟೀಸುಗಳ ಲಿಂಕ್ ಗಳ ಅಂತಹ ಪ್ರದರ್ಶನವು, ನಿಮಗೆ ಆ ಸ್ಥಳದಲ್ಲಿ ಒಳಗೊಂಡಿರುವ ವಿಷಯಗಳ ಕುರಿತು ಸಾಕಷ್ಟು ಮತ್ತು ಸಮರ್ಪಕ ತಿಳಿವಳಿಕೆ ರೂಪಿಸುತ್ತದೆ ಎಂದು ನೀವು ಒಪ್ಪಿದ್ದೀರಿ.
 25. ಟ್ರೇಡ್ಮಾರ್ಕ್ ಮಾಹಿತಿ
  Yahoo ನ ಟ್ರೇಡ್ಮಾರ್ಕ್ಗಳು, ಟ್ರೇಡ್ ನೇಮ್ಗಳು, ಸೇವಾ ಗುರುತುಗಳು, ಮತ್ತು ಬೇರೆ Yahoo ಲೋಗೊಗಳು ಮತ್ತು ಬ್ರಾಂಡ್ ಲಕ್ಷಣಗಳು, ಮತ್ತು ಉತ್ಪನ್ನ ಹಾಗೂ ಸೇವಾ ಹೆಸರುಗಳು Yahoo ಇಂಕ್. ನ ("Yahoo ಗುರುತುಗಳು") ಟ್ರೇಡ್ಮಾರ್ಕ್ಗಳು ಹಾಗೂ ಸ್ವತ್ತುಗಳಾಗಿವೆ. Yahoo ನ ಪೂರ್ವಾನುಮತಿಯಿಲ್ಲದೇ, Yahoo ಗುರುತುಗಳನ್ನು ಪ್ರದರ್ಶಿಸದೇ ಇರಲು ಅಥವಾ ಯಾವುದೇ ರೀತಿಯಲ್ಲೂ ಬಳಕೆ ಮಾಡದೇ ಇರಲು ನೀವು ಒಪ್ಪುತ್ತೀರಿ.
 26. ಕೃತಿಸ್ವಾಮ್ಯ ಅಥವಾ ಬೌದ್ಧಿಕ ಆಸ್ತಿ ಉಲ್ಲಂಘನೆ ಕ್ಲೇಮುಗಳನ್ನು ಮಾಡಲು ನೊಟೀಸ್ ಮತ್ತು ಪ್ರಕ್ರಿಯೆಇತರರ ಬೌದ್ಧಿಕ ಆಸ್ತಿಯನ್ನು Yahoo ಗೌರವಿಸುತ್ತದೆ, ಮತ್ತು ನಮ್ಮ ಬಳಕೆದಾರರಿಗೂ ಅದೇ ರೀತಿ ನಡೆದುಕೊಳ್ಳುವಂತೆ ಕೋರುತ್ತೇವೆ. ಕೃತಿಯನ್ನು ಕೃತಿಸ್ವಾಮ್ಯ ಉಲ್ಲಂಘನೆಯ ರೂಪಕೊಡುವ ರೀತಿಯಲ್ಲಿ ನಕಲು ಮಾಡಲಾಗುತ್ತಿದೆ ಎಂದು ನೀವು ಭಾವಿಸಿದರೆ, ದಯಮಾಡಿ ಈ ಮುಂದಿನ ಮಾಹಿತಿಯನ್ನು Yahoo ನ ಕೃತಿಸ್ವಾಮ್ಯ ಏಜೆಂಟ್ಗೆ ಒದಗಿಸಿ:
  1. ಕೃತಿಸ್ವಾಮ್ಯ ಹಿತಾಸಕ್ತಿಯ ಮಾಲೀಕರ ಪರವಾಗಿ ಕೆಲಸ ಮಾಡಲು ಅಧಿಕೃತ ವ್ಯಕ್ತಿಯ ಒಂದು ವಿದ್ಯುನ್ಮಾನ ಅಥವಾ ಭೌತಿಕ ಸಹಿ
  2. ಉಲ್ಲಂಘನೆಯಾಗಿದೆ ಎಂದು ನೀವು ಕ್ಲೇಮು ಮಾಡಬಹುದಾದ ಕೃತಿಸ್ವಾಮ್ಯಕ್ಕೊಳಪಟ್ಟ ಕೆಲಸದ ಒಂದು ವಿವರಣೆ;
  3. ಉಲ್ಲಂಘನೆಯಾಗುತ್ತಿದೆ ಎಂದು ನೀವು ಕ್ಲೇಮು ಮಾಡುತ್ತಿರುವ ವಿಷಯಕವು ಸೈಟ್ ಮೇಲೆ ಎಲ್ಲಿದೆ ಎಂಬುದರ ಒಂದು ವಿವರಣೆ;
  4. ನಿಮ್ಮ ವಿಳಾಸ, ದೂರವಾಣಿ ಸಂಖ್ಯೆ, ಮತ್ತು ಇಮೇಲ್ ವಿಳಾಸ;
