ಮೂರನೇ ಪಕ್ಷಗಳು

ಮೇಲಿನ ಮೂರನೇ ಪಕ್ಷದ ಕಂಪನಿಗಳು ಕುಕೀಗಳನ್ನು, ವೆಬ್‌ ಬೀಕನ್‌ಗಳನ್ನು, ಅಪ್ಲಿಕೇಶನ್‌ಗಳನ್ನು, (ಅಥವಾ "ವಿಜೆಟ್‌ಗಳನ್ನು"), ಸಾಫ್ಟ್‌ವೇರ್ ಡೆವಲಪ್‌‌ಮೆಂಟ್ ಕಿಟ್‌ಗಳು (“SDKs”),ಹಾಗೂಇದೇ ರೀತಿಯ ತಂತ್ರಜ್ಞಾನಗಳನ್ನು Yahoo ಸೈಟ್‌ಗಳು ಹಾಗೂ ಆ್ಯಪ್‌ಗಳಲ್ಲಿ ಬಳಸಬಹುದು. ಜೊತೆಗೆ, ನಿಮ್ಮ ಕುರಿತಾದ ಅನಾಮಧೇಯಗೊಳಿಸಿದ ಡೆಮೋಗ್ರಾಫಿಕ್ ಮಾಹಿತಿಯನ್ನು ಒಳಗೊಂಡು ವೈಯಕ್ತಿಕವಲ್ಲದ ಗುರುತು ಮಾಹಿತಿಯನ್ನು ಉತ್ಪನ್ನ ಸುಧಾರಣೆಗಳು, ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ಮತ್ತು ನಿಮಗೆ ಹೆಚ್ಚು ಪ್ರಸ್ತುತ ಅನುಭವಗಳನ್ನು ಒದಗಿಸಲು ಅವರಿಗೆ ಸಹಾಯ ಮಾಡುವುದಕ್ಕಾಗಿ ಪಾಲುದಾರರೊಂದಿಗೆ Yahoo ಹಂಚಿಕೊಳ್ಳಬಹುದು.

Yahoo ನಮ್ಮ ಬಳಕೆದಾರರ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಅವರಿಗೆ ಅತ್ಯಂತ ತೊಡಗಿಸಿಕೊಂಡ ಅನುಭವವನ್ನು ಒದಗಿಸುವ ಉದ್ದೇಶವನ್ನಿಟ್ಟುಕೊಂಡಿದೆ ಹಾಗೂ ಕಾಲಕಾಲಕ್ಕೆ ಕೆಳಗೆ ಪಟ್ಟಿಮಾಡಿರುವ ಕಂಪನಿಗಳನ್ನು ಪರಿಶೀಲಿಸುತ್ತದೆ. ತೃತೀಯ ಪಕ್ಷದ ನೀತಿಗಳಿಗೆ ಯಾವುದೇ ಪರಿಷ್ಕರಣೆಗಳನ್ನು ಮಾಡಬೇಕಾಗಿದ್ದಲ್ಲಿ ದಯವಿಟ್ಟು ಪುನಃ ನಿಯಮಿತವಾಗಿ ಪರಿಶೀಲಿಸಿ.

