IP ವಿಳಾಸ

ಇಂಟರ್ನೆಟ್‌ನಲ್ಲಿ ನಿಮ್ಮ ವೆಬ್ ಬ್ರೌಸರ್ ಅಥವಾ ಇಮೇಲ್ ಅಪ್ಲಿಕೇಶನ್ ಬೇರೊಂದು ಕಂಪ್ಯೂಟರ್‌ನಿಂದ ವೆಬ್ ಪುಟ ಅಥವಾ ಇಮೇಲ್ ಅನ್ನು ವಿನಂತಿಸಿದಾಗ, ಮಾಹಿತಿಯನ್ನು ಎಲ್ಲಿಗೆ ಕಳುಹಿಸಬೇಕಾಗಿದೆಯೋ ಅಲ್ಲಿನ ವಿಳಾಸವನ್ನು ಆ ಕಂಪ್ಯೂಟರ್‌ಗೆ ಇದು ಸ್ವಯಂಚಾಲಿತವಾಗಿ ನೀಡುತ್ತದೆ. ಇದನ್ನು ನಿಮ್ಮ ಕಂಪ್ಯೂಟರ್‍‌ನ “IP ವಿಳಾಸ” ಎಂಬುದಾಗಿ ಕರೆಯಲಾಗುತ್ತದೆ. (IP ಎಂದರೆ “ಇಂಟರ್ನೆಟ್ ಪ್ರೊಟೋಕಾಲ್" ಎಂದರ್ಥ.) ಡಯಲ್-ಅಪ್ ಇಂಟರ್ನೆಟ್ ಸೇವಾ ನೀಡುಗ (ಐಎಸ್‌ಪಿ) ಬಳಸಿ ಇಂಟರ್ನೆಟ್ ಪ್ರವೇಶಿಸುವ ಬಹುತೇಕ ಬಳಕೆದಾರರು ಲಾಗ್ ಆನ್ ಮಾಡಿದ ಪ್ರತಿ ಸಮಯದಲ್ಲೂ ವಿಭಿನ್ನ IP ವಿಳಾಸಗಳನ್ನು ಹೊಂದಿರುತ್ತಾರೆ.

ಮಾಹಿತಿ ಸಂಗ್ರಹ ಮತ್ತು ಬಳಕೆ ಪದ್ಧತಿಗಳು

  • Yahoo ಸಾಮಾನ್ಯವಾಗಿ ಎಲ್ಲಾ ಸೇವೆಗಳ ಎಲ್ಲಾ ಬಳಕೆದಾರರಿಂದ IP ವಿಳಾಸಗಳನ್ನು ಪಡೆದುಕೊಳ್ಳುತ್ತದೆ.
  • ನೀವು Yahoo ನೊಂದಿಗೆ ನೋಂದಾಯಿಸಿಕೊಂಡಾಗ ನಿಮ್ಮ IP ವಿಳಾಸವನ್ನು ಸಹ ನಮ್ಮ ಬಳಕೆದಾರ ನೋಂದಣಿ ಡೇಟಾಬೇಸ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ.
  • IP ವಿಳಾಸಗಳನ್ನು ಇವುಗಳನ್ನು ಒಳಗೊಂಡು ವಿವಿಧ ಉದ್ದೇಶಗಳಿಗೆ ಬಳಸಬಹುದು:
    • ನಿರ್ದಿಷ್ಟ ವೆಬ್ ಕಂಪನಿ ಅಥವಾ ISP ನಿಯಂತ್ರಿಸಿರುವ IP ವಿಳಾಸಗಳೊಂದಿಗೆ ಸಂಬಂಧಿಸಿದ ನಮ್ಮ ಬಳಕೆದಾರರು ಅಥವಾ ಇಂಜಿನಿಯರ್‌ಗಳು ವರದಿ ಮಾಡಿದ ಸೇವೆ ಅಥವಾ ತಂತ್ರಜ್ಞಾನ ಸಮಸ್ಯೆಗಳನ್ನು ಪತ್ತೆಹಚ್ಚಲು.
    • ಭೌಗೋಳಿಕ ಪ್ರದೇಶ ಅಥವಾ ನಿಮ್ಮ IP ವಿಳಾಸದಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಿಮ್ಮ ಕಂಪ್ಯೂಟರ್‌ಗಳಿಗೆ ಮತ್ತು ಇತರ ಸಾಧನಗಳಿಗೆ ಅತ್ಯಂತ ಸೂಕ್ತವಾದ ಜಾಹೀರಾತುಗಳನ್ನು ಕಳುಹಿಸಲು.
    • ಸಹವಾಸಿ ಬಳಕೆದಾರರು ಮತ್ತು/ಅಥವಾ ಸದೃಶ ಸ್ಥಾನಗಳಲ್ಲಿರುವ ಸಾಧನಗಳು, ಉದಾಹರಣೆಗೆ ಕುಟುಂಬದಲ್ಲಿರುವಂತೆ.
    • ಒಟ್ಟುಗೂಡಿಸಿದ ಅಥವಾ IP ವಿಳಾಸದಿಂದ ಪಡೆಯಲಾದ ವೈಯಕ್ತಿಕವಲ್ಲದ ರೀತಿಯಲ್ಲಿ ಗುರುತಿಸಬಲ್ಲ ಇತರ ಮಾಹಿತಿಯನ್ನು ಜಾಹೀರಾತುದಾರರಿಗೆ ವರದಿ ಮಾಡಲು.
    • ನಿರ್ದಿಷ್ಟ ರಾಷ್ಟ್ರಗಳು ಅಥವಾ ಜಗತ್ತಿನ ಪ್ರಾಂತ್ಯಗಳಿಂದ Yahoo ಗೆ ಭೇಟಿಕೊಡುವ ಬಳಕೆದಾರರ ಒಟ್ಟು ಸಂಖ್ಯೆಯನ್ನು ಅಂದಾಜುಮಾಡಲು.
    • ಸ್ಟೋರ್‌ಗಳಿಗೆ ಮಾಡಲಾಗುವ ಭೇಟಿಗಳನ್ನು ಮತ್ತು ಅವರ ಸ್ಟೋರ್‌ಗಳಲ್ಲಿನ ವ್ಯವಹಾರಗಳನ್ನು ಪತ್ತೆಮಾಡಲು Yahoo ಸ್ಟೋರ್‌‍ಗಳು ಮತ್ತು Yahoo ಶಾಪಿಂಗ್‌ನಲ್ಲಿನ ವರ್ತಕರಿಗೆ ಸಹಾಯಮಾಡಲು.
    • ನಾವು ಹೋಸ್ಟ್ ಮಾಡುವ ಕೆಲವು ನಿರ್ದಿಷ್ಟ ವಿಷಯಕ್ಕೆ ಯಾವ ಬಳಕೆದಾರರು ಪ್ರವೇಶದ ಸವಲತ್ತುಗಳನ್ನು ಹೊಂದಿದ್ದಾರೆಂದು ನಿರ್ಣಯಿಸಲು ಸಹಾಯ ಮಾಡಲು.

