ಡೇಟಾ ಸಂಗ್ರಹಣೆ & ಅನಾಮಧೇಯಗೊಳಿಸುವಿಕೆ

ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ, ಬಳಕೆದಾರನ ಖಾತೆ ನೋಂದಣಿ ಮತ್ತು ಸೈಟ್ ಬಳಕೆಗೆ ಸಂಬಂಧಿಸಿದಂತೆ Yahoo ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಶೇಖರಿಸುತ್ತದೆ. ಸೈಟ್‌ನ ಬಳಕೆಗೆ ಸಂಬಂಧಿಸಿದಂತೆ ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಸಾಮಾನ್ಯವಾಗಿ “ಬಳಕೆದಾರನ ಲಾಗ್ ಡೇಟಾ” ಎಂಬುದಾಗಿ ಉಲ್ಲೇಖಿಸುತ್ತೇವೆ.

ಸಂಗ್ರಹಿಸಿದ 18 ತಿಂಗಳ ಒಳಗಾಗಿ ಶೋಧ ಬಳಕೆದಾರ ಲಾಗ್ ಡೇಟಾದ ಗುರುತು-ಮರೆಮಾಚುವುದು Yahoo ನೀತಿಯಾಗಿರುತ್ತದೆ, ಆದರೂ ಕಾನೂನು ನಿರ್ಬಂಧಗಳನ್ನು ಪೂರೈಸಲು ಸೀಮಿತ ವಿನಾಯಿತಿಗಳನ್ನು ಇದು ಹೊಂದಿರುತ್ತದೆ.

ನಾವು ಮಾಹಿತಿಯನ್ನು ಸಂಗ್ರಹಿಸುವ ಇತರ ಉದ್ದೇಶಗಳಿಗೆ ಸೇರ್ಪಡೆಯಾಗಿ , ನವೀನ ಉತ್ಪನ್ನ ಅಭಿವೃದ್ಧಿಯನ್ನು ಶಕ್ತಗೊಳಿಸಲು, ವೈಯಕ್ತೀಕರಣಗೊಳಿಸಿದ ಮತ್ತು ಗ್ರಾಹಕೀಯಗೊಳಿಸಿದ ಸೇವೆಗಳನ್ನು ಒದಗಿಸಲು ಮತ್ತು ಮೋಸದ ಚಟುವಟಿಕೆಯನ್ನು ಪತ್ತೆಮಾಡಲು ಹಾಗೂ ಅದರಿಂದ ರಕ್ಷಣೆಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಭದ್ರತಾ ವ್ಯವಸ್ಥೆಗಳನ್ನು ಉತ್ತಮವಾಗಿ ಸಕ್ರಿಯಗೊಳಿಸಲು ಇತರ ಪ್ರಕಾರಗಳ ಲಾಗ್ ಡೇಟಾವನ್ನು (ಅಂದರೆ ಹುಡುಕಾಟಕ್ಕೆ ಸಂಬಂಧವನ್ನು ಹೊಂದಿರದ) (ಜಾಹೀರಾತು ವೀಕ್ಷಣೆಗಳು, ಜಾಹೀರಾತು ಕ್ಲಿಕ್‌ಗಳು, ಪುಟದ ವೀಕ್ಷಣೆಗಳು ಮತ್ತು ಪುಟದ ಕ್ಲಿಕ್‌ಗಳು ಮುಂತಾದವುಗಳನ್ನು) ಸುದೀರ್ಘ ಅವಧಿಯವರೆಗೆ ಉಳಿಸಿಕೊಳ್ಳಲಾಗುತ್ತದೆ. Yahoo ನಲ್ಲಿ ಆಸಕ್ತಿ ಆಧಾರಿತ ಜಾಹೀರಾತನ್ನು (ಜೊತೆಗೆ ಕೆಲವೊಂದು ವಿಷಯವನ್ನು) ಗ್ರಾಹಕೀಯಗೊಳಿಸಲು ಸಂಗ್ರಹಿಸಲಾದ ಮತ್ತು ಬಳಸಲಾದ ಡೇಟಾವನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯೊಂದಿಗೆ ಸಂಬಂಧಿಸದೇ ಇರುವಂತಾಗಲು Yahoo ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುತ್ತದೆ. ನಾವು ಸಂಗ್ರಹಣೆ ಮಾಡುವಂತಹ ಡೇಟಾವನ್ನು ಮತ್ತು ನಮ್ಮ ಪ್ರಕ್ರಿಯೆಗಳನ್ನು ಇನ್ನಷ್ಟು ವಿವರಗಳೊಂದಿಗೆ ನಾವು ಇಲ್ಲಿ ವಿವರಿಸುತ್ತೇವೆ.

ನೀವು ಬಳಸಬಹುದಾದ Yahoo ಉತ್ಪನ್ನಗಳು ಅಥವಾ ಸೇವೆಗಳ ಮೂಲಕ ನೀವು Yahoo ಗೆ ಒದಗಿಸಿರುವ ಮಾಹಿತಿಯನ್ನು ಸಹ ನೀವು ಮಾರ್ಪಡಿಸಬಹುದಾಗಿದೆ.