ಅನಾಲಿಟಿಕ್ಸ್ ಪಾಲುದಾರರು

Yahoo ಕೆಲವು ಪಾಲುದಾರರಿಗೆ Yahoo ಸೈಟ್‌ಗಳ ನೆಟ್‌ವರ್ಕ್‌ನಲ್ಲಿ ವೆಬ್ ಬೀಕನ್‌ಗಳನ್ನು ಸೇರಿಸಿಕೊಳ್ಳಲು ಕೆಲವು ಪಾಲುದಾರರಿಗೆ ಅನುಮತಿಸಬಹುದು ಅಥವಾ ನಮ್ಮ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಪಾಲುದಾರ SDK ಗಳನ್ನು ಸೇರಿಸಿಕೊಳ್ಳಬಹುದು. ನಿಮ್ಮ IP ವಿಳಾಸ ಸೇರಿದಂತೆ ನಮ್ಮ ಲಾಗ್ ಫೈಲ್ ಡೇಟಾದ ಭಾಗಗಳನ್ನು ಈ ಪಾಲುದಾರರ ಜೊತೆಯಲ್ಲಿ ಅನಾಲಿಟಿಕ್ಸ್ ಉದ್ದೇಶಕ್ಕಾಗಿ ಕೂಡ Yahoo ಹಂಚಿಕೊಳ್ಳಬಹುದು. ನಿಮ್ಮ IP ವಿಳಾಸ ವನ್ನು ಹಂಚಿಕೊಂಡಿರುವ ಸಂದರ್ಭದಲ್ಲಿ, ಸಾಮಾನ್ಯ ಸ್ಥಳವನ್ನು ಹಾಗೂ ಸಂಪರ್ಕ ವೇಗದಂತಹ ಬೇರೆ ತಂತ್ರಜ್ಞಾನಗಳನ್ನು, ನೀವು Yahoo ವನ್ನು ಹಂಚಿಕೊಂಡಿರುವ ಸ್ಥಳದಲ್ಲಿ ಭೇಟಿ ಮಾಡಿರುವಿರಾ ಅಥವಾ ಮಾಡಿಲ್ಲವೇ ಮತ್ತು Yahoo ಭೇಟಿಮಾಡಲು ಯಾವ ವಿಧದ ಸಾಧನವನ್ನು ಬಳಕೆ ಮಾಡಿದಿರಿ ಮುಂತಾದ ವಿಷಯಗಳನ್ನು ಊಹಿಸುವುದಕ್ಕಾಗಿ ಈ ಮಾಹಿತಿಯನ್ನು ಬಳಕೆಮಾಡಬಹುದು. ಈ ಪಾಲುದಾರರು ನಮ್ಮ ಜಾಹೀರಾತು ಮತ್ತು Yahoo ನಲ್ಲಿ ನೀವು ಏನು ನೀಡುತ್ತೀರಿ ಅದರ ಬಗ್ಗೆ ಮಾಹಿತಿಯನ್ನು ನಮಗಾಗಿ ಹಾಗೂ ನಮ್ಮ ಜಾಹೀರಾತುದಾರರಿಗೆ ಆಡಿಟಿಂಗ್ ಸಂಶೋಧನೆ ಮತ್ತು ವರದಿ ಮಾಡುವಿಕೆಯನ್ನು ಕಲೆಹಾಕುತ್ತಾರೆ. Yahoo ವೆಬ್ ಬೀಕನ್‌ಗಳು ಮತ್ತು SDK ಗಳಿಗೆ ಅವಕಾಶ ಒದಗಿಸುವುದು ಹಾಗೂ ಕೆಳಗಿನ ಪಾಲುದಾರರೊಂದಿಗೆ ಲಾಗ್ ಫೈಲ್ ಡೇಟಾವನ್ನು ಹಂಚಿಕೊಳ್ಳುವುದು:

ನಾವು ನಮ್ಮ ಜಾಹೀರಾತುದಾರರು ಅಥವಾ ಪಾಲುದಾರರ ಜೊತೆ ನಮ್ಮ ಅನಾಲಿಟಿಕ್ಸ್ ಪ್ರೋಗ್ರಾಂಗಳ ಭಾಗವಾಗಿ ನಿಮ್ಮ Yahoo ಖಾತೆಯಿಂದ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಆದರೆ ನಾವು, ಡೆಮೋಗ್ರಾಫಿಕ್ ಮಾಹಿತಿ ಒಳಗೊಂಡು ಅನಾಧೇಯಗೊಳಿಸಿದ ಮಾಹಿತಿಯನ್ನು ನಮ್ಮ ಜಾಹೀರಾತುದಾರರು ಅಥವಾ ಪಾಲುದಾರರೊಂದಿಗೆ ಹಂಚಿಕೊಳ್ಳುತ್ತೇವೆ.

*Nielsen ನೀವು ಯಾವ ಜಾಹೀರಾತುಗಳನ್ನು Facebook ನಲ್ಲಿ ನೋಡುತ್ತೀರಿ ಎಂಬ ಬಗ್ಗೆ ಮಾಹಿತಿಯನ್ನು ಅಸ್ಪಷ್ಟ ರೂಪದಲ್ಲಿ ಹಂಚಿಕೊಳ್ಳುವುದು. ನೀವು ಲಾಗಿನ್ ಆಗಿರುವ Facebook ಬಳಕೆದಾರರಾಗಿದ್ದಲ್ಲಿ, Facebook ನಿಮ್ಮ ವಯಸ್ಸು ಮತ್ತು ಲಿಂಗವನ್ನು ನಿಮ್ಮ ಜಾಹೀರಾತು ವಿವರಗಳನ್ನು ವೀಕ್ಷಿಸಿ ವಿವರಗಳಿಗೆ ಸೇರಿಸುವುದು. Facebook ಸಂಯೋಜಿತ ಮಾಹಿತಿಯನ್ನು ಒಟ್ಟುಗೂಡಿಸುವುದು ಮತ್ತು ಜಾಹೀರಾತು ಪರಿಣಾಮಕತ್ವ ವರದಿಮಾಡುವಿಕೆಗಾಗಿ Nielsen ಜೊತೆ ಇದನ್ನು ಹಂಚಿಕೊಳ್ಳುವುದು. Nielsen ಗೌಪ್ಯತಾ ಅಭ್ಯಾಸಗಳ ಬಗ್ಗೆ ಹೆಚ್ಚು ತಿಳಿಯುವುದಕ್ಕಾಗಿ ಮತ್ತು ಈ ಹಂಚಿಕೊಳ್ಳುವಿಕೆಯಿಂದ ಹೊರಬರುವುದಕ್ಕಾಗಿ, ಇಲ್ಲಿ ಕ್ಲಿಕ್ ಮಾಡಿ.