  5. ವಿವಾದಿತ ಬಳಕೆಯು ಕೃತಿಸ್ವಾಮ್ಯದ ಮಾಲೀಕ, ಅದರ ಏಜೆಂಟ್, ಅಥವಾ ಕಾನೂನಿಂದ ಅನುಮತಿ ಪಡೆದಿಲ್ಲ ಎಂಬುದಾಗಿ ನೀವು ಉತ್ತಮ ಪ್ರಾಮಾಣಿಕ ನಂಬಿಕೆ ಹೊಂದಿದ್ದೀರಿ ಎಂಬ ಕುರಿತು ನಿಮ್ಮಿಂದ ಒಂದು ಹೇಳಿಕೆ
  6. ಸುಳ್ಳುಸಾಕ್ಷ್ಯದ ದಂಡನೆಯಡಿ ತರಲು, ನಿಮ್ಮ ನೋಟೀಸಿನಲ್ಲಿರುವ ಮೇಲಿನ ಮಾಹಿತಿಯು ನಿಖರವಾದುದು ಮತ್ತು ನೀವು ಕೃತಿಸ್ವಾಮ್ಯದ ಮಾಲೀಕ ಅಥವಾ ಕೃತಿಸ್ವಾಮ್ಯದ ಮಾಲೀಕರ ಪರವಾಗಿ ಕೆಲಸ ಮಾಡಲು ಅನುಮತಿ ಪಡೆದಿದ್ದೀರಿ ಎಂಬುದಕ್ಕೆ ನಿಮ್ಮಿಂದ ಒಂದು ಹೇಳಿಕೆ
  ಕೃತಿಸ್ವಾಮ್ಯ ಉಲ್ಲಂಘನೆಯ ಕ್ಲೇಮುಗಳ ನೋಟೀಸು ನೀಡಲು Yahoo! ನ ಕೃತಿಸ್ವಾಮ್ಯ ಏಜೆಂಟರನ್ನು ಕೆಳಕಂಡಂತೆ ತಲುಪಬಹುದು:
  ಅಂಚೆಯ ಮೂಲಕ:
  ಕೃತಿಸ್ವಾಮ್ಯ ಏಜೆಂಟ್Yahoo ಇಂಡಿಯ ಪ್ರೈ. ಲಿ.,ಯುನಿಟ್ ಸಂಖ್ಯೆ. 1261, 6ನೇ ಮಹಡಿ, ಕಟ್ಟಡ ಸಂಖ್ಯೆ.12, ಸಾಲಿಟೇರ್ ಕಾರ್ಪೊರೇಟ್ ಪಾರ್ಕ್,ಸಂಖ್ಯೆ. 167, ಗುರು ಹರ್ಗೋವಿಂದ್ ಜಿ ಮಾರ್ಗ್,(ಅಂಧೇರಿ-ಘಟ್ಕೊಪರ್ ಲಿಂಕ್ ರಸ್ತೆ),ಅಂಧೇರಿ (ಪೂರ್ವ), ಮುಂಬೈ - 400 093 ಭಾರತ

  ದೂರವಾಣಿ: +91 22 3308 9600
  ಫ್ಯಾಕ್ಸ್: +91 22 3308 9700
 27. ತೃತೀಯ ಪಕ್ಷಗಳ ಹಕ್ಕುಗಳು ನಮ್ಮ ಪರವಾನಗಿದಾರರು, ಸರಬರಾಜುದಾರರು, ಮಾರಾಟಗಾರರು, ಮೂಲ ಕಂಪನಿ, ಹಿಡುವಳಿ ಕಂಪನಿ, ಅಂಗ ಸಂಸ್ಥೆ ಮತ್ತು ಸಂಬಂಧಪಟ್ಟ ಕಂಪನಿಗಳು, ಎಲ್ಲಾ ಸದಸ್ಯರು, ಮತ್ತು ನಮ್ಮ ಅಧಿಕಾರಿಗಳು, ಏಜೆಂಟರು ಮತ್ತು ಉದ್ಯೋಗಿಗಳು, ಎಲ್ಲಿ ಅನ್ವಯಿಸುತ್ತದೋ ಅಲ್ಲಿ, ಪರಿಚ್ಛೇದ 6, 9, 17, 18 ಮತ್ತು 19 ರ ತೃತೀಯ ಪಕ್ಷದ ಫಲಾನುಭವಿಗಳಾಗಲು ಉದ್ದೇಶಿಸಿದ್ದಾರೆ ಎಂಬುದನ್ನು ನೀವು ಮಾನ್ಯ ಮಾಡುತ್ತೀರಿ. ನಮ್ಮ ಬ್ರಾಂಡ್ ಪಾಲುದಾರರು ಮತ್ತು ಇತರ ಪಾಲುದಾರರು