ಖಾತೆ ಮಾಹಿತಿ

 • ನೀವು Yahoo ನೊಂದಿಗೆ ನೋಂದಾಯಿಸುವಾಗ ಅಥವಾ Yahoo ಗೆ ಮಾಹಿತಿಯನ್ನು ಸಲ್ಲಿಸುವಾಗ, ಕಂಪ್ಯೂಟರ್ ಅಸಮರ್ಪಕತೆ ಅಥವಾ ಮಾನವ ದೋಷದ ಮೂಲಕ ಉಂಟಾಗುವ ನಿಮ್ಮ ಮಾಹಿತಿಯ ಆಕಸ್ಮಿಕ ನಷ್ಟವನ್ನು ತಪ್ಪಿಸಲು ನಿಯಮಿತವಾಗಿ ಆ ಮಾಹಿತಿಯ ಒಂದು ತಾತ್ಕಾಲಿಕ ಪ್ರತಿಯನ್ನು ರಚಿಸಲಾಗುತ್ತದೆ.
 • ನೀವು Yahoo ಗೆ ಭೇಟಿನೀಡುವ ಎಲ್ಲಾ ಸಮಯಗಳಲ್ಲೂ ನಿಮ್ಮ ವೈಯಕ್ತೀಕರಣದ ಪ್ರಾಶಸ್ತ್ಯಗಳಿಗೆ ತಕ್ಷಣದ ಪ್ರವೇಶವನ್ನು ಒದಗಿಸಲು Yahoo ನಮ್ಮ ಬಳಕೆದಾರ ನೋಂದಣಿ ಡೇಟಾಬೇಸ್‌ಗಳಲ್ಲಿ ನಿಮ್ಮ ಖಾತೆ ಮಾಹಿತಿಯನ್ನು ಸಕ್ರಿಯವಾಗಿ ಇರಿಸಿಕೊಳ್ಳುತ್ತದೆ.
 • ನಿಮ್ಮ Yahoo ಖಾತೆಯನ್ನು ಅಳಿಸುವಂತೆ ನೀವು Yahoo ಬಳಿ ಕೇಳಿಕೊಂಡರೆ, ಬಹುತೇಕ ಸನ್ನಿವೇಶಗಳಲ್ಲಿ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ತದನಂತರ ನಮ್ಮ ನೋಂದಣಿ ಡೇಟಾಬೇಸ್‌ನಿಂದ ಅದನ್ನು ಸರಿಸುಮಾರು 40 ದಿನಗಳಲ್ಲಿ ಅಳಿಸಲಾಗುತ್ತದೆ, ಈ ಮುಂದಿನ ಸ್ಥಳಗಳಲ್ಲಿ ನೋಂದಾಯಿಸಿಕೊಂಡಿರುವ ಖಾತೆಗಳಿಗೆ ದೀರ್ಘ ಇರಿಸಿಕೊಳ್ಳುವಿಕೆ ಅವಧಿಯು ಬೇಕಾಗುತ್ತದೆ: ಆಸ್ಟ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್ (ಸರಿಸುಮಾರು 90 ದಿನಗಳು); ಬ್ರೆಜಿಲ್ ಅಥವಾ ತೈವಾನ್ (ಸರಿಸುಮಾರು 180 ದಿನಗಳು). ಬಳಕೆದಾರರು ಮೋಸದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದನ್ನು ತಡೆಯಲು ಈ ವಿಳಂಬವು ಅಗತ್ಯವಾಗಿದೆ.
 • ನಾವು ನಕಲಿಸಿರುವಂತಹ ಯಾವುದೇ ಮಾಹಿತಿಯು ನಿಮ್ಮ ಅಳಿಸುವಿಕೆ ವಿನಂತಿಯ ನಂತರ ಕೆಲವೊಂದು ಅವಧಿಯವರೆಗೆ ಬ್ಯಾಕ್-ಅಪ್ ಸಂಗ್ರಹಣೆಯಲ್ಲಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ನಮ್ಮ ಸಕ್ರಿಯ ಬಳಕೆದಾರ ಡೇಟಾಬೇಸ್‌ಗಳಲ್ಲಿ ಯಾವುದೇ ಮಾಹಿತಿಯಿಲ್ಲದಿದ್ದರೂ ಈ ಸನ್ನಿವೇಶವು ಇದ್ದಿರಬಹುದು.