ಸಾಮಾಜಿಕ ಬಟನ್‌ಗಳು, ಅಪ್ಲಿಕೇಶನ್‌ಗಳು ಮತ್ತು ವಿಜೆಟ್‌ಗಳು

Yahoo ನಮ್ಮ ಕೆಲವು ಸೈಟುಗಳಲ್ಲಿ ಮತ್ತು ಅಪ್ಲಿಕೇಷನ್‌ಗಳಲ್ಲಿ Yahoo ಬಳಕೆದಾರರಿಂದ ಸಂವಾದ ಅಥವಾ ವಿಷಯ ಹಂಚಿಕೆಗೆ ಅವಕಾಶ ಮಾಡಿಕೊಡುವ ಯಾವುದಾದರೂ ತೃತೀಯ ಪಕ್ಷದ ಅಪ್ಲಿಕೇಶನ್ ಅಥವಾ "ವಿಜೆಟ್" ಅನ್ನು ಅನುಷ್ಠಾನಗೊಳಿಸಬಹುದು. ಈ ವಿಜೆಟ್‌ಗಳು ನೀವು ಭೇಟಿ ನೀಡುವ ಪುಟದಲ್ಲಿ ನಿಮಗೆ ಕಾಣಿಸುವಂತಿರುತ್ತವೆ. ವಿಜೆಟ್ ನೋಟ ಹಾಗೂ ಕಾರ್ಯಶೀಲತೆಯನ್ನು ನಿರ್ವಹಿಸುವುದಕ್ಕಾಗಿ ನಿಯಂತ್ರಣಗಳನ್ನು ವಿಜೆಟ್ ಒದಗಿಸುವ ನೆಟ್‌ವರ್ಕ್ ನಿಮಗೆ ಒದಗಿಸಬಹುದು. ವಿಜೆಟ್ ಜೊತೆ ನಿಮ್ಮ ಸಂವಾದವು ಲಾಕ್ಷಣಿಕವಾಗಿ ತೃತೀಯ ಪಕ್ಷಕ್ಕೆ ನಿಮ್ಮ ಬಗ್ಗೆ ತೃತೀಯ ಪಕ್ಷದ ವೆಬ್ ಬ್ರೌಸರ್ ಕುಕೀಗಳ ಅಥವಾ ಅದರ ನೋಂದಣಿ ಮಾಹಿತಿಯ ಮೂಲಕ ಕೆಲವು ಮಾಹಿತಿಯನ್ನು ಸಂಗ್ರಹಿಸಲು ಅವಕಾಶ ಒದಗಿಸುವುದು. ಕೆಲವು ಸಂದರ್ಭಗಳಲ್ಲಿ ತೃತೀಯ ಪಕ್ಷವು ನಿಮ್ಮನ್ನು ತನ್ನ ವಿಜೆಟ್‌ಗಳ ಮೂಲಕ ಹಾಗೂ ನೀವು ವಿಜೆಟ್ ಮೂಲಕ ಸಂವಾದ ನಡೆಸದಿರುವಾಗ ಕೂಡ ತನ್ನ ಕುಕಿಗಳ ಮೂಲಕ ಗುರುತಿಸಲು ಅವಕಾಶ ಒದಗಿಸುವುದು. ಇದರ ಜೊತೆಯಲ್ಲಿ, ತೃತೀಯ ಪಕ್ಷವು ನಿಮ್ಮ ಐಪಿ ವಿಳಾಸವನ್ನು, ಪುಟದ ಹೆಡರ್ ಮಾಹಿತಿಯನ್ನು ಮತ್ತು ಬ್ರೌಸರ್ ಮಾಹಿತಿಯನ್ನು ಸಂಗ್ರಹಿಸಬಹುದು. Yahoo ಕೆಳಗಿನ ಪಾಲುದಾರರಿಂದ ಸಾಮಾಜಿಕ ಬಟನ್‌ಗಳು, ಅಪ್ಲಿಕೇಷನ್‌ಗಳು, ಮತ್ತು ವಿಡ್ಜೆಟ್‌ಗಳಿಗೆ ಅವಕಾಶ ಒದಗಿಸುವುದು:

ಸಾಮಾಜಿಕ ಬಟನ್‌ಗಳು

ವಿಜೆಟ್‌ಗಳು

ಜಾಹೀರಾತು ತಂತ್ರಜ್ಞಾನಗಳು

ನೀವು Yahoo ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ನೋಡುವ ಹೆಚ್ಚಿನ ಜಾಹೀರಾತುಗಳನ್ನು Yahoo ನೀಡುತ್ತದೆ. ಆದರೆ, ನಾವು ಕೆಲವು ಕಂಪನಿಗಳು ನಮ್ಮ ವೆಬ್ ಸೈಟುಗಳಲ್ಲಿ ಮತ್ತು ಮೊಬೈಲ್ ಅಪ್ಲಿಕೇಷನ್‌ಗಳಲ್ಲಿ ಜಾಹೀರಾತುಗಳನ್ನು ಒದಗಿಸಲು ಹಾಗೂ ಮಾಹಿತಿಯನ್ನು ಸಂಗ್ರಹಿಸಲು ಕೆಲವು ಕಂಪನಿಗಳಿಗೆ ಅವಕಾಶ ಒದಗಿಸುತ್ತೇವೆ. ಅತ್ಯಂತ ಸಾಮಾನ್ಯವಾಗಿ ಇವರೆಂದರೆ ತೃತೀಯ ಪಕ್ಷದ ಸರ್ವರ್‌ಗಳು, ಜಾಹೀರಾತು ಏಜೆನ್ಸಿಗಳು, ಪ್ರಾಯೋಜಿತ ವಿಷಯದ ತಂತ್ರಜ್ಞಾನ ಪೂರೈಕೆದಾರರು, ಮತ್ತು ಸಂಶೋಧನಾ ಸಂಸ್ಥೆಗಳವರು ಆಗಿರುತ್ತಾರೆ.

