Yahoo ಮೆಸೆಂಜರ್

ಈ ಮಾಡ್ಯೂಲ್ 2015 ರ ಡಿಸೆಂಬರ್ 3 ರಂದು ಅಥವಾ ನಂತರದಲ್ಲಿ ಬಿಡುಗಡೆ ಮಾಡಿದ Yahoo ಮೆಸೆಂಜರ್ ಆವೃತ್ತಿಗಳಿಗೆ ನಮ್ಮ ಗೌಪ್ಯತೆ ಅಭ್ಯಾಸಗಳನ್ನು ವಿವರಿಸುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು Yahoo ಹೇಗೆ ನಿರ್ವಹಿಸುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಗೌಪ್ಯತೆ ನೀತಿ ಗೆ ಭೇಟಿ ನೀಡಿ.

ಗಮನಿಸಿ: 2015 ರ ಡಿಸೆಂಬರ್ 3 ಕ್ಕೂ ಮೊದಲು ಬಿಡುಗಡೆಯಾದ Yahoo ಮೆಸೆಂಜರ್ ಆವೃತ್ತಿಗಳನ್ನು ಇನ್ನು ಮುಂದೆ ಬೆಂಬಲಿಸಲಾಗುವುದಿಲ್ಲ, ಆದರೆ ನೀವು ಗೌಪ್ಯತೆ ಮಾಡ್ಯೂಲ್ ಅನ್ನು ಇಲ್ಲಿ ಪರಿಶೀಲಿಸಬಹುದು. ದಯವಿಟ್ಟು ಹೊಸ Yahoo ಮೆಸೆಂಜರ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಿ.