ಇತರೆ

  • Yahoo ವೆಬ್ ಪುಟ ವಿನಂತಿಸಿದಾಗ ಮತ್ತು ವೀಕ್ಷಿಸಿದಾಗ, ಪುಟಕ್ಕೆ ವಿನಂತಿಸಿದ ಸಾಧನದ IP ವಿಳಾಸವನ್ನು ಒಳಗೊಂಡು ಮಾಹಿತಿಯೊಂದಿಗೆ ವಿನಂತಿಯನ್ನು ನಮ್ಮ ಸರ್ವರ್‌ಗಳಲ್ಲಿ ಲಾಗ್ ಮಾಡಲಾಗುತ್ತದೆ.
  • Yahoo ಮೇಲ್ಸ್ಟ್ಯಾಂಡರ್ಡ್ ಇಂಟರ್ನೆಟ್ ಪ್ರೊಟೋಕಾಲ್ ಮೂಲಕ ನಿರ್ದಿಷ್ಟಪಡಿಸಿದಂತೆ, ಹೊರಹೋಗುವ ಮೇಲ್ ಸಂದೇಶ ಹೆಡರ್‌ಗಳಲ್ಲಿ IP ವಿಳಾಸಗಳನ್ನು ಒಳಗೊಂಡಿದೆ.
  • Yahoo ಮೆಸೆಂಜರ್ತ್ವರಿತ ಮೆಸೇಜಿಂಗ್ (ಪಠ್ಯ ಸಂಭಾಷಣೆಗಳು), ಫೈಲ್ ಹಂಚಿಕೊಳ್ಳುವಿಕೆ ಮತ್ತು ವೆಬ್‌ಕ್ಯಾಮ್ ಸ್ಟ್ರೀಮಿಂಗ್‌ಗಾಗಿ ನೀವು ಇದನ್ನು ಬಳಸಬಹುದಾದ ಸಮಯಗಳನ್ನೂ ಒಳಗೊಂಡು ಕೆಲವೊಮ್ಮೆ ತನ್ನ ಕಾರ್ಯಾಚರಣೆಯ ಸಂದರ್ಭದಲ್ಲಿ ಪೀರ್-ಟು-ಪೀರ್ ಸಂಪರ್ಕವನ್ನು ಬಳಸುತ್ತದೆ. ಪೀರ್-ಟು-ಪೀರ್ ಎಂದರೆ Yahoo ಸರ್ವರ್‌ಗಳ ಮುಖೇನ ಸಾಗಬೇಕಾದ ಅಗತ್ಯವಿಲ್ಲದೆಯೇ ನೇರವಾಗಿ ನಿಮ್ಮ ಕಂಪ್ಯೂಟರ್ ಸಂಭಾಷಣೆಯಲ್ಲಿರುವ ಇತರ ಬಳಕೆದಾರನ ಕಂಪ್ಯೂಟರ್‌ಗೆ ಸಂಪರ್ಕಿತಗೊಳ್ಳುತ್ತದೆ. ಇದೇ ರೀತಿ, ನೀವು ಪೀರ್-ಟು-ಪೀರ್ ಸಂಪರ್ಕವನ್ನು ಹಂಚಿಕೊಳ್ಳುವ ಬಳಕೆದಾರರಿಗೆ ನಿಮ್ಮ IP ವಿಳಾಸವು ಲಭ್ಯವಿರುತ್ತದೆ.
  • oath