ಈ ಕಂಪನಿಗಳು ವೆಬ್ ಬೀಕನ್ ಅಥವಾ Yahoo ಸೈಟ್‌ಗಳೊಳಗೆ ಮತ್ತು ಅಪ್ಲಿಕೇಶನ್‌ಗಳೊಳಗೆ SDK ಯನ್ನು ಜಾಹೀರಾತುದಾರರಿಗೆ ಲೆಕ್ಕಪರಿಶೋಧನೆ, ಸಂಶೋಧನೆ, ಹಾಗೂ ವರದಿ ಮಾಡುವಿಕೆಯನ್ನು ಒದಗಿಸುವುದಕ್ಕಾಗಿ ಒಳಗೊಂಡಿರುತ್ತವೆ. ನಿಮ್ಮ ವೆಬ್ ಬ್ರೌಸರ್ ತೃತೀಯ ಪಕ್ಷದ ಸರ್ವರ್‌ನಿಂದ ಈ ಜಾಹೀರಾತುಗಳನ್ನು ಹಾಗೂ ವೆಬ್ ಬೀಕನ್‌ಗಳನ್ನು ವಿನಂತಿಸುವುದರಿಂದ, ಈ ಕಂಪನಿಗಳು ನೀವು ಅವುಗಳ ವೆಬ್‌ಸೈಟ್‌ಗಳಿಂದ ನೇರವಾಗಿ ನೀವು ವೆಬ್ ಪುಟವೊಂದನ್ನು ವಿನಂತಿಸಿದಾಗ ಅವು ತಮ್ಮ ಸ್ವಂತ ಕುಕೀಗಳನ್ನು ವೀಕ್ಷಿಸಬಹುದು, ಸಂಪಾದಿಸಬಹುದುಅಥವಾ ತಮ್ಮ, ಸ್ವಂತ ಕುಕೀಗಳನ್ನು ನಿಗದಿಗೊಳಿಸಬಹುದು ಮತ್ತು ನಿಮ್ಮ IP ವಿಳಾಸ, ಪುಟದ ಹೆಡರ್ ಮಾಹಿತಿ, ಮತ್ತು ಬ್ರೌಸರ್ ಮಾಹಿತಿಯನ್ನು ಸಂಗ್ರಹಿಸಬಹುದು. ಈ ಕಂಪನಿಗಳು ಕೂಡ ಈ ಕುಕೀಗಳನ್ನು, SDKಗಳನ್ನು ಮತ್ತು ವೆಬ್ ಬೀಕನ್‌ಗಳನ್ನು Yahoo ನಲ್ಲಿ ಮಾಹಿತಿಯನ್ನು ಸಂಗ್ರಹಿಸುವಾಗ Yahoo ಮತ್ತು Yahoo-ಅಲ್ಲದ ವೆಬ್ ಸೈಟ್‌ಗಳಲ್ಲಿ ನಿಮ್ಮ ಗ್ರಾಹಕೀಯಗೊಳಿಸಿದ ಜಾಹೀರಾತುಗಳನ್ನು ನಿಮಗೆ ತಲುಪಿಸುವುದಕ್ಕಾಗಿ ಕೂಡ ಬಳಕೆ ಮಾಡಬಹುದು.ಕೆಲವೊಂದು ಸನ್ನಿವೇಶಗಳಲ್ಲಿ, ನೇರವಾಗಿ ನಮ್ಮ ವೆಬ್ ಸರ್ವರ್‌ಗಳ ನಡುವೆ, ನಿಮ್ಮ ಬ್ರೌಸರ್‌ ಹೊರಗಿನ ಈ ಕಂಪನಿಗಳ ಜೊತೆಗೆ Yahoo ಸಂವಹನ ಮಾಡಬಹುದು.

