Yahoo ವಿನಲ್ಲಿ ಭದ್ರತೆ

ನಮ್ಮ ವ್ಯವಸ್ಥೆಗಳು ಮತ್ತು ಬಳಕೆದಾರರ ಮಾಹಿತಿಯನ್ನು ರಕ್ಷಿಸಿ Yaho ಬಳಕೆದಾರರಿಗೆ ಅತ್ಯುತ್ತಮವಾದ ಸುರಕ್ಷಿತ ಅನುಭವವನ್ನು ಒದಗಿಸುವುದು ಮತ್ತು ನಮ್ಮ ಬಳಕೆದಾರರ ನಂಬಿಕೆಯನ್ನು ಕಾಪಾಡುವುದು ನಮ್ಮ ಆಧ್ಯತೆಯಾಗಿರುತ್ತದೆ. ನಾವು ನಿಮ್ಮ ಮಾಹಿತಿಯನ್ನು ರಕ್ಷಿಸಲು ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ:

  • ಟ್ರಾನ್ಸ್‌ಪೋರ್ಟ್ ಲೇಯರ್ ಸೆಕ್ಯುರಿಟಿ ("TLS")
  • ಹಣಕಾಸು ಸೇವೆಗಳ ಮಾಹಿತಿ ಅಥವಾ ಪಾವತಿ ಮಾಹಿತಿಯಂತ ಮಾಹಿತಿಗಳನ್ನು ವರ್ಗಾವಣೆ ಮಾಡುವಾಗ ನಾವು TLS ಗೂಢಲಿಪಿಕರಣವನ್ನು ಬಳಸುತ್ತೇವೆ. ಬಹುತೇಕ ಬ್ರೌಸರ್‌ಗಳಲ್ಲಿ TLS ನಡೆಯುವ ಅವಧಿಯಲ್ಲಿ ಬೀಗ ಮುದ್ರೆಯನ್ನು ಹೋಲುವ ಐಕಾನ್ ಕಂಡು ಬರುತ್ತದೆ.
  • ದ್ವಿತೀಯ ಸೈನ್-ಇನ್ ಪರಿಶೀಲನೆ
  • ಯಾವ ಸೆಟ್ಟಿಂಗ್ ಎರಡನೆ ಮಾಹಿತಿಯ ತುಣುಕನ್ನು ಬಯಸುತ್ತದೋ ಅಂತಹ ಸೆಟ್ಟಿಂಗ್ ಅನ್ನು ನೀವು ಆನ್ ಮಾಡಬಹುದು, ಅಂದರೆ ನಾವು ಗುರುತಿಸಲು ಸಾಧ್ಯವಾಗದ ಸಾಧನ ಅಥವಾ ಸ್ಥಳವಿದ್ದಲ್ಲಿ, ನಿಮ್ಮ ಖಾತೆಗೆ ಸೈನ್ ಇನ್ ಆಗಲು ಪಾಸ್‌ವರ್ಡ್ ಜೊತೆಗೆ ಹೆಚ್ಚುವರಿಯಾಗಿ ಎಸ್‍ಎಂಎಸ್ ಮೂಲಕ ಕಳುಹಿಸಲಾದ ಕೋಡ್‌ಗಳಂತಹವು. ದ್ವಿತೀಯ ಸೈನ್-ಇನ್ ಪರಿಶೀಲನೆಯ ಕುರಿತು ಹೆಚ್ಚಿಗೆ ತಿಳಿಯಿರಿ.
  • ಕೋರಿಕೆಯ-ಮೇರೆಗೆ ಪಾಸ್‌ವರ್ಡ್‍ಗಳು
  • Yahoo ಸಹ ಕೋರಿಕೆಯ-ಮೇರೆಗೆ ಪಾಸ್‌ವರ್ಡ್‌ಗಳನ್ನು ಒದಗಿಸುತ್ತದೆ. ನಿಮ್ಮ ಖಾತೆಗೆ ಮೊಬೈಲ್ ಸಾಧನವನ್ನು ಲಿಂಕ್ ಮಾಡುವ ಮೂಲಕ, ನಾವು ನಿಮಗೆ ಕೋರಿಕೆಯ ಮೇರೆಗೆ ಪಾಸ್‌ವರ್ಡ್‌ಗಳನ್ನು ಎಸ್‍ಎಂಎಸ್ ಮೂಲಕ ಒದಗಿಸಲು ಅನುಮತಿ ನೀಡುವಿರಿ. ಹೀಗಾಗಿನೀವು ಇನ್ನು ಮುಂದೆ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಕೋರಿಕೆಯ-ಮೇರೆಗೆ ಪಾಸ್‍ವರ್ಡ್‌ಗಳ ಕುರಿತು ಇನ್ನಷ್ಟು ತಿಳಿಯಿರಿ
  • ಸುರಕ್ಷಿತ ಸಂಗ್ರಹ
  • ನಾವು ನಿಮ್ಮ ವೈಯುಕ್ತಿಕ ಮಾಹಿತಿಯನ್ನು ರಕ್ಷಿಸಲು ಔದ್ಯಮಿಕ ಮಾನದಂಡ, ದೈಹಿಕ, ಮತ್ತು ಕಾರ್ಯ ವಿಧಾನಗಳ ರಕ್ಷಣೋಪಾಯಗಳಂತಹ ಸೂಕ್ತವಾದ ನಿಯಮಗಳನ್ನು ಬಳುಸುತ್ತೇವೆ.
  • ಮಾರಾಟಗಾರರು ಮತ್ತು ಪಾಲುಗಾರರು
  • ನಿಮ್ಮ ಮಾಹಿತಿಯ ಭದ್ರತೆ ಮತ್ತು ಗೌಪ್ಯತೆಯನ್ನು ರಕ್ಷಿಸಲು, ನಾವು ಗೌಪ್ಯತೆಯ ಒಪ್ಪಂದದೊಂದಿಗೆ ನಮ್ಮ ಪರವಾಗಿ ಅಥವಾ ನಮ್ಮೊಂದಿಗೆ ಕೆಲಸ ಮಾಡುವ ಪಾಲುದಾರರು ಮತ್ತು ಮಾರಾಟಗಾರರಿಗೆ ಮಾಹಿತಿಗಳನ್ನು ಒದಗಿಸಬಹುದು. ಈ ಕಂಪನಿಗಳು ನಿಮ್ಮ ಅನುಮತಿಯಿಲ್ಲದೆ ಈ ಮಾಹಿತಿಗಳನ್ನು ಸ್ವತಂತ್ರವಾಗಿ ಬಳಸುವ ಅಥವಾ ಹಂಚಿಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ.
  • ಮಾಹಿತಿಗೆ ಪ್ರವೇಶ
  • ನಾವು ನಿಮ್ಮ ಕುರಿತಾದ ಮಾಹಿತಿಗಳಿಗೆ ಒಂದು ಮಿತಿಯಲ್ಲಿ ಪ್ರವೇಶವನ್ನು ಪಡೆಯುತ್ತೇವೆ. ನಿಮಗೆ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಒದಗಿಸಲು ಯಾವ ನೌಕರರು ನಿಮ್ಮ ಸಂಪರ್ಕಕ್ಕೆ ಬರುತ್ತಾರೋ, ಅವರು ನಿಮ್ಮ ಮಾಹಿತಿಯನ್ನು ಗಮನಿಸುತ್ತಾರೆ ಅಥವಾ ನಮಗಾಗಿ ಈ ಮಾಹಿತಿಯನ್ನು ಪ್ರಕ್ರಿಯೆ ಮಾಡಲು ನೋಡಬಹುದು.
  • DNT
  • DNT ಕುರಿತು ಭದ್ರತೆ Yahoo