ಪರಿಚ್ಛೇದ 9 ರ ತೃತೀಯ ಪಕ್ಷದ ಫಲಾನುಭವಿಗಳಾಗಲು ಉದ್ದೇಶಿಸಿದ್ದಾರೆ ಎಂಬುದನ್ನು ಸಹ ನೀವು ಮಾನ್ಯ ಮಾಡುತ್ತೀರಿ. ನಮ್ಮ ಪರವಾನಗಿದಾತರು, ಸರಬರಾಜುದಾರರು, ಮಾರಾಟಗಾರರು, ಮೂಲ ಕಂಪನಿ, ಹಿಡುವಳಿ ಕಂಪನಿ, ಅಂಗ ಸಂಸ್ಥೆ ಮತ್ತು ಸಂಬಂಧಪಟ್ಟ ಕಂಪನಿಗಳು, ಎಲ್ಲಾ ಸದಸ್ಯರು, ಮತ್ತು ನಮ್ಮ ಅಧಿಕಾರಿಗಳು, ಏಜೆಂಟರು ಮತ್ತು ಉದ್ಯೋಗಿಗಳು, ಹಾಗೂ ನಮ್ಮ ಬ್ರಾಂಡ್ ಪಾಲುದಾರರು ಮತ್ತು ಇತರ ಪಾಲುದಾರರು, ಪರಿಚ್ಛೇದ 6, 9, 17, 18 and 19 ರ ವಿಧಿಗಳನ್ನು ಅವು ಅನ್ವಯಿಸುವಂತೆ, ಪ್ರತಿಯೊಬ್ಬರೂ, ಬೇರೆಬೇರೆಯಾಗಿ ಮತ್ತು ಅದರ ಸ್ವಂತ ಹಕ್ಕಿನಲ್ಲಿ, ಒಂದು ವ್ಯಾಪ್ತಿವರೆಗೆ, ಈ ಮೊದಲೇ ಹೇಳಿದ್ದರಲ್ಲಿ ಘೋಷಿಸಿರುವ ಅಥವಾ ರೂಪಿಸಿರುವ ಮಾದರಿಯಲ್ಲಿ ಆದರೆ ಮತ್ತೂ ಹೆಚ್ಚಿನ ವ್ಯಾಪ್ತಿಗಲ್ಲದ ಮತ್ತು ಇನ್ನಾವುದೇ ಮಾದರಿಯಲ್ಲಲ್ಲದ ರೀತಿಯಲ್ಲಿ ನಿರ್ಬಂಧಿಸಬಹುದು ಎಂಬುದನ್ನು ನೀವು ಒಪ್ಪಿದ್ದೀರಿ.
 28. ಸಾಮಾನ್ಯ ಮಾಹಿತಿ ಸಂಪೂರ್ಣ ಒಪ್ಪಂದ:ಸೇವಾ ನಿಬಂಧನೆಗಳು ನಿಮ್ಮ ಮತ್ತು Yahoo ನಡುವಿನ ಸಂಪೂರ್ಣ ಒಪ್ಪಂದವನ್ನು ರೂಪಿಸುತ್ತವೆ ಹಾಗೂ ನಿಮ್ಮ ಮತ್ತು ನಮ್ಮ ನಡುವಿನ ಹಿಂದಿನ ಯಾವುದೇ ಒಡಂಬಡಿಕೆಗಳು ಮತ್ತು ಒಪ್ಪಂದಗಳು ಹಾಗೂ ಯಾವುದೇ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ನಡೆದ ಹಿಂದಿನ ಯಾವುದೇ ಹೇಳಿಕೆಗಳು ಮತ್ತು ಮನವಿಗಳನ್ನು ರದ್ದುಪಡಿಸಿ ಸೇವೆಯ ನಿಮ್ಮ ಬಳಕೆಯನ್ನು ನಿರ್ವಹಿಸುತ್ತದೆ ಸೇವಾ ನಿಬಂಧನೆಗಳು ಯಾವುದೇ ಸದಸ್ಯ ಸೇವೆಗಳು, ತೃತೀಯ-ಪಕ್ಷದ ವಿಷಯ ಅಥವಾ ಸೇವೆಯ ಭಾಗವಾಗಿ ಯುಕ್ತವಾಗಿ ಪರಿಗಣಿಸಲಾಗದ ಅಥವಾ ಪರಿಗಣಿಸಲಾಗದಂತಹ ತೃತೀಯ-ಪಕ್ಷದ ಸಾಫ್ಟ್ ವೇರ್ ಗೆ ಅನ್ವಯಿಸುವುದಿಲ್ಲ ಅದನ್ನು ನಿಮಗೆ ನಮ್ಮ ಪರವಾನಗಿದಾತರು, ಸರಬರಾಜುದಾರರು, ಮಾರಾಟಗಾರರು, ಮೂಲ ಕಂಪನಿ, ಹಿಡುವಳಿ ಕಂಪನಿ, ಅಂಗ ಸಂಸ್ಥೆ ಮತ್ತು ಸಂಬಂಧಪಟ್ಟ ಕಂಪನಿಗಳು, ಇತರ ಸದಸ್ಯರು ಅಥವಾ ಇತರ ತೃತೀಯ ಪಕ್ಷಗಳಿಂದ ಒದಗಿಸಿರಬಹುದು, ಅದು ಆ ಪಕ್ಷದಿಂದ ಹೇರಲಾಗುವ ಹೆಚ್ಚುವರಿ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಳಪಡಬಹುದು. ಸದಸ್ಯ ಸೇವೆಗಳು, ತೃತೀಯ-ಪಕ್ಷದ ವಿಷಯ ಅಥವಾ ತೃತೀಯ-ಪಕ್ಷದ ಸಾಫ್ಟ್ ವೇರ್ ಅನ್ನು ನೀವು ಬಳಸಿದರೆ, ಅನ್ವಯವಾಗಬಹುದಾದ ಹೆಚ್ಚುವರಿ ನಿಬಂಧನೆಗಳು ಮತ್ತು ಷರತ್ತುಗಳಿಗೆ ನೀವು ಸಹ ಒಳಪಡಬಹುದು.
  ಆಡಳಿತ ಕಾನೂನು ಮತ್ತು ನ್ಯಾಯವ್ಯಾಪ್ತಿ. ಸೇವಾ ನಿಬಂಧನೆಗಳು ಮತ್ತು ನಿಮ್ಮ ಮತ್ತು Yahoo ನಡುವಿನ ಸಂಬಂಧವು ಭಾರತ ಗಣರಾಜ್ಯದ ಕಾನೂನುಗಳ ಮೂಲಕ ಅದರ ಕಾನೂನು ವಿಧಿಗಳ ಸಂಘರ್ಷವನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ವಹಿಸಲ್ಪಡುತ್ತದೆ. ಭಾರತದ ಮುಂಬೈನಲ್ಲಿರುವ ಖುದ್ದು ಮತ್ತು ಏಕಮಾತ್ರ ನ್ಯಾಯಾಲಯಗಳ ನ್ಯಾಯವ್ಯಾಪ್ತಿಗೆ ಒಳಪಡಲು ನೀವು ಮತ್ತು Yahoo ಒಪ್ಪಿದ್ದೀರಿ.

  ನಿಬಂಧಗಳ ವರ್ಜನ ಮತ್ತು ವಿಚ್ಛೇದನೀಯತೆ. ಸೇವಾ ನಿಬಂಧನೆಗಳ ಯಾವುದೇ ಹಕ್ಕು ಅಥವಾ ವಿಧಿಯನ್ನು ಪ್ರಯೋಗಿಸಲು ಅಥವಾ ನಿರ್ಬಂಧಪಡಿಸುವಲ್ಲಿನ Yahoo ವಿಫಲತೆಯು ಅಂತಹ ಹಕ್ಕು ಅಥವಾ ವಿಧಿಯ ವರ್ಜನವನ್ನು ರೂಪಿಸುವುದಿಲ್ಲ. ಸೇವಾ ನಿಬಂಧನೆಗಳ ಯಾವುದೇ ವಿಧಿಯು ಅಧಿಕಾರಕ್ಕೆ ಒಳಪಟ್ಟ ನ್ಯಾಯಾಲಯದಿಂದ ಅಮಾನ್ಯ ಎಂದು ಕಂಡುಬಂದರೆ, ಆದಾಗ್ಯೂ ವಿಧಿಯಲ್ಲಿ ಪ್ರತಿಬಿಂಬಿತವಾಗಿರುವಂತೆ ಪಕ್ಷಗಳ ಉದ್ದೇಶಗಳನ್ನು ಜಾರಿಗೆ ಕೊಡಲು ನ್ಯಾಯಾಲಯ ಪ್ರಯತ್ನಿಸಬೇಕು, ಮತ್ತು ಸೇವಾ ನಿಬಂಧನೆಗಳ ಇತರ ವಿಧಿಗಳು ಸಂಪೂರ್ಣ ಬಲಯುತ ಮತ್ತು ಪರಿಣಾಮಕಾರಿಯಾಗಿ ಉಳಿಯುತ್ತವೆ ಎಂಬುದನ್ನು ಪಕ್ಷಗಳು ಒಪ್ಪಿವೆ.