ಸರ್ವರ್‌ಗಳ ಲಾಗ್ ಫೈಲ್‌ಗಳು

 • ನಿಮ್ಮ ವೆಬ್ ಪುಟಗಳು ಮತ್ತು ಜಾಹೀರಾತು ಬ್ಯಾನರ್ಸ್ ಪ್ರಕ್ರಿಯೆಗಳನ್ನು ಕಳುಹಿಸುವ ಮತ್ತು ಪ್ರತಿನಿತ್ಯ ಅಪಾರ ಮಾಹಿತಿಯನ್ನು ಸಂಗ್ರಹಣೆ ಮಾಡುವ Yahoo ಕಂಪ್ಯೂಟರ್‌ಗಳು ("ಸರ್ವರ್‌ಗಳು" ಎಂಬುದಾಗಿ ಕರೆಲ್ಪಡುತ್ತವೆ). ಈ ಕಂಪ್ಯೂಟರ್ ದಾಖಲೆಗಳನ್ನು "ಲಾಗ್ ಫೈಲ್‌ಗಳು" ಎಂದು ಕರೆಯಲಾಗುತ್ತದೆ.
 • ಲಾಗ್‌ ಫೈಲ್‌ಗಳನ್ನು, ವಿಶ್ಲೇಷಣೆ, ಸಂಶೋಧನೆ, ಲೆಕ್ಕಪತ್ರ ಶೋಧನೆಗೆ ಮತ್ತು ಮೇಲೆ ತಿಳಿಸಲಾದ ಇತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗುವುದು. ಈ ಮಾಹಿತಿಯನ್ನು ಬಳಸಿದ ನಂತರ, ಇದನ್ನು ಸಂಗ್ರಹಿಸಲಾಗುತ್ತದೆ ಮತ್ತು ಇದು ಪ್ರವೇಶಕ್ಕೆ ಸಿಗುವುದಿಲ್ಲ. ಮಾಹಿತಿಯು ಸಂಗ್ರಹಣೆಯಾಗುವವರೆಗೆ, ನಿಮ್ಮ Yahoo ಐಡಿಯು ನಮ್ಮ ಸಕ್ರಿಯ ಸರ್ವರ್ ಲಾಗ್ ಫೈಲ್‌ಗಳಲ್ಲಿ ಉಳಿದುಕೊಂಡಿರಬಹುದು.

ಅನಾಮಧೇಯಗೊಳಿಸುವಿಕೆ/ಗುರುತು-ಮರೆಮಾಚುವಿಕೆ

 • ಅನಾಮಧೇಯಗೊಳಿಸುವಿಕೆ ಎಂಬುದು ಡೇಟಾ ದಾಖಲೆಗಳಲ್ಲಿರುವ ವೈಯುಕ್ತಿಕ ಗುರುತಿಸುವಿಕೆಗಳನ್ನು ತೆಗೆಯುವ ಮತ್ತು ಬದಲಿಸುವ ಪ್ರಕ್ರಿಯೆಯಾಗಿರುತ್ತದೆ, ಈ ಮೂಲಕ ಡೇಟಾ ಬಳಸಿಕೊಂಡು ಇನ್ನು ಮುಂದೆ ವೈಯುಕ್ತಿಕವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಇದನ್ನು ಗುರುತು-ಮರೆಮಾಚುವಿಕೆ ಎಂದು ಸಹ ಕರೆಯಲಾಗುತ್ತದೆ. ನಾವು ಈ ಪದಗಳನ್ನು ಅದಲು ಬದಲು ಮಾಡಿ ಬಳಸುತ್ತೇವೆ.
 • ಡೇಟಾ ಗುರುತು-ಮರೆಮಾಚುವ ಸಲುವಾಗಿ Yahoo ಗುರುತಿಸುವಿಕೆಗಳನ್ನು ಬದಲಿಸಲು, ಮೊಟಕುಗೊಳಿಸಲು ಅಥವಾ ಅಳಿಸಲು ಬಹು ಹಂತದ ಪ್ರಕ್ರಿಯೆಯನ್ನು ಬಳಸುತ್ತೇವೆ. ನಾವು ಡೇಟಾ ರಕ್ಷಣೆಗಾಗಿ ಮತ್ತು ಗುರುತು-ಮರೆಮಾಚುವಿಕೆ ಕ್ರಮಗಳಿಗಾಗಿ ನಿರಂತರ ಸುಧಾರಣೆಗಳಿಗೆ ಮತ್ತು ಇವುಗಳ ಅನುಷ್ಠಾನಕ್ಕೆ ಬದ್ಧರಾಗಿರುತ್ತೇವೆ.

ಅನಾಮಧೇಯತೆ

 • Yahoo ಅನಾಮಧೇಯತೆ ನೀತಿಯು ಕೇವಲ ಶೋಧ ಲಾಗ್ ಡೇಟಾಗೆ ಮಾತ್ರ ಅನ್ವಯಿಸುತ್ತದೆ.
 • ಈ ಡೇಟಾವನ್ನು Yahoo 18 ತಿಂಗಳುಗಳವರೆಗೆ ಗುರುತಿಸಬಹುದಾದ ರೂಪದಲ್ಲಿ ಸಂಗ್ರಹಿಸುತ್ತದೆ.
 • ಶೋಧ ಬಳಕೆದಾರ ಲಾಗ್ ಡೇಟಾ ಒಳಗಿರುವ IP ವಿಳಾಸಗಳನ್ನು ಸಂಗ್ರಹಿಸಿದ 6 ತಿಂಗಳೊಳಗಾಗಿ ಅನಾಮಧೇಯಗೊಳಿಸಲಾಗುತ್ತದೆ ಅಥವಾ ಅಳಿಸಲಾಗುತ್ತದೆ.
 • oath