ದಯವಿಟ್ಟು ಗಮನಿಸಿ ಇಂಟರ್‌ನೆಟ್‌ ಅಥವಾ ಮಾಹಿತಿ ಸಂಗ್ರಹ ತಂತ್ರಜ್ಞಾನದ ಮೂಲಕ ಯಾವುದೇ ಮಾಹಿತಿ ಪ್ರಸರಣವನ್ನು 100% ಸುರಕ್ಷಿತ ಎಂದು ಖಾತರಿ ನೀಡಲಾಗುವುದಿಲ್ಲ. ಭದ್ರತಾ ತಂತ್ರಜ್ಞಾನ ಮತ್ತು ಆಚರಣೆಗಳಲ್ಲಿ ವರ್ಧನೆಗಳನ್ನು ಜಾರಿಗೆ ತರುವುದನ್ನು ಮತ್ತು ಮೌಲ್ಯಮಾಪನ ಮಾಡುವುದನ್ನು ನಾವು ಮುಂದುವರಿಸುತ್ತೇವೆ.

ಭದ್ರತೆಯು ತಂಡಕಾರ್ಯವನ್ನು ಬಯಸುತ್ತದೆ

ನೀವು ಸಹ ನಿಮ್ಮ ಭದ್ರತೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನೀವು ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಮತ್ತು ಅನಧಿಕೃತ ಪ್ರವೇಶದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಬೇಕಾದ ಮಾರ್ಗಗಳು ಮತ್ತು ಹಂತಗಳನ್ನು ನೀವೇ ಸ್ವಯಂ ಆಗಿ ನೋಡಿಕೊಳ್ಳಲು ಬೇಕಾದ ಸಾಧನಗಳು ಮತ್ತು ಸಲಹೆಗಳಿಗಾಗಿ ದಯವಿಟ್ಟು ನಮ್ಮ ಸುರಕ್ಷಾ ಕೇಂದ್ರಕ್ಕೆ ಭೇಟಿ ನೀಡಿ.

ಭದ್ರತೆಯ ಘಟನೆಗಳನ್ನು ಹೇಗೆ ವರದಿ ಮಾಡುವುದು

ನಮ್ಮ ಸುರಕ್ಷಾ ಕೇಂದ್ರದಲ್ಲಿ ಭದ್ರತೆಯ ಘಟನೆಗಳನ್ನು ವರದಿ ಮಾಡುವುದುಕುರಿತು ಮಾಹಿತಿಯು ದೊರೆಯುತ್ತದೆ.

  • oath