  ಜೀವಂತ ವಾರಸುದಾರತ್ವದ ಯಾವುದೇ ಹಕ್ಕಿಲ್ಲ ಮತ್ತು ವರ್ಗಾವಣೆ ಮಾಡುವಂಥದ್ದಲ್ಲ. ನಿಮ್ಮ Yahoo ಖಾತೆಯು ವರ್ಗಾವಣೆ ಸಾಧ್ಯತೆ ಇಲ್ಲದ್ದು ಮತ್ತು ನಿಮ್ಮ ಖಾತೆಯೊಳಗಿರುವ ನಿಮ್ಮ Yahoo ಐಡಿಗಿರುವ ಯಾವುದೇ ಹಕ್ಕುಗಳು ಅಥವಾ ವಿಷಯಗಳು ನಿಮ್ಮ ಮರಣವಾದ ಕೂಡಲೇ ಅಂತ್ಯಗೊಳ್ಳುತ್ತವೆ ಎಂಬುದನ್ನು ನೀವು ಒಪ್ಪಿದ್ದೀರಿ. ಮರಣ ಪ್ರಮಾಣಪತ್ರದ ನಕಲು ಪ್ರತಿ ತಲುಪಿದ ಕೂಡಲೇ, ನಿಮ್ಮ ಖಾತೆಯು ಅಂತ್ಯವಾಗಬಹುದು ಮತ್ತು ಅದರಲ್ಲಿರುವ ಎಲ್ಲಾ ವಿಷಯಗಳು ಶಾಶ್ವತವಾಗಿ ಅಳಿಸಿಹಾಕಲ್ಪಡುತ್ತವೆ.

  ಇತಿಮಿತಿಗಳ ಕಟ್ಟಳೆ. ಯಾವುದೇ ಶಾಸನ ಅಥವಾ ಕಾನೂನಿಗೆ ಪ್ರತಿಯಾಗಿ ಲೆಕ್ಕಿಸದೆ, ಸೇವೆಯ ಬಳಕೆ ಅಥವಾ ಸೇವಾ ನಿಬಂಧನೆಗಳಲ್ಲಿ ಅಥವಾ ಅದಕ್ಕೆ ಸಂಬಂಧಿಸಿದ ಉದ್ಭವಿಸುವ ಯಾವುದೇ ಕ್ಲೇಮು ಅಥವಾ ವ್ಯಾಜ್ಯ ವಿಷಯವನ್ನು ಅಂತಹ ಕ್ಲೇಮು ಅಥವಾ ವ್ಯಾಜ್ಯ ವಿಷಯ ಉದ್ಭವಿಸಿದ ಒಂದು (1) ವರ್ಷದ ಒಳಗೆ ಭರ್ತಿ ಮಾಡಬೇಕು ಅಥವಾ ಎಂದೆಂದಿಗೂ ಪ್ರತಿಬಂಧಿಸಲ್ಪಡುತ್ತದೆ ಎಂಬುದನ್ನು ನೀವು ಒಪ್ಪಿದ್ದೀರಿ.

  ಸೇವಾ ನಿಬಂಧನೆಗಳಲ್ಲಿರುವ ಪರಿಚ್ಛೇದ ಹೆಸರುಗಳು ಅನುಕೂಲಕ್ಕೆ ಮಾತ್ರ ಮತ್ತು ಯಾವುದೇ ಕಾನೂನುಬದ್ಧ ಅಥವಾ ಒಪ್ಪಂದ ಸ್ವರೂಪದ ಪರಿಣಾಮ ಹೊಂದಿಲ್ಲ.
 29. ಉಲ್ಲಂಘನೆಗಳು
  ಸೇವಾ ನಿಬಂಧನೆಗಳ ಯಾವುದೇ ಉಲ್ಲಂಘನೆಯನ್ನು ದಯವಿಟ್ಟು ನಮ್ಮ ಗ್ರಾಹಕ ಸೇವಾ ಗುಂಪಿಗೆ ವರದಿಮಾಡಿ. 
 • oath