Yahoo ಗೌಪ್ಯತೆಯ ನೀತಿ

Yahoo ಇದೀಗ Oath ಭಾಗವಾಗಿದ್ದು, ಇದು ಜಾಗತಿಕವಾಗಿ 50 ಕ್ಕಿಂತ ಹೆಚ್ಚು ಬ್ರಾಂಡ್‌ಗಳನ್ನು ಹೊಂದಿರುವ ಡಿಜಿಟಲ್ ಮತ್ತು ಮೊಬೈಲ್ ಮಾಧ್ಯಮ ಕಂಪನಿಯಾಗಿದೆ ಮತ್ತು Verizon ಕಂಪನಿ ಸಮೂಹಗಳ ಸದಸ್ಯವಾಗಿದೆ. ನಿಮ್ಮ ಮಾಹಿತಿಯನ್ನು ನಾವು ನಿರ್ವಹಿಸುವ ರೀತಿ ಬದಲಾಗಿಲ್ಲ, ಆದ್ದರಿಂದ Yahoo ನ ಗೌಪ್ಯತೆ ನೀತಿಯು ನೀವು Yahoo ಸೈಟ್‌ನಲ್ಲಿರುವಾಗ, Yahoo ಆಪ್ ಬಳಸುತ್ತಿರುವಾಗ ಅಥವಾ ನಮ್ಮ ಉತ್ಪನ್ನಗಳು, ಸೇವೆಗಳು ಅಥವಾ ತಂತ್ರಜ್ಞಾನಗಳ ಜೊತೆಗೆ ಸಂವಹನ ಮಾಡುತ್ತಿರುವಾಗ ಇನ್ನೂ ನಿಯಂತ್ರಿಸುತ್ತದೆ. ನಿಮ್ಮ ಕುರಿತಾದ ವೈಯಕ್ತಿಕವಲ್ಲದ ಗುರುತು ಮಾಹಿತಿಯನ್ನು ಉತ್ಪನ್ನ ಸುಧಾರಣೆಗಳು, ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ಮತ್ತು ನಿಮಗೆ ಅವರು ಹೆಚ್ಚು ಪ್ರಸ್ತುತ ಅನುಭವಗಳನ್ನು ಒದಗಿಸಲು ಸಹಾಯ ಮಾಡುವುದಕ್ಕಾಗಿ ನಮ್ಮ ಸಮೂಹ ಕಂಪನಿಗಳ ಜೊತೆಗೆ ನಾವು ಹಂಚಿಕೊಳ್ಳಬಹುದು. ನಿಮ್ಮ Yahoo ಖಾತೆಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಪ್ರಾಥಮಿಕ ಇಮೇಲ್ ವಿಳಾಸಕ್ಕೆ ಸೂಚನೆಯನ್ನು ಕಳುಹಿಸುವ ಮೂಲಕ ಅಥವಾ ನಮ್ಮ ಸೈಟ್‌ನಲ್ಲಿ ಪ್ರಮುಖ ಸೂಚನೆಯನ್ನು ಇರಿಸುವ ಮೂಲಕ ನಿಮ್ಮ ಮಾಹಿತಿಯನ್ನು ನಾವು ಪರಿಗಣಿಸುವ ರೀತಿಯಲ್ಲಿನ ಗಣನೀಯ ಬದಲಾವಣೆಯ ಕುರಿತು ನಿಮಗೆ ನಾವು ಸೂಚಿಸುತ್ತೇವೆ.


ಈ ಗೌಪ್ಯತೆಯ ನೀತಿಯಲ್ಲಿ ಇರುವ ವಿಷಯಗಳು

Yahoo ನಿಮ್ಮ ಗೌಪ್ಯತೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ನಮ್ಮ ಗೌಪ್ಯತೆಯ ನೀತಿಯ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಅಂಶಗಳನ್ನು ಓದಿ.

ಹೇಗೆ Yahoo ನಿಮ್ಮ ವೈಯಕ್ತಿಕ ಮಾಹಿತಿಯನ್ನು ಉಪಯೋಗಿಸುತ್ತದೆ.

