Yahoo ಮೊಬೈಲ್

Yahoo ನಿಮ್ಮ ಗೌಪ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಈ ಸಮೀಕ್ಷೆಯು Yahoo ನ ಮುಖ್ಯ ಮೊಬೈಲ್ ಗೌಪ್ಯತಾ ಪದ್ದತಿಗಳನ್ನು ನೀವು ತಿಳಿದುಕೊಳ್ಳಲು ಸಹಾಯಕವಾಗಬೇಕು. ನಮ್ಮ ಗೌಪ್ಯತಾ ಆಚರಣೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು Yahoo ಗೌಪ್ಯತಾ ನೀತಿಯನ್ನು ನೋಡಿ.

1. ಮೊಬೈಲ್ ಮುಖಪುಟವನ್ನು ಗ್ರಾಹಕೀಯವಾಗಿಸುವುದು
2. ಮೊಬೈಲ್ ಡಿವೈಸ್ ಯೂನಿಕ್ ಐಡೆಂಟಿಫೈಯರ್
3. ಭೌಗೋಳಿಕ ಸ್ಥಳ
4. ಮಾಹಿತಿಯ ಬಹಿರಂಗಪಡಿಸುವಿಕೆ
5. ಕಾನೂನು ಪ್ರಕ್ರಿಯೆ
6. ಖಾತೆಯ ಮಾಹಿತಿ ಮತ್ತು ಪ್ರಾಶಸ್ತ್ಯಗಳು
7. ಮೂರನೇ ವ್ಯಕ್ತಿಯ Apps ಮತ್ತು ವಿಡ್ಜೆಟ್ ಗಳು
8. ಜಾಹೀರಾತು
9. ಮೇಲ್
10. ಮೆಸೆಂಜರ್
11. ಹುಡುಕು
12. ಇತರ

1. ಮೊಬೈಲ್ ಮುಖ್ಯಪುಟವನ್ನು ಗ್ರಾಹಕೀಯವಾಗಿಸುವುದು

ನೀವು ಮಾಹಿತಿಯನ್ನು ಅಂದರೆ ಸಾಧನ ಸಂಪರ್ಕಗಳು, ಕ್ಯಾಲೆಂಡರ್ ಘಟನೆಗಳು, ಸ್ಥಳ, ಮತ್ತು ಅಚ್ಚುಮೆಚ್ಚಿನ ವಿಡ್ಜೆಟ್ಗಳನ್ನು, Yahoo ಉತ್ಪನ್ನಗಳು ಮತ್ತು ಸೇವೆಗಳಾದ್ಯಂತ ಮತ್ತು ಸಾಧನಗಳ ನಡುವೆ, Yahoo ಜೊತೆಗೆ ನಿಮ್ಮ ಅನುಭವವನ್ನು ವೈಯಕ್ತೀಕರಣ ಮಾಡಿಕೊಳ್ಳುವ ಸಲುವಾಗಿ ಹಂಚಿಕೊಳ್ಳುವುದನ್ನು ಆರಿಸಿಕೊಳ್ಳಬಹುದು. ನೀವು ನಿಮ್ಮ ಉತ್ಪನ್ನಗಳನ್ನು ಉತ್ಪನ್ನ ಸೆಟ್ಟಿಂಗ್ಗಳಲ್ಲಿ ಅಥವಾ, ಲಭ್ಯವಿದ್ದಾಗ, ಮೊಬೈಲ್ ಸಾಧನ ಸೆಟ್ಟಿಂಗ್ಗಳಲ್ಲಿ ನಿರ್ವಹಿಸಬಹುದು. ಇದರ ಜೊತೆಗೆ, ನಿಮ್ಮ ಅನುಭವವನ್ನು ವೈಯಕ್ತೀಕರಣ ಮಾಡಲು Yahoo ನಿಮ್ಮ ಸಾಧನದಿಂದ ಮಾಹಿತಿಯನ್ನು ಸಂಗ್ರಹಿಸಬಹುದು, ಇದು ನೀವು ಸ್ಥಾಪಿಸಿರುವ ಆಪ್ಗಳ ಕುರಿತಾದ ಮಾಹಿತಿಯಾಗಿರಬಹುದು.