ಮಾಹಿತಿ ಸಂಗ್ರಹ ಮತ್ತು ಬಳಕೆ ಪದ್ಧತಿಗಳು

  • ನೀವು Yahoo ಮೆಸೆಂಜರ್ ಬಳಸಿದಾಗ ನಿಮ್ಮ ಬಗ್ಗೆ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ನಿಮ್ಮ ಫೋನ್ ಸಂಖ್ಯೆ, ಇಮೇಲ್ ವಿಳಾಸ, ಫೋಟೋ ಮತ್ತು ನಿಮ್ಮ ಸಮ್ಮತಿಯ ಜೊತೆಗೆ ಸಾಧನ ಸಂಪರ್ಕಗಳನ್ನು ನಿಮ್ಮಿಂದ ನೇರವಾಗಿ ನಾವು ಸಂಗ್ರಹಿಸುತ್ತೇವೆ. ನೀವುYahoo ಮೆಸೆಂಜರ್ ಬಳಸಿದಾಗ, ನಿಮ್ಮಿಂದ ನಾವು ನಿಮ್ಮ IP ವಿಳಾಸ, ಸ್ಥಳ, ಆಪ್ ಬಳಕೆಯ ಕುರಿತಾಗಿ ಅನಾಲಿಟಿಕ್ಸ್, ಸಾಧನ ID ಮತ್ತು ಪ್ರಕಾರ ಮತ್ತು ಮೊಬೈಲ್ ವಾಹಕದಂತಹ ಮಾಹಿತಿಯನ್ನು ಸಹ ಸಂಗ್ರಹಿಸುತ್ತೇವೆ.
  • ಸಂಗ್ರಹಿಸಿದ ಮಾಹಿತಿಯನ್ನು ನಾವು ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ನಿಮಗೆ ನೀಡಲು, ನಿಮ್ಮೊಂದಿಗೆ ಸಂವಹನ ಮಾಡಲು ಮತ್ತು ನಮ್ಮ ಉತ್ಪನ್ನಗಳನ್ನು ನಿರ್ವಹಣೆ ಮಾಡಲು ಮತ್ತು ಸುಧಾರಿಸಲು ಬಳಸುತ್ತೇವೆ. ಉದಾಹರಣೆಗೆ, ನಿಮ್ಮ ಮಾಹಿತಿಯನ್ನು ನಾವು ನಿಮಗಾಗಿ ಖಾತೆಯನ್ನು ರಚಿಸಲು ಮತ್ತು ಇತರ Yahoo ಮೆಸೆಂಜರ್ ಬಳಕೆದಾರರನ್ನು (ಮತ್ತು ತಿರುವು ಮುರುವಾಗಿ) ಹುಡುಕಲು, ಅವರೊಂದಿಗೆ ಸಂಪರ್ಕಗೊಳ್ಳಲು ಮತ್ತು ಅವರೊಂದಿಗೆ ಸಂವಹನ ಮಾಡಲು ಶಕ್ತಗೊಳಿಸಲು ಬಳಸುತ್ತೇವೆ.
  • Yahoo ಮೆಸೆಂಜರ್ ಬಳಸುವಾಗ, ನಿಮ್ಮ ಸಂವಹನ ವಿಷಯವನ್ನು ನಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ನಮ್ಮ ಪ್ಲಾಟ್‌ಫಾರ್ಮ್‌ಗಳ ಮೂಲಕ ನಿಮಗಾಗಿ ಹುಡುಕಲಾಗುವಂತೆ ಮಾಡಬಹುದು.
  • ನೀವುಸಂಭಾಷಣೆಗಳನ್ನು ಮತ್ತು/ಅಥವಾ ಕಳುಹಿಸದ ಸಂವಹನ ವಿಷಯವನ್ನು ತೆರವುಗೊಳಿಸಬಹುದು, ಆದರೆ ಆಡಿಟ್ ಮತ್ತು ದಾಖಲೆಯ ಉದ್ದೇಶಗಳಿಗೆ ನಕಲುಗಳು ಮತ್ತು ಲಾಗ್‌ಗಳನ್ನು ತಾತ್ಕಾಲಿಕವಾಗಿ ಉಳಿಸಿಕೊಳ್ಳಬಹುದು.
    • ದಯವಿಟ್ಟು ನೆನಪಿಡಿ: ನೀವು ಯಾರೊಂದಿಗೆ ಸಂವಹನ ಮಾಡುತ್ತೀರೋ ಆ ಬಳಕೆದಾರರು ನಿಮ್ಮ ಸಂಭಾಷಣೆಗಳು ಮತ್ತು ಫೋಟೋಗಳನ್ನು ಉಳಿಸಲು, ನೀವು ಅವುಗಳನ್ನು ಕಳುಹಿಸದಿದ್ದರೂ ಸಹ ಆಯ್ಕೆಮಾಡಿಕೊಳ್ಳಬಹುದು.
  • Yahoo ನ ಸ್ವಯಂಚಾಲಿತ ವ್ಯವಸ್ಥೆಗಳು ಉದ್ದೇಶಿತ ಜಾಹೀರಾತಿಗೆ ಹೊಂದಾಣಿಕೆ ಮಾಡಲು ಮತ್ತು ಸಲ್ಲಿಸಲು ಮತ್ತು ಸ್ಪ್ಯಾಮ್ ಮತ್ತು ಮಾಲ್ವೇರ್ ಪತ್ತೆಹಚ್ಚುವಿಕೆಗಾಗಿ ಮತ್ತು ನಿಂದನೆಯ ರಕ್ಷಣೆಗಾಗಿ ವೈಯಕ್ತಿಕವಾಗಿ ಸಂಬಂಧಪಟ್ಟ ಉತ್ಪನ್ನ ಲಕ್ಷಣಗಳನ್ನು ಮತ್ತು ವಿಷಯವನ್ನು ಒದಗಿಸಲು ಎಲ್ಲಾ ಸಂವಹನದ ವಿಷಯವನ್ನು (ಅಂದರೆ ಮೇಲ್ ಮತ್ತು ಮೆಸೆಂಜರ್ ವಿಷಯ, ಶೀಘ್ರ ಸಂದೇಶಗಳು ಮತ್ತು SMS ಸಂದೇಶಗಳನ್ನು ಒಳಗೊಂಡಂತೆ) ಯಾವುದೇ ಮಿತಿಯಿಲ್ಲದಂತೆ ವಿಶ್ಲೇಷಿಸುತ್ತದೆ. ನಿಮ್ಮ Yahoo ಖಾತೆಯ ಜೊತೆಗೆ ಸಿಂಕ್ ಮಾಡಲಾದ ಸೇವೆಗಳ ಸಂವಹನ ವಿಷಯಗಳನ್ನು ಒಳಗೊಂಡು ಎಲ್ಲಾ ಸಂವಹನಗಳ ವಿಷಯಗಳನ್ನು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಅದನ್ನು ಸಂಗ್ರಹಿಸಿದಾಗ ವಿಶ್ಲೇಷಣೆಯು ಸಂಭವಿಸುತ್ತದೆ. ಕೆಲವು ಬಳಕೆಯ ಘಟನೆಗಳಲ್ಲಿ, ಅಂತಹ ದಾಖಲೆಗಳ ಜೆನೆರಿಕ್ ಟೆಂಪ್ಲೇಟ್‌ಗಳನ್ನು ರಚಿಸಲು ಸ್ವಯಂಚಾಲಿತವಾಗಿ ಅಲ್ಗಾರಿದಮ್‌ಗಳನ್ನು ವಾಣಿಜ್ಯ ಸಂವಹನಗಳಲ್ಲಿ Yahoo ಚಲಾಯಿಸುತ್ತದೆ (ಉದಾ. ಏರ್ ಲೈನ್ ರಸೀತಿಯ ಅಂಶಗಳನ್ನು ಗುರುತಿಸಲು ಸಾಮಾನ್ಯ ಭಾಷೆಯನ್ನು ಬಳಸುವುದು). ಈ ಟೆಂಪ್ಲೇಟ್‌ಗಳು ಸ್ವೀಕರಿಸುವವರ ವೈಯಕ್ತಿಕ ಡೇಟಾವನ್ನು ಒಳಗೊಂಡಿರುವುದಿಲ್ಲ. Yahoo ಟೆಂಪ್ಲೇಟ್ ಎಡಿಟರ್‌ಗಳು ನಮ್ಮ ಸೇವೆಗಳನ್ನು ಮತ್ತು ನಿಮ್ಮ ಅನುಭವದ ನಮ್ಮ ವೈಯಕ್ತೀಕರಣವನ್ನು ಸುಧಾರಿಸಲು ಟೆಂಪ್ಲೇಟ್‌ಗಳನ್ನು ಪರಿಶೀಲಿಸಬಹುದು.
    • ಇನ್ನಷ್ಟು ತಿಳಿಯಲು ದಯವಿಟ್ಟು ನಮ್ಮ FAQ ಓದಿ.
    • ಈ ಮಾಹಿತಿಯನ್ನು ಆಸಕ್ತಿ-ಆಧಾರಿತ ಜಾಹೀರಾತಿನಲ್ಲಿ ಸಹ ಬಳಸಬಹುದು. ವಾಣಿಜ್ಯಿಕ ಉದ್ದೇಶಗಳಿಗಾಗಿ ನೀವು Yahoo ನ ಸ್ವಯಂಚಾಲಿತ ಸ್ಕ್ಯಾನಿಂಗ್‌ನಿಂದ, ಜೊತೆಗೆ ನಮ್ಮ ಆಸಕ್ತಿ-ಆಧಾರಿತ ಜಾಹೀರಾತಿನಿಂದ ನಮ್ಮ ಜಾಹೀರಾತು ಆಸಕ್ತಿ ನಿರ್ವಾಹಕ ಮೂಲಕ ಹೊರಗುಳಿಯಬಹುದು.

ಮಾಹಿತಿ ಹಂಚುವಿಕೆ ಮತ್ತು ಬಹಿರಂಗಪಡಿಸುವಿಕೆ ಪದ್ಧತಿಗಳು

  • ನೀವು Yahoo ಮೆಸೆಂಜರ್ ಬಳಸಿಕೊಂಡು ಸಂವಹನ ಮಾಡಿದಾಗ, ನಿಮ್ಮ ಸ್ನೇಹಿತರ ಜೊತೆಗೆ ಸಂವಹನಗಳನ್ನು ಹಂಚಿಕೊಳ್ಳುವುದಕ್ಕೆ ನಾವು ಅನುಕೂಲ ಕಲ್ಪಿಸುತ್ತೇವೆ.
  • ಇತರ Yahoo ಮೆಸೆಂಜರ್ ಬಳಕೆದಾರರನ್ನು ಗುರುತಿಸಲು ಮತ್ತು ಅವರೊಂದಿಗೆ ಸಂವಹನ ಮಾಡುವುದನ್ನು ಸುಲಭಗೊಳಿಸಲು, ನಿಮ್ಮ ಸಮ್ಮತಿಯೊಂದಿಗೆ ನಾವು ನಿಮ್ಮ ಸಾಧನಗಳಿಂದ ಡೇಟಾವನ್ನು ಸಿಂಕ್ರೊನೈಸ್ ಮಾಡಬಹುದು. ಇದನ್ನು ನಾವು Yahoo ಸೇವೆಗಳಿಂದ ಹೆಚ್ಚಿನದನ್ನು ಪಡೆದುಕೊಳ್ಳಲು ನಿಮಗೆ ಸಹಾಯ ಮಾಡಲು ಮತ್ತು ನಿಮ್ಮ ಆನ್‌ಲೈನ್ ಅನುಭವವನ್ನು ವರ್ಧಿಸಲು ಮಾಡುತ್ತೇವೆ, ಉದಾಹರಣೆಗೆ, ಪ್ರತ್ಯೇಕವಾಗ ಅಥವಾ ಗುಂಪುಗಳಲ್ಲಿ ನಿಮ್ಮ ಸಂಪರ್ಕಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಲು, ಸಂಪರ್ಕಗಳನ್ನು ಡೀ-ಡೂಪ್ಲಿಕೇಟ್ ಮಾಡಲು ಅಥವಾ ಸಂದೇಶಕ್ಕೆ ಸಂಪರ್ಕಗಳನ್ನು ಸಲಹೆ ನೀಡಲು.
  • ತಮ್ಮ ಸಾಧನದಲ್ಲಿ ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಸಂಪರ್ಕವಾಗಿ ಸಂಗ್ರಹಿಸಿರುವ ಇತರ ಬಳಕೆದಾರರಿಗೆ ನಿಮ್ಮನ್ನು Yahoo ಮೆಸೆಂಜರ್‌ನಲ್ಲಿ ಕಂಡುಕೊಳ್ಳಲು ಮತ್ತು ನಿಮ್ಮ ಮೆಸೆಂಜರ್ ಹೆಸರು ಮತ್ತು ಫೋಟೋ ನೋಡಲು ಸಾಧ್ಯವಾಗುತ್ತದೆ.
  • Yahoo ಮೆಸೆಂಜರ್‌ಗೆ ಮತ್ತು ಮುಖತಃ ಮತ್ತು ಗುಂಪು ಸಂಭಾಷಣೆಗಳಿಗೆ ಸೇರುವಂತೆ ನಿಮ್ಮ ಸ್ನೇಹಿತರನ್ನು ನೀವು ಆಮಂತ್ರಿಸಬಹುದು. ಆಮಂತ್ರಣಗಳು ನಿಮ್ಮ ಹೆಸರು ಮತ್ತು ಫೋಟೋ ಒಳಗೊಂಡಂತೆ ಸಂದೇಶ ವಿಷಯವನ್ನು ಒಳಗೊಂಡಿರಬಹುದು.

ಇತರೆ

  • ಹೊಸ Yahoo ಮೆಸೆಂಜರ್‌ನಲ್ಲಿ ಲಭ್ಯವಿರುವಂತಹ “ಇಷ್ಟಪಡು” ಮತ್ತು ಕಳುಹಿಸದ ಲಕ್ಷಣಗಳಂತಹ ಕೆಲವು ಲಕ್ಷಣಗಳು, Yahoo ಮೆಸೆಂಜರ್‌ನ ಬೆಂಬಲಿತವಲ್ಲದ ಆವೃತ್ತಿಗಳನ್ನು ಬಳಸಿಕೊಂಡುಸ್ನೇಹಿತರ ಜೊತೆಗೆಸಂವಹನ ಮಾಡುವಾಗ ಕಾರ್ಯನಿರ್ವಹಿಸದೇ ಇರಬಹುದು. ಇನ್ನಷ್ಟು ತಿಳಿಯಲು ನಮ್ಮ ಅಂತರ ಕಾರ್ಯನಿರ್ವಹಣೆ ಮತ್ತು ಕಳುಹಿಸದಿರುವಿಕೆ ಸಹಾಯ ಪುಟಗಳನ್ನು ಪರಿಶೀಲಿಸಿ.
  • ಈ ಉತ್ಪನ್ನದ ಕುರಿತಾಗಿ ನಿಮಗೆ ಹೆಚ್ಚುವರಿ ಪ್ರಶ್ನೆಗಳಿದ್ದರೆ Yahoo ಮೆಸೆಂಜರ್ ಸಹಾಯ ಪುಟಗಳನ್ನು ದಯವಿಟ್ಟು ನೋಡಿ.