ನಮ್ಮ ಗೌಪ್ಯತೆ ಕೇಂದ್ರದಲ್ಲಿ ವಿವರವಾಗಿ ತಿಳಿಸಿರುವಂತೆ, ಆಸಕ್ತಿ ವರ್ಗಕ್ಕೆ ಹೊಂದಿಕೆಯಾಗುತ್ತದೆಂದು ನಾವು ಭಾವಿಸುವ ಕೆಲವು ಜಾಹೀರಾತುಗಳನ್ನು Yahoo ಗ್ರಾಹಕೀಯಗೊಳಿಸಬಹುದು – ಉದಾಹರಣೆಗೆ, “ಕ್ರೀಡೆಗಳಲ್ಲಿ ಆಸಕ್ತಿ ಇರುವ ಪುರುಷರು.“ Yahoo ಯಾವುದೇ ವೈಯಕ್ತಿಕವಾಗಿ ಗುರುತಿಸುವ ಪೂರ್ಣಹೆಸರು, ಜನ್ಮದಿನಾಂಕದಂತಹ ಮಾಹಿತಿಯನ್ನು ಜಾಹೀರಾತುದಾರರಿಗೆ ನೀವು ಸಂವಹಿಸುವಾಗ ಅಥವಾ ಗ್ರಾಹಕೀಯಗೊಳಿಸಿದ ಜಾಹೀರಾತನ್ನು ವೀಕ್ಷಿಸುವಾಗ ಒದಗಿಸುವುದಿಲ್ಲ. ಆದರೆ, ನಾವು ಡೆಮೋಗ್ರಾಫಿಕ್ ಡೇಟಾ ಒಳಗೊಂಡು ಅನಾಮಧೇಯಗೊಳಿಸಿದ ಮಾಹಿತಿಯನ್ನು ಜಾಹೀರಾತುದಾರರೊಂದಿಗೆ ಹಂಚಿಕೊಳ್ಳುತ್ತೇವೆ.  ಆದರೆ, ನೀವು ಸಂವಾದ ಮಾಡಿದಾಗ ಅಥವಾ ಜಾಹೀರಾತೊಂದನ್ನು ವೀಕ್ಷಿಸಿದಾಗ, ಜಾಹೀರಾತನ್ನು ಆಯ್ಕೆಮಾಡಲು ಬಳಕೆ ಮಾಡುವ ಆಸಕ್ತಿ ವರ್ಗಕ್ಕೆ ನೀವು ಅರ್ಹರಾದಿರಿ ಎಂಬ ಊಹೆಯನ್ನು ಜಾಹೀರಾತುದಾರರು ಮಾಡಬಹುದಾದ ಸಾಧ್ಯತೆಯಿರುತ್ತದೆ. ಕೆಳಗಿನ ತೃತೀಯ ಪಕ್ಷಗಳು ತಮ್ಮ ದತ್ತಾಂಶ ಸಂಗ್ರಹಣೆ ಅಭ್ಯಾಸಗಳ ಬಗ್ಗೆ ಹಾಗೂ ಕೆಲವು ಸಂದರ್ಭಗಳಲ್ಲಿ ಮಾಹಿತಿಯನ್ನು ಒದಗಿಸುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಅವರ ಆಯಾ ವೆಬ್ ಸೈಟ್‌ಗಳ ಆಯ್ಕೆ ತ್ಯಜಿಸುವ ಅವಕಾಶವೂ ಇರುತ್ತದೆ. ನಿಮಗೆ ಲಭ್ಯವಿರುವ ನಿಯಂತ್ರಣಗಳ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಳ್ಳಲು ದಯವಿಟ್ಟು ಪ್ರತಿ ಕಂಪನಿಯ ಗೌಪ್ಯತೆ ನೀತಿಯ ವೆಬ್ ಸೈಟ್ ಅನ್ನು ಭೇಟಿಮಾಡಿ.

ಹಾಗೆಯೇ ನೀವು ಜಾಹೀರಾತು ನೀಡುವ ಕಂಪನಿಗಳ ಕುರಿತು ಇನ್ನಷ್ಟು ತಿಳಿಯಬಹುದು ಮತ್ತು ಆ ಪ್ರತಿಯೊಂದರಿಂದ ನೆಟ್‌ವರ್ಕ್ ಅಡ್ವರ್ಟೈಸಿಂಗ್ ಇನಿಷಿಯೇಟಿವ್ (NAI), ದಿ ಡಿಜಿಟಲ್ ಅಡ್ವರ್ಟೈಸಿಂಗ್ ಅಲಯನ್ಸ್ (US), ಅಥವಾ ಯುರೋಪಿಯನ್ ಡಿಜಿಟಲ್ ಅಡ್ವರ್ಟೈಸಿಂಗ್ ಅಲಯನ್ಸ್ (EU) ವೆಬ್‌ಸೈಟ್‌ಗಳಿಂದ ಹೊರುಗಳಿಯಬಹುದು.

ವಿಷಯ ಒದಗಿಸುವವರು

ನಮ್ಮ ಸೈಟ್‌‌ಗಳಲ್ಲಿ, ಅಪ್ಲಿಕೇಶನ್‌ಗಳು, ಹಾಗೂ ಸೇವೆಗಳಲ್ಲಿ ಒಳಾಂಶವನ್ನು ಒದಗಿಸುವ ಕೆಳಗೆ ಉಲ್ಲೇಖಿಸಿರುವ ಅನೇಕ ಒಳಾಂಶ ಪೂರೈಕೆದಾರರ ಜೊತೆಯಲ್ಲಿ Yahoo ಪಾಲುದಾರರು. ಈ ಒಳಾಂಶ ಪೂರೈಕೆದಾರರು ಒಬ್ಬ ಪಾಲುದಾರರಿಂದ ನಕ್ಷೆಯನ್ನು ಒದಗಿಸುವಂತಹ ಹಾಗೂ ವಿಭಿನ್ನ ಪಾಲುದಾರರಿಂದ ಸುದ್ದಿಯನ್ನು ಒದಗಿಸುವವರ ರೂಪದಲ್ಲಿರಬಹುದು. ನಿಮ್ಮ ವೆಬ್ ಬ್ರೌಸರ್ ತೃತೀಯ ಪಕ್ಷದ ಸರ್ವರ್‌ನಿಂದ ಈ ಜಾಹೀರಾತುಗಳನ್ನು ಹಾಗೂ ವೆಬ್ ಬೀಕನ್‌ಗಳನ್ನು ವಿನಂತಿಸುವುದರಿಂದ, ಈ ಕಂಪನಿಗಳು,ನೀವು ಅವುಗಳ ವೆಬ್‌ಸೈಟ್‌ಗಳಿಂದ ನೇರವಾಗಿ ವೆಬ್ ಪುಟವೊಂದನ್ನು ವಿನಂತಿಸಿದಾಗ ಅವು ತಮ್ಮ ಸ್ವಂತ ಕುಕೀಗಳನ್ನು ವೀಕ್ಷಿಸಬಹುದು, ಸಂಪಾದಿಸಬಹುದು, ಅಥವಾ ನಿಗದಿಗೊಳಿಸಬಹುದು ಮತ್ತು ನಿಮ್ಮ IP ವಿಳಾಸ, ಪುಟದ ಹೆಡರ್ ಮಾಹಿತಿ, ಮತ್ತು ಬ್ರೌಸರ್ ಮಾಹಿತಿಯನ್ನು ಸಂಗ್ರಹಿಸಬಹುದು. ಅದೇ ರೀತಿಯಾಗಿ, ಈ ಪಾಲುದಾರರುಗಳಲ್ಲಿ ಕೆಲವರು ಮೊಬೈಲ್ SDKಗಳನ್ನು ಒದಗಿಸಬಹುದಾಗಿದ್ದು, ಇವು ನಮ್ಮ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಎಂಬೆಡ್ ಆಗಿರಬಹುದಾಗಿದ್ದು ಅವರಿಗೆ ಸಮಾನ ವೈಯಕ್ತಿಕವಾಗಿ ಗುರುತಿಸಲು ಸಾಧ್ಯವಿಲ್ಲದೇ ಇರುವ ಮಾಹಿತಿಯನ್ನು ಸಂಗ್ರಹಿಸಲು, ನೀವು ಮೊಬೈಲ್ ಆ್ಯಪ್ ಅನ್ನು ನೇರವಾಗಿ ಇಂಟರಾಕ್ಟ್ ಮಾಡಿದ್ದಲ್ಲಿ ಅವಕಾಶ ಒದಗಿಸುವುದು.

ವೀಡಿಯೋ ವಿಷಯ ಒದಗಿಸುವವರು

Yahoo ವು ಅಭಿವೃದ್ಧಿಪಡಿಸಿರುವ ಅಥವಾ ಆತಿಥೇಯತ್ವ ಹೊಂದಿರುವ ಕಮ್ಯುನಿಟಿ ಅಥವಾ ಸ್ಯಾಟರ್ಡೇ ನೈಟ್‌ ಲೈವ್‌‌ನಂತಹ ವೀಡಿಯೋ ಒಳಾಂಶವನ್ನು ಒದಗಿಸಲು Yahoo ವು ಪ್ರಯತ್ನಿಸುತ್ತದೆ, ವೀಡಿಯೋ ಒಳಾಂಶದೊಂದಿಗೆ ತೊಡಗಿಕೊಳ್ಳಲು ನಾವು ಕೆಲವು ವೀಡಿಯೋ ಒಳಾಂಶದ ಪೂರೈಕೆದಾರರೊಂದಿಗೆ ಪಾಲುದಾರಿಕೆ ಹೊಂದಿರುತ್ತೇವೆ. ಈ ಪೂರೈಕೆದಾರರು ನಿಮ್ಮ ಕುಕೀಗಳನ್ನು, ತಿದ್ದಬಹುದು, ಅಥವಾ ತಮ್ಮದೇ ಕುಕೀಗಳನ್ನು ನಿಗದಿಪಡಿಸಬಹುದು ಹಾಗೂ ನಿಮ್ಮ IP ವಿಳಾಸ, ಪುಟದ ಹೆಡರ್ ಮಾಹಿತಿ, ಬ್ರೌಸರ್ ಮಾಹಿತಿ, ಫ್ಲ್ಯಾಶ್‌ ಪ್ಲೇಯರ್ ಆವೃತ್ತಿ, ಇಂಟರ್‌ನೆಟ್ ವೇಗ, ವೀಕ್ಷಿಸಿರುವ ವೀಡಿಯೋದ ಭಾಗ, ಹಾಗೂ ಇತರ ವೈಯಕ್ತಿಕವಾಗಿ ಗುರುತಿಸಲಾಗದ ಮಾಹಿತಿಯನ್ನು ಸಂಗ್ರಹಿಸಬಹುದು. ಅದೇ ರೀತಿಯಾಗಿ, ಈ ಪಾಲುದಾರರುಗಳಲ್ಲಿ ಕೆಲವರು ಮೊಬೈಲ್ SDKಗಳನ್ನು ಒದಗಿಸಬಹುದಾಗಿದ್ದು, ಇವು ನಮ್ಮ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಎಂಬೆಡ್ ಆಗಿರಬಹುದಾಗಿದ್ದು ಅವರಿಗೆ ಸಮಾನ ವೈಯಕ್ತಿಕವಾಗಿ ಗುರುತಿಸಲು ಸಾಧ್ಯವಿಲ್ಲದೇ ಇರುವ ಮಾಹಿತಿಯನ್ನು ಸಂಗ್ರಹಿಸಲು, ನೀವು ಮೊಬೈಲ್ ಆ್ಯಪ್ ಅನ್ನು ನೇರವಾಗಿ ಇಂಟರಾಕ್ಟ್ ಮಾಡಿದ್ದಲ್ಲಿ ಅವಕಾಶ ಒದಗಿಸುವುದು:

ಗೇಮ್ಸ್ ಡೆವಲಪರ್‌ಗಳು

Yahoo Games ನಿಮಗಾಗಿ ಆಸಕ್ತಿದಾಯಕ ಹಾಗೂ ಮೋಜಿನ ಗೇಮ್‌‌ಗಳನ್ನು ತರಲು ಪ್ರಾಯೋಜಕರು ಹಾಗೂ ಡೆವಲಪರ್‌‌ಗಳು ಮಾಡಿರುವ ಗೇಮ್‌ಗಳನ್ನು ಹೋಸ್ಟ್ ಮಾಡುವುದು. ಇವುಗಳಲ್ಲಿ ಕೆಲವು ಗೇಮ್‌ಗಳು ಹೆಚ್ಚುವರಿ ನಿಯಮಗಳನ್ನು ಹಾಗೂ ಷರತ್ತುಗಳನ್ನು ಹೊಂದಿರಬಹುದು ಹಾಗೂ ಅವುಗಳೊಂದಿಗೆ ಖಾಸಗಿತನದ ನೀತಿಗಳು ಇರಬಹುದು. ನಿಮ್ಮ ವೆಬ್ ಬ್ರೌಸರ್‌ ಒಳಾಂಶ ಪೂರೈಕೆದಾರರ ಸರ್ವರ್‌ಗಳಿಂದ, ಒಳಾಂಶವನ್ನು ವಿನಂತಿಸಬೇಕು, ಈ ಪೂರೈಕೆದಾರರು ವೀಕ್ಷಿಸಬಹುದು, ಅಥವಾ ತಿದ್ದಬಹುದು ಅಥವಾ ತಮ್ಮದೇ ಸ್ವಂತ ಕುಕೀಗಳನ್ನು ನಿಗದಿಪಡಿಸಬಹುದು, ನಿಮ್ಮ IP ವಿಳಾಸ,ಪುಟದ ಹೆಡರ್ ಮಾಹಿತಿ, ಮತ್ತು ಬ್ರೌಸರ್ ಮಾಹಿತಿ, ಫ್ಲ್ಯಾಶ್‌ ಪ್ಲೇಯರ್ ಆವೃತ್ತಿ, ಇಂಟರ್‌‌ನೆಟ್‌ನ ವೇಗ ಮತ್ತು ಇತರ ವೈಯಕ್ತಿಕವಾಗಿ ಗುರುತಿಸದೇ ಇರುವ ಮಾಹಿತಿಯನ್ನು‌ ಸಂಗ್ರಹಿಸಬಹುದು. ಹೆಚ್ಚುವರಿಯಾಗಿ, ಗೇಮ್‌ ಡೆವಲಪರ್‌‌ಗಳು ಗೇಮ್ ಸ್ಕೋರುಗಳು, ನಮೂದಿಸಿದ ಗೇಮ್ ಹೆಸರು, ಬಳಕೆದಾರ ಸೆಟ್ಟಿಂಗ್‌ಗಳು, ಅಥವಾ ಇತರ ಗೇಮ್‌ ಪ್ಲೇ ಆ್ಯಕ್ಷನ್‌ಗಳನ್ನು ದಾಖಲಿಸಬಹುದು ಇವು ಗೇಮ್‌ಗಾಗಿ ಹೆಚ್ಚುವರಿ ಸೇವಾ ನಿಯಮಗಳಿಂದ ನಿಯಂತ್ರಣಕ್ಕೆ ಒಳಪಟ್ಟಿರಬಹುದು:

ಶೋಧ ಪಾಲುದಾರರು

ಕೆಳಗೆ ಉಲ್ಲೇಖಿಸಿರುವ ಮೂರನೇ ಪಕ್ಷದ ಪಾಲುದಾರರು ಶೋಧನೆ ಹಾಗೂ ಶೋಧನೆ ಜಾಹೀರಾತು ಫಲಿತಾಂಶಗಳನ್ನು Yahoo ಗಾಗಿ ಒದಗಿಸಬಹುದು. ಶೋಧನೆಯ ಜಾಹೀರಾತು ಪಾವತಿಸಿದ ಶೋಧನೆ ಮತ್ತು/ಅಥವಾ ಸಾಂದರ್ಭಿಕ ಶೋಧ ಫಲಿತಾಂಶಗಳನ್ನು ಒಳಗೊಂಡಿರುವುದು. ಒಂದಕ್ಕಿಂತ ಹೆಚ್ಚು ಶೋಧ ಪಾಲುದಾರರನ್ನು ಒಂದೇ ಸಲ ಬಳಸಬಹುದು ಹಾಗೂ ಆನ್‌ಲೈನ್ ಅನುಭವದ ವಿಧ, ಬಳಸಿರುವ ಸಾಧನದ ವಿಧ ಹಾಗೂ ಶೋಧನೆಯನ್ನು ನಡೆಸಿರುವ ದೇಶವನ್ನು ಅವಲಂಬಿಸಿ ಬದಲಾಯಿಸಬಹುದು.

ಪ್ರತಿಯೊಬ್ಬ ಶೋಧ ಪಾಲುದಾರರ ಡೇಟಾ ಸಂಗ್ರಹ ಹಾಗೂ ನಿಮಗೆ ಲಭ್ಯವಿರುವ ಅಭ್ಯಾಸಗಳು ಹಾಗೂ ನಿಮಗೆ ಯಾವ ಸಾಧನಗಳು ಹಾಗೂ ನಿಯಂತ್ರಣಗಳು ಲಭ್ಯವಿವೆ ಎನ್ನುವ ಕುರಿತು ಹೆಚ್ಚು ತಿಳಿಯಲು, ದಯವಿಟ್ಟು ಶೋಧ ಪಾಲುದಾರರ ಖಾಸಗಿತನದ ನೀತಿಯನ್ನು ಸಂದರ್ಶಿಸಿ:

ಬೇರೆ ಪಾಲುದಾರಿಕೆಗಳು

ಕಂಪನಿಗಳ ಜೊತೆಯಲ್ಲಿ Yahoo ಪಾಲುದಾರರು ನಿಮಗೆ ಸದ್ಯದ ಪುಟದ ಒಳಾಂಶ ಅಥವಾ ಇತರ ಮಾನದಂಡವನ್ನು ಅವಲಂಬಿಸಿ ಉತ್ಪನ್ನ ಅಥವಾ ಸೇವೆಗಳನ್ನು ಒದಗಿಸಬಹುದು. ಈ ಪಾಲುದಾರರುಗಳು ಟ್ರಾಪಿಕಲ್ ಉತ್ಪನ್ನಗಳ ಜೊತೆಯಲ್ಲಿ ಸೈಡ್‌ಬಾರ್‌ ಮೇಲೆ ಸೆಲೆಬ್ರಿಟಿ ಚಿತ್ರಗಳು ಹಾಗೂ "ಗೆಟ್‌ ದಿ ಲಾಕ್" ಬಾರ್ ರೂಪದಲ್ಲಿ ಇರಬಹುದಾಗಿದೆ. ನಿಮ್ಮ ವೆಬ್ ಬ್ರೌಸರ್, ಪಾಲುದಾರರ ಸರ್ವರ್‌ನಿಂದ ವಿಷಯವನ್ನು ವಿನಂತಿಸುವುದರಿಂದ, ಈ ನೀಡುವವರು ತಮ್ಮ ಸ್ವಂತ ಕುಕೀಗಳನ್ನು ವೀಕ್ಷಿಸಬಹುದು, ಸಂಪಾದಿಸಬಹುದು, ಅಥವಾ ನಿಗದಿಗೊಳಿಸಬಹುದು ಮತ್ತು ನಿಮ್ಮ IP ವಿಳಾಸ, ಪುಟದ ಹೆಡರ್ ಮಾಹಿತಿ, ಬ್ರೌಸರ್ ಮಾಹಿತಿ ಮತ್ತು ಇತರ ವೈಯಕ್ತಿಕವಾಗಿ ಗುರುತಿಸದೇ ಇರುವ ಮಾಹಿತಿಯನ್ನು ಸಂಗ್ರಹಿಸಬಹುದು:

ನಿಮ್ಮ ವೈಯಕ್ತಿಕ ಮಾಹಿತಿಯನ್ನು Yahoo ಹೇಗೆ ಪರಿಗಣಿಸುತ್ತದೆ ಎಂಬ ಕುರಿತು ಹೆಚ್ಚಿನ ಮಾಹಿತಿಗೆ, ದಯವಿಟ್ಟು ನಮ್ಮ ಗೌಪ್ಯತೆ ನೀತಿಗೆ ಭೇಟಿ ನೀಡಿ.

  • oath