2. ಮೊಬೈಲ್ ಡಿವೈಸ್ ಯೂನಿಕ್ ಐಡೆಂಟಿಫೈಯರ್

ನಿಮ್ಮ ಮೊಬೈಲ್ ಸಾಧನವನ್ನು ಅನನ್ಯವಾದ ರೀತಿಯಲ್ಲಿ ಗುರುತಿಸಬಹುದಾದ ಒಬ್ಬ ಸೇವಾ ಪೂರೈಕೆದಾರರ ಮೂಲಕ, Yahoo ಗೆ ಸಂಪರ್ಕಿಸಿದಾಗ, Yahoo ಈ ಗುರುತಿಸುವಿಕೆಯನ್ನು ಸ್ವೀಕರಿಸಬಹುದು ಮತ್ತು ಅದನ್ನು ವಿಸ್ತೃತ ಸೇವೆಗಳು ಮತ್ತು/ಅಥವಾ ಕಾರ್ಯಗಳನ್ನು ಒದಗಿಸಲು ಉಪಯೋಗಿಸಬಹುದು. ಗೌಪ್ಯತಾ ಒಡಂಬಡಿಕೆಗಳ ಅಡಿಯಲ್ಲಿ ನಮ್ಮ ಪರವಾಗಿ ಕಾರ್ಯನಿರ್ವಹಿಸುವ ನಂಬಿಕೆಯ ಪಾಲುದಾರರಿಗೆ ಈ ಸಾಧನ ಐಡೆಂಟಿಫೈಯರ್ ಗಳನ್ನು Yahoo ಬಹಿರಂಗಪಡಿಸಬಹುದು. ಈ ಪಾಲುದಾರರು ಈ ಮಾಹಿತಿಯನ್ನು ನಿಮಗೆ Yahoo ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಸಹಾಯಕವಾಗಲು ಉಪಯೋಗಿಸಬಹುದು. ನಿರ್ದಿಷ್ಟವಾದ Yahoo ಸೇವೆಗಳು ನಿಮ್ಮ ದೂರವಾಣಿ ಸಂಖ್ಯೆಯನ್ನು ಅಗತ್ಯಪಡಿಸಬಹುದು. ನಾವು ಆ ದೂರವಾಣಿ ಸಂಖ್ಯೆಯನ್ನು ಮೊಬೈಲ್ ಸಾಧನ ಗುರುತಿಸುವಿಕೆ ಮಾಹಿತಿಗೆ ಸಂಯೋಜಿಸಬಹುದು. ಆದಾಗ್ಯೂ, ನಿಮ್ಮ ಅನುಮತಿಯ ಹೊರತಾಗಿ ನಾವು ಆ ದೂರವಾಣಿ ಸಂಖ್ಯೆಯನ್ನು ಟೆಲಿಮಾರ್ಕೆಟಿಂಗ್ ಗಾಗಿ ಉಪಯೋಗಿಸುವುದಿಲ್ಲ.

3. ಭೌಗೋಳಿಕ ಸ್ಥಳ

ನೀವು ಮೊದಲು GPS, Wi-Fi, ಅಥವಾ ಸೆಲ್ ಟವರ್ ಸಾಮಿಪ್ಯತೆಗಳಂತಹ ತಂತ್ರಜ್ಞಾನಗಳಿಂದ ಖಚಿತವಾದ ಭೌತಿಕ ಸ್ಥಳವನ್ನು Yahoo ಸ್ವೀಕರಿಸುವ ಮೊದಲು ನೇರವಾಗಿ ನಿಮ್ಮ ಸಾಧನ, ಬ್ರೌಸರ್ ನೊಂದಿಗೆ ಅಥವಾ ಮೂಲಕ ಅನುಮತಿಯನ್ನು ನೀಡಬೇಕು. ನೀವು ನಿಮ್ಮ ಸಾಧನದಿಂದ ಖಚಿತವಾದ ಸ್ಥಳದ ಮಾಹಿತಿಯನ್ನು ಗಳಿಸಲು Yahoo ಗೆ ನಿಮ್ಮ ಅನುಮತಿಯನ್ನು ಹಿಂಪಡೆಯಲು ಶಕ್ತರಾಗಿರುವಿರಿ, ಆದರೆ Yahoo ಉತ್ಪನ್ನ ಅಥವಾ ಸೇವೆಯೊಂದಿಗೆ ಸಂಯೋಜಿಸಲ್ಪಟ್ಟ ಸಾಧನ ಅಥವಾ ಬ್ರೌಸರ್ ಆಧಾರದ ಮೇಲೆ ನೀವು ಉಪಯೋಗಿಸುತ್ತಿರುವ ಸ್ಥಳ ಮಾಹಿತಿ ಅನುಮತಿಗಳು Yahoo ನಿಂದ ನಿಯಂತ್ರಿಸಲ್ಪಡದಿರಬಹುದು. ನಿಮ್ಮ ಸಾಧನದಲ್ಲಿ ಸ್ಥಳ ಅನುಮತಿಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು Location Opt-Out ಸಹಾಯ ಪುಟಕ್ಕೆ ಭೇಟಿ ಕೊಡಿ. ನಿಮ್ಮ ಮಾಹಿತಿಯನ್ನು ಸ್ವೀಕರಿಸಿದ ನಂತರ,Yahoo ವಿಸ್ತೃತ ಸ್ಥಳ ಆಧಾರಿತ ಸೇವೆಗಳನ್ನು ಒದಗಿಸಲು, ಸ್ಥಳ-ನಿರ್ದೇಶಿತ ಜಾಹೀರಾತನ್ನು ಒದಗಿಸಲು, search ಫಲಿತಾಂಶಗಳು, ಮತ್ತು ಇತರ ವಿಷಯಗಳನ್ನು ಹುಡುಕಲು, ನಿಮ್ಮ ಕ್ಯಾರಿಯರ್ ನೀಡಿದ ಅಥವಾ Yahoo ನಲ್ಲಿ ನೋಂದಣಿಯ ಸಮಯದಲ್ಲಿ ನೀವು ನೀಡಿದ IP ವಿಳಾಸ, ಬಿಲ್ಲಿಂಗ್ ಅಂಚೆ ಸಂಕೇತಗಳಂತಹ ಇತರ ಸ್ಥಳ ಆಧಾರಿತ ಮಾಹಿತಿಯ ಹೊಂದಾಣಿಕೆಯೊಂದಿಗೆ, ಈ ಮಾಹಿತಿಯನ್ನು ಉಪಯೋಗಿಸಬಹುದು ಮತ್ತು ಸಂಗ್ರಹಿಸಿಟ್ಟುಕೊಳ್ಳಬಹುದು.

4. ಮಾಹಿತಿಯ ಬಹಿರಂಗಪಡಿಸುವಿಕೆ

Yahoo ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ಕೋರಿಕೊಂಡ ಉತ್ಪನ್ನಗಳು ಅಥವಾ ಸೇವೆಗಳನ್ನು ಒದಗಿಸುವ ಹೊರತಾಗಿ, ಅಥವಾ ಈ ಕೆಳಗಿನ ಸಂಧರ್ಭಗಳ ಅಡಿಯಲ್ಲಿ ಇತರ ಜನರೊಂದಿಗೆ ಅಥವಾ ಮಾನ್ಯತೆ ಹೊಂದಿರದ ಕಂಪನಿಗಳಿಗೆ ಬಾಡಿಗೆ ನೀಡುವುದಿಲ್ಲ, ಮಾರಾಟ ಮಾಡುವುದಿಲ್ಲ, ಅಥವಾ ಹಂಚಿಕೊಳ್ಳುವುದಿಲ್ಲ.

  • ನಾವು ಗೌಪ್ಯತಾ ಒಡಂಬಡಿಕೆಗಳ ಅಡಿಯಲ್ಲಿ Yahoo ನೊಂದಿಗೆ ಅಥವಾ ಅದರ ಪರವಾಗಿ ಕಾರ್ಯನಿರ್ವಹಿಸುವ ನಂಬಿಕೆಯ ಪಾಲುದಾರರಿಗೆ ಮಾಹಿತಿಯನ್ನು ಒದಗಿಸುತ್ತೇವೆ. ಈ ಕಂಪನಿಗಳು Yahoo ನ ಕೊಡುಗೆಗಳನ್ನು ತಿಳಿಸಲು ಮತ್ತು ನಮ್ಮ ಮಾರ್ಕೆಟಿಂಗ್ ಪಾಲುದಾರರ ಬಗ್ಗೆ ನಿಮ್ಮೊಂದಿಗೆ ಸಂವಹನ ನಡೆಸಲು ಸಹಾಯಕವಾಗಲು ನಿಮ್ಮ ಮಾಹಿತಿಯನ್ನು ಉಪಯೋಗಿಸಬಹುದು. ಆದಾಗ್ಯೂ, ಈ ಕಂಪನಿಗಳು ಈ ಮಾಹಿತಿಯನ್ನು ಹಂಚಿಕೊಳ್ಳಲು ಯಾವುದೇ ಸ್ವತಂತ್ರವಾದ ಹಕ್ಕನ್ನು ಹೊಂದಿರುವುದಿಲ್ಲ.
  • ನಾವು ಸ್ವಾಧೀನ ಅಥವಾ ಮತ್ತೊಂದು ಕಂಪನಿಯೊಂದಿಗೆ ಸಸಂಯೋಗಗೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ, ಒಂದು ವಿಭಿನ್ನವಾದ ಗೌಪ್ಯತಾ ನೀತಿಗೆ ಒಳಪಟ್ಟು ನಿಮ್ಮ ಮಾಹಿತಿಯು ವರ್ಗಾವಣೆಯಾಗುವ ಮೊದಲು Yahoo ನಿಮಗೆ ತಿಳಿಸುತ್ತದೆ.

5. ಕಾನೂನು ಪ್ರಕ್ರಿಯೆ

ತನಿಖೆ ಮಾಡಲು, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಅಥವಾ ಅವುಗಳ ವಿರುದ್ದ ಕ್ರಮ ತೆಗೆದುಕೊಳ್ಳಲು, ಮೋಸದ ಸಂದೇಹ, ಯಾವುದೇ ವ್ಯಕ್ತಿಯ ದೈಹಿಕ ಸುರಕ್ಷತೆಗೆ ಸಂಭವನೀಯ ಬೆದರಿಕೆಗಳನ್ನು ಒಳಗೊಂಡ ತುರ್ತು ಪರಿಸ್ಥಿತಿಗಳು, ಅಥವಾ Yahoo ನ ಸೇವಾ ಷರತ್ತುಗಳ ಉಲ್ಲಂಘನೆ ಅಥವಾ ಕಾನೂನಿನಿಂದ ಅಗತ್ಯತೆಯಂತೆ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂಬುದನ್ನು Yahoo ನಂಬುತ್ತದೆ. ನಾವು ನ್ಯಾಯಾಲಯದ ಆಜ್ಞೆಗೆ ಪ್ರತಿಕ್ರಿಯೆ ಅಥವಾ ನ್ಯಾಯಾಲಯದ ಆದೇಶಗಳು, ಕಾನೂನು ಪ್ರಕ್ರಿಯೆಯಲ್ಲಿ, ಅಥವಾ ನಮ್ಮ ಕಾನೂನು ಹಕ್ಕುಗಳನ್ನು ಸ್ಥಾಪಿಸಲು ಅಥವಾ ಚಟುವಟಿಕೆಗೊಳಿಸಲು ಅಥವಾ ಕಾನೂನುಬದ್ದ ಕ್ಲೈಮುಗಳ ವಿರುದ್ದದ ರಕ್ಷಣೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.

6. ಖಾತೆಯ ಮಾಹಿತಿ ಮತ್ತು ಪ್ರಾಶಸ್ತ್ಯಗಳು

ನೀವು ಒಂದು ಕಂಪ್ಯೂಟರಿನಲ್ಲಿ, ಯಾವುದೇ ಸಮಯದಲ್ಲಿ, ನಿಮ್ಮ ಮಾರ್ಕೆಂಟಿಂಗ್ ಪ್ರಾಶಸ್ತ್ಯಗಳನ್ನು ಒಳಗೊಂಡು, ನಿಮ್ಮ Yahoo ಖಾತೆಯನ್ನು ಬದಲಾಯಿಸಬಹುದು. ಮೊಬೈಲ್ ಸಾಧನಗಳನ್ನು ಉಪಯೋಗಿಸುವಾಗ, ನೀವು ಲಾಗ್ ಇನ್ ಆಗಿರದಿದ್ದರೆ, ಸೇವಾ ಇತಿ-ಮಿತಿಗಳು Yahoo ಸೇವೆಗಳ ಅಥವಾ ಪರಿಕರಗಳ ಪೂರ್ಣ ಕಾರ್ಯಾಚರಣೆಯ ಅವಕಾಶದಿಂದ ನಿಮ್ಮನ್ನು ನಿರ್ಬಂಧಿಸಬಹುದು. ಅಂತಹ ಪ್ರಕರಣದಲ್ಲಿ, ನೀವು Yahoo ಗೆ ಸಂಪರ್ಕವನ್ನು ಹೊಂದಲು ಒಂದು ಕಂಪ್ಯೂಟರನ್ನು ಉಪಯೋಗಿಸಬೇಕಾಗಬಹುದು.

7. ಮೂರನೇ ವ್ಯಕ್ತಿಯ Apps ಮತ್ತು ವಿಡ್ಜೆಟ್ ಗಳು

Yahoo ಮೂರನೇ ವ್ಯಕ್ತಿಯ Apps ಮತ್ತು ವಿಡ್ಜೆಟ್ ಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು. ನೀವು ಮೂರನೇ ವ್ಯಕ್ತಿಯ Apps ಮತ್ತು ವಿಡ್ಜೆಟ್ ಗಳನ್ನು ಸೇರಿಸಿದರೆ, ನಾವು ನಿಮ್ಮ ದೇಶ, ಆದ್ಯತೆಯ ಭಾಷೆ, ನಿಮ್ಮ ಮೊಬೈಲ್ ಕ್ಯಾರಿಯರ್, ಸಾಧನದ ಬಗೆ ಮತ್ತು ಬ್ರೌಸರ್ ವಿಧಗಳಂತಹ ಮಾಹಿತಿಯನ್ನು ನಾವೇನಾದರೂ ಹೊಂದಿದ್ದರೆ ಹಂಚಿಕೊಳ್ಳಬಹುದು. ಮೂರನೇ ವ್ಯಕ್ತಿಯ Apps ಮತ್ತು ವಿಡ್ಜೆಟ್ ಗಳೂ ಸಹ cookieಗಳನ್ನು ಉದ್ದೀಪಿಸಬಹುದು. ನೀವು ನಿಮ್ಮ ಪ್ರಸಕ್ತ ಸ್ಥಳದ ದತ್ತಾಂಶವನ್ನು ಹಂಚಿಕೊಳ್ಳಲು Yahoo ಗೆ ಅನುಮತಿಯನ್ನು ನೀಡುವ ಮೂಲಕ ಮೂರನೇ ವ್ಯಕ್ತಿಯ Apps ಮತ್ತು ವಿಡ್ಜೆಟ್ ಅಭಿವೃದ್ದಿಪಡಿಸಿದವರಿಗೆ ಈ ದತ್ತಾಂಶವು ಲಭ್ಯವಾಗುವಂತಹ ಆಯ್ಕೆ ಮಾಡಬಹುದು. ಮೂರನೇ ವ್ಯಕ್ತಿಗಳ cookieಗಳ ಬಳಕೆ ಮತ್ತು ನೀವು ಅವರಿಗೆ ಒದಗಿಸಿದಂತಹ ಮಾಹಿತಿಯು ಅವರ ಸ್ವಂತ ಗೌಪ್ಯತಾ ನೀತಿಗೆ ಒಳಪಟ್ಟಿರುತ್ತವೆ, ಮತ್ತು Yahoo ಗೌಪ್ಯತ್ಯಾ ನೀತಿಗೆ ಅಥವಾ Yahoo ಮೊಬೈಲ್ ಗೌಪ್ಯತಾ ನೀತಿಗೆ ಒಳಪಟ್ಟಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

8. ಜಾಹೀರಾತು

Yahoo, ನಿಮ್ಮ ಆಸಕ್ತಿಯ ಬಗ್ಗೆ ಮಾಹಿತಿಯನ್ನು ನೀವುYahoo ಉತ್ಪನ್ನಗಳು ಮತ್ತು ಸೇವೆಗಳನ್ನು ಉಪಯೋಗಿಸಿದಾಗ, ಬ್ರಾಂಡೆಡ್ Yahoo ನೆಟ್ ವರ್ಕ್ ವೆಬ್ ಸೈಟ್ ಗಳಿಗೆ ಭೇಟಿ ನೀಡಿದಾಗ , ಮತ್ತು Yahoo ಪಾಲುದಾರರ ವೆಬ್ ಸೈಟ್ ಗಳಿಗೆ ಭೇಟಿ ನೀಡಿದಾಗಿನ ನಿಮ್ಮ ಚಟುವಟಿಕೆಯ ಆಧಾರದ ಮೇಲೆ ಸಂಗ್ರಹಿಸುತ್ತದೆ ಮತ್ತು ನಿರ್ವಹಣೆ ಮಾಡುತ್ತದೆ. ನಾವು ಈ ಮಾಹಿತಿಯನ್ನು ಜಾಹೀರಾತುಗಳನ್ನು ನೀಡಲು ಮತ್ತು ನಿಮ್ಮ ಆಸಕ್ತಿಗಳಿಗೆ ಅನುಗುಣವಾದ ವಿಷಯಗಳನ್ನು ಒದಗಿಸಲು ಉಪಯೋಗಿಸಬಹುದು. ಆಸಕ್ತಿ-ಆಧಾರಿತ ಜಾಹೀರಾತನ್ನು ಅಥವಾ Yahoo ನಿಂದ ಒದಗಿಸಲ್ಪಟ್ಟ ವಿಷಯಗಳ ಮಾಹಿತಿಯನ್ನು ಸ್ವೀಕರಿಸುವ ಆಯ್ಕೆಯ ಸಾಮರ್ಥ್ಯವನ್ನು ನಿಮಗೆ Yahoo ಒದಗಿಸುತ್ತದೆ. ನಿಮ್ಮ ಮೊಬೈಲ್ ಸಾಧನದಿಂದ ಆಸಕ್ತಿ-ಆಧಾರಿತ ಜಾಹೀರಾತು ಮತ್ತು ವಿಷಯಾಧಾರಿತ ಮಾಹಿತಿಯನ್ನು ಸ್ವೀಕರಿಸದಿರುವ ಆಯ್ಕೆಯನ್ನು ಮಾಡಲು, ನೀವು ನಮ್ಮ Ad Matching opt-out tool ಉಪಯೋಗಿಸುವ ಮೊದಲು ನಿಮ್ಮ ಮೊಬೈಲ್ ನಲ್ಲಿ ನಿಮ್ಮ Yahoo ಖಾತೆಗೆ ಲಾಗಿನ್ ಆಗಬೇಕು. ನೀವು Yahoo ನ Ad Interest Manager tool ನಿಂದ, ನಿಮ್ಮ ಆಸಕ್ತಿ-ಆಧಾರಿತ ವರ್ಗಗಳನ್ನೂ ಸಹ ನಿರ್ವಹಣೆ ಮಾಡಬಹುದು, ಅಥವಾ ಎಲ್ಲಾ ವರ್ಗಗಳನ್ನು (opt-out of all categories) ಆಯ್ಕೆ ಮಾಡಬಹುದು. Ad Interest Manager ಟೂಲ್ ನಲ್ಲಿ ಮಾಡಿದ ನಿಮ್ಮ ಸೆಟ್ಟಿಂಗ್ ಗಳನ್ನು ಮಾಡಲು ನಿಮ್ಮ ಮೊಬೈಲ್ ಸಾಧನಕ್ಕೆ ಅಳವಡಿಸಲು, ನೀವು ನಿಮ್ಮ Yahoo ಖಾತೆಗೆ ಸೈನ್ ಇನ್ ಆಗಬೇಕು.

9. ಮೇಲ್

Yahoo ನ ಸ್ವಯಂಚಾಲಿತ ವ್ಯವಸ್ಥೆಗಳು ಎಲ್ಲಾ ಸಂವಹನಗಳ ವಿಷಯವನ್ನು (ಅಂದರೆ ಮೇಲ್ ಮತ್ತು ಮೆಸೆಂಜರ್ ವಿಷಯಗಳು, ಶೀಘ್ರ ಸಂದೇಶಗಳು ಮತ್ತು SMS ಸಂದೇಶಗಳು ಸಹ ಒಳಗೊಂಡಂತೆ) ಯಾವುದೇ, ಮಿತಿಯಿಲ್ಲದೆ ವಿಶ್ಲೇಷಿಸುತ್ತದೆ, ಉದ್ದೇಶಿತ ಜಾಹೀರಾತಿಗೆ ಸೇವೆ ಮಾಡಲು ಹಾಗು ಹೊಂದಿಸಲು ಮತ್ತು ಸ್ಪ್ಯಾಮ್ಗಾಗಿ ಹಾಗು ಮಾಲ್ವೇರ್ ಪತ್ತೆ ಹಚ್ಚಲು ಮತ್ತು ನಿಂದನೆಯಿಂದ ರಕ್ಷಿಸಲು ವೈಯಕ್ತಿಕವಾಗಿ ಸಂಬಂಧಪಟ್ಟ ಉತ್ಪನ್ನ ಲಕ್ಷಣಗಳನ್ನು ಮತ್ತು ವಿಷಯವನ್ನು ನೀಡಿ. ಎಲ್ಲಾ ಸಂವಹನಗಳು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಸಂಗ್ರಹಿಸಿದಾಗ ಈ ವಿಶ್ಲೇಷಣೆಯು ಕಾಣಿಸಿಕೊಳ್ಳುತ್ತದೆ, ಅಂದರೆ ನಿಮ್ಮ Yahoo ಖಾತೆಯೊಂದಿಗೆ ಸಿಂಕ್ ಆಗಿರುವ ಸೇವೆಗಳಲ್ಲಿರುವ ಸಂವಹನಗಳ ವಿಷಯವನ್ನು ಇದು ಒಳಗೊಂಡಿರುತ್ತದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ, Yahoo ಆ ದಾಖಲೆಗಳ ಜೆನರಿಕ್ ಟೆಂಪ್ಲೇಟ್ಗಳನ್ನು ರಚಿಸಲು ಸ್ವಯಂಚಾಲಿತ ಅಲ್ಗಾರಿದಮ್ಗಳನ್ನು ವಾಣಿಜ್ಯ ಸಂವಹನಗಳಲ್ಲಿ ಚಲಾಯಿಸುತ್ತದೆ (ಉದಾ., ವಿಮಾನದ ರಸೀತಿಯ ಅಂಶಗಳನ್ನು ಗುರುತಿಸಲು ಸಾಮಾನ್ಯ ಭಾಷೆಯನ್ನು ಬಳಸುತ್ತದೆ). ಈ ಟೆಂಪ್ಲೇಟ್ಗಳು ಸ್ವೀಕರಿಸುವವರ ವೈಯಕ್ತಿಕ ಡೇಟಾವನ್ನು ಒಳಗೊಂಡಿರುವುದಿಲ್ಲ. Yahoo ಟೆಂಪ್ಲೇಟ್ ಎಡಿಟರ್ಗಳು ನಿಮ್ಮ ಅನುಭವಗಳಲ್ಲಿ ನಮ್ಮ ಸೇವೆಗಳನ್ನು ಮತ್ತು ನಮ್ಮ ವೈಯಕ್ತೀಕರಣವನ್ನು ಸುಧಾರಿಸಲಿಕ್ಕಾಗಿ, ನಿಮ್ಮ ಟೆಂಪ್ಲೇಟ್ಗಳನ್ನು ವಿಮರ್ಶೆ ಮಾಡಬಹುದು. ಒಂದು ವೇಳೆ ನೀವು ಅಮೆರಿಕಾದ ಸೇವೆಗಳನ್ನು ಬಳಸುತ್ತಿದ್ದರೆ ಮಾತ್ರ, ಟೆಂಪ್ಲೇಟ್ ಪರಿಶೀಲನೆಯು ಅನ್ವಯವಾಗುತ್ತದೆ. ಸೇವೆಗಳು. Yahoo ಮೇಲ್ ಮತ್ತು Yahoo ಮೆಸೆಂಜರ್ ಈಗ ಒಂದು ಸಾಮಾನ್ಯ ಶೋಧ ವೇದಿಕೆಯನ್ನು ಹಂಚಿಕೊಳ್ಳುತ್ತದೆ. ಇದೀಗ ನೀವು Yahoo ಮೇಲ್ ಸಂದೇಶಗಳ ಜೊತೆಗೆ Yahoo ಶೀಘ್ರ ಸಂದೇಶಗಳನ್ನು ಆರ್ಕೈವ್ ಮಾಡಲು ಆರಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಶೋಧ ಮಾಡಬಹುದು ( ಧ್ವನಿ ಮೇಲ್, SMS, ಮತ್ತು ಇನ್ನಷ್ಟನ್ನು ಒಳಗೊಂಡಂತೆ) Yahoo ಮೇಲ್ನ ಗೌಪ್ಯತಾ ಲಕ್ಷಣಗಳು ಮತ್ತು ಸೆಟ್ಟಿಂಗ್ಗಳ ಕುರಿತಾಗಿ ಹೆಚ್ಚಿಗೆ ತಿಳಿದುಕೊಳ್ಳಲು, ದಯವಿಟ್ಟು ಮೇಲ್ ಗೌಪ್ಯತಾ ನೀತಿಗೆ, ಅಥವಾ ಮೇಲ್ FAQಗೆ ಭೇಟಿ ನೀಡಿ.

10. Yahoo ಮೆಸೆಂಜರ್

Yahoo ಮೆಸೆಂಜರ್ ಸಂದೇಶದ ಇತಿಹಾಸವನ್ನು ಒಗದಿಸುತ್ತದೆ, ಇದು ನಿಮ್ಮ Yahoo ಖಾತೆಯಿಂದ IM ಸಂವಾದಗಳನ್ನು ನಮ್ಮ Yahoo ಸರ್ವರ್ಗಳಲ್ಲಿ ಉಳಿಸಲು, ಉತ್ಪನ್ನದ ಆರಿಸಿದ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ. ಕೆಲವೊಂದು Yahoo ಮೆಸೆಂಜರ್ ಆವೃತ್ತಿಗಳು ಸಹ ನಿಮ್ಮ ಸಂದೇಶಗಳ ಕೀಲಿಪದಗಳನ್ನು, Yahoo ಮೇಲ್ ಅನ್ನು ಹೋಲುವಂತಹದನ್ನು ವಿಶ್ಲೇಷಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Yahoo ಮೆಸೆಂಜರ್ ಗೌಪ್ಯತಾ ನೀತಿಗೆ ಭೇಟಿ ನೀಡಿ.

11. ಹುಡುಕು

ಕೆಲವು ಮಾರುಕಟ್ಟೆಗಳಲ್ಲಿ, Yahoo ತನ್ನ ಹುಡುಕಾಟ ಮತ್ತು ಪ್ರಾಯೋಜಿತ ಹುಡುಕಾಟ ಸೇವೆಗಳನ್ನು ಮೈಕ್ರೊಸಾಫ್ಟ್ ನೊಂದಿಗೆ ಸಂಯೋಜಿಸಿಕೊಂಡಿದೆ. ಹೆಚ್ಚು ತಿಳಿದುಕೊಳ್ಳಲು, ದಯವಿಟ್ಟು ಭೇಟಿ ಕೊಡಿ Yahoo ಹುಡುಕಾಟ ಗೌಪ್ಯತಾ ನೀತಿ.

12. ಇತರ

ನೀವು ಯಾವುದೇ ಮೊಬೈಲ್ ನಿಂದ Yahoo ಪ್ರವೇಶಿಸಿದಾಗ, ನೀವು Yahoo ಸೇವಾ ಷರತ್ತುಗಳ ಮಿತಿಗೊಳಪಡುವಿರಿ. ಈ ಸೇವೆ ಅಥವಾ Yahoo ಮೊಬೈಲ್ ಬಗ್ಗೆ ನಿಮಗೇನಾದರೂ ಪ್ರಶ್ನೆಗಳು ಇದ್ದರೆ, ದಯವಿಟ್ಟು ಭೇಟಿ ಕೊಡಿ Yahoo ಮೊಬೈಲ್ ಸಹಾಯ ಪುಟ.

ಈ ಪುಟವು ಈ ನಿರ್ದಿಷ್ಟ ಸೇವೆಗೆ ಸಂಬಂಧಿಸಿದಂತೆ ಪ್ರಸಕ್ತ Yahoo ಪದ್ದತಿಗಳನ್ನು ವಿವರಿಸುತ್ತದೆ. ಈ ಮಾಹಿತಿಯು ಕೆಲವೊಂದು ಗುಣಲಕ್ಷಣಗಳನ್ನು ಸೇರಿಸುವ ಅಥವಾ ತೆಗೆದುಹಾಕುವ ಮೂಲಕ ಅಥವಾ ವಿಭಿನ್ನವಾದ ಸೇವಾ ಪೂರೈಕೆದಾರರನ್ನು ಉಪಯೋಗಿಸಿ ಈ ಸೇವೆಗಳನ್ನು Yahoo ಪರಾಮರ್ಶಿಸುವುದರಿಂದ ಬದಲಾವಣೆಯಾಗಬಹುದು. ನಿಮ್ಮ ವೈಯುಕ್ತಿಕ ಮಾಹಿತಿಯನ್ನು Yahoo ಹೇಗೆ ನಿರ್ವಹಣೆ ಮಾಡುತ್ತದೆ ಎಂಬುದನ್ನು ಕಂಡುಕೊಳ್ಳಲು, ದಯವಿಟ್ಟು ನಮ್ಮ ಗೌಪ್ಯತಾ ನೀತಿಗೆ ಭೇಟಿ ಕೊಡಿ.

  • oath