Yahoo ತಾನು ಸಂಗ್ರಹಿಸಿದ, ಸ್ವೀಕರಿಸಿದ ,ನೀವು ಹಿಂದೆ ಯಾವ ರೀತಿ Yahoo ಉತ್ಪನ್ನ್ನಗಳನ್ನು ಮತ್ತು ಸೇವೆಗಳನ್ನು ಹೇಗೆ ಉಪಯೋಗಿದ್ದೀರಿ ಎನ್ನುವ ಮಾಹಿತಿಯ ಸಹಿತ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದನ್ನು ಈ ನೀತಿಯು ವಿವರಿಸುತ್ತದೆ. ವೈಯಕ್ತಿಕ ಮಾಹಿತಿಯು ಎಂದರೆ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ಸಹಾಯವಾಗುವ ಅಂದರೆ ನಿಮ್ಮ ಹೆಸರು, ವಿಳಾಸ, ಈಮೇಲ್ ವಿಳಾಸ ಅಥವಾ ದೂರವಾಣಿ ಸಂಖ್ಯೆ ಮತ್ತು ಇತರ ಯಾವುದೇ ಸಾರ್ವಜನಿಕವಾಗಿ ಸಿಗದ ಮಾಹಿತಿಗಳು.

ಈ ಗೌಪ್ಯತಾ ನೀತಿಯು ಕೇವಲ Yahoo ಗೆ ಮಾತ್ರ ಸಂಬಂಧಿಸಿದ್ದಾಗಿರುತ್ತದೆ!

ಈ ನೀತಿಯು Yahoo ನ ಸ್ವಾಧೀನದಲ್ಲಿರದ ಅಥವಾ ನಿಯಂತ್ರಣದಲ್ಲಿರದ ಕಂಪೆನಿಗಳ ಆಚರಣೆಗಳಿಗೆ ಅಥವಾ Yahoo ನೇಮಿಸಿಕೊಂಡಿರದ ಅಥವಾ Yahoo ನಿರ್ವಹಣೆಗೆ ಒಳಪಡದ ವ್ಯಕ್ತಿಗೆ ಅನ್ವಯ ಆಗುವುದಿಲ್ಲ. ಅಲ್ಲದೆ, Yahoo ಸ್ವಾಧೀನಪಡಿಸಿಕೊಂಡಿರುವ ಕೆಲವು ಕಂಪೆನಿಗಳು ತಮ್ಮದೇ ಪೂರ್ವಾರ್ಜಿತ ಗೌಪ್ಯತಾ ನೀತಿಗಳನ್ನು ಹೊಂದಿದ್ದು ಅವುಗಳನ್ನು ನಮ್ಮ ಸ್ವಾಧೀನಪಡಿಸಿಕೊಂಡ ಕಂಪೆನಿಗಳ ಪುಟದಲ್ಲಿ ನೋಡಬಹುದು.

ಮಾಹಿತಿ ಸಂಗ್ರಹಣೆ ಮತ್ತು ಉಪಯೋಗ

ಸಾಮಾನ್ಯ

Yahoo, ನೀವು Yahoo ಗೆ ನೋಂದಾಯಿಸುವಾಗ,Yahoo ನ ಉತ್ಪನ್ನ್ನ ಅಥವಾ ಸೇವೆಗಳನ್ನು ಉಪಯೋಗಿಸಿದಾಗ, Yahooನ ಪುಟಗಳಿಗೆ ಅಥವಾ Yahoo ನ ನಿರ್ದಿಷ್ಟ ಪಾಲುದಾರರ ಪುಟಗಳಿಗೆ ಭೇಟಿ ಕೊಟ್ಟಾಗ ಅಥವಾ ನೀವು ಪ್ರೊಮೋಶನ್ ಅಥವಾ ಲಾಟರಿ ಮುಂತಾದವುಗಳಲ್ಲಿ ಭಾಗವಹಿಸಿದಾಗ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತದೆ. Yahoo ತಾನು ಹೊಂದಿರುವ ನಿಮ್ಮ ಮಾಹಿತಿಯನ್ನು ಮತ್ತು ತನ್ನ ವ್ಯಾವಹಾರಿಕ ಪಾಲುದಾರರಿಂದ ಪಡೆದ ನಿಮ್ಮ ಮಾಹಿತಿಯನ್ನು ಜೋಡಿಸಬಹುದು.

ನೀವು ನೋಂದಾವಣಿ ಮಾಡುವಾಗ ನಿಮ್ಮ ಹೆಸರು, ಈಮೇಲ್ ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಅಂಚೆ ಕೋಡ್, ಉದ್ಯೋಗ, ಉದ್ಯಮ, ಹಾಗೂ ವೈಯಕ್ತಿಕ ಆಸಕ್ತಿಗಳ ಮಾಹಿತಿಯನ್ನು ಕೇಳಬಹುದು. ಕೋರಿಕೆಯ ಮೇರೆಗೆ, ಕೆಲವೊಂದು ಆರ್ಥಿಕ ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ, ನಾವು ನಿಮ್ಮ ವಿಳಾಸ ಮತ್ತು ಆಸ್ತಿಯ ವಿವರವನ್ನೂ ಕೇಳಬಹುದು. ನೀವು Yahooಗೆ ರಿಜಿಸ್ಟರ್ ಆಗಿ ನಮ್ಮ ಸೇವೆಗಳಿಗೆ ಸೈನ್ ಇನ್ ಆದ ಬಳಿಕ ನೀವು ನಮಗೆ ಅನಾಮಿಕರಲ್ಲ.

Yahoo ತನ್ನ ಹಾಗೂ ತನ್ನ ಪಾಲುದಾರರ ಜೊತೆಗಿನ ನಿಮ್ಮ ಆರ್ಥಿಕ ವ್ಯವಹಾರಗಳ ಮಾಹಿತಿಯನ್ನು, ಒಂದೊಮ್ಮೆ ಕೊಡಮಾಡಿದಲ್ಲಿ ಆರ್ಥಿಕ ಉತ್ಪನ್ನಗಳ ಮತ್ತು ಸೇವೆಗಳ ಮಾಹಿತಿಯನ್ನೂ ಸಂಗ್ರಹಿಸುತ್ತದೆ.

Yahoo ತನ್ನಿಂದ ತಾನೇ ನಿಮ್ಮ ಕಂಪ್ಯೂಟರ್ ಹಾಗೂ ಬ್ರೌಸರ್ ನಿಂದ IP ವಿಳಾಸ, Yahoo Cookie ಮಾಹಿತಿ,ಸಾಫ್ಟ್ ವೇರ್ಹಾರ್ಡ್ ವೇರ್ ಗುಣಧರ್ಮಗಳು ಮತ್ತು ನೀವು ಬಯಸಿದ ಪುಟದ ಮಾಹಿತಿಯನ್ನು ಸಂಗ್ರಹಿಸಿ ದಾಖಲಿಸುತ್ತದೆ.

ನೀವು Yahooಸೇವೆಗಳನ್ನು ಉಪಯೋಗಿಸುವಾಗ, ನಿಮ್ಮ ಕೆಲವೊಂದು ಮಾಹಿತಿಗಳನ್ನು ಸಾರ್ವಜನಿಕವಾಗಿರುವಂತೆ ಆಯ್ಕೆ ಮಾಡಬಹುದು. ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಎಲ್ಲರಿಗೂ ಸಿಗುವಂತೆ ಪ್ರಕಟಿಸಿದರೆ ಬೇರೆ ವ್ಯಕ್ತಿಗಳಿಂದ ಅನಪೇಕ್ಷಿತ ಸಂದೇಶಗಳು ನಿಮಗೆ ಬರಬಹುದು ಮತ್ತು Yahoo ನಿಮ್ಮ ಮಾಹಿತಿಯ ಯಾವುದೇ ತರಹದ ಬಳಕೆ ಅಥವಾ ದುರ್ಬಳಕೆಗೆ ಜವಾಬ್ದಾರರಾಗಿರುವುದಿಲ್ಲ.

Yahoo ಈ ಕೆಳಗಿನ ಸಾಮಾನ್ಯ ಉದ್ದೇಶಗಳಿಗೆ ನಿಮ್ಮ ಮಾಹಿತಿಯನ್ನು ಬಳಸುತ್ತದೆ: ನೀವು ನೋಡುವ ಜಾಹೀರಾತು ಮತ್ತು ಇತರ ವಿಷಯಗಳನ್ನು ವರ್ಗೀಕರಿಸಲು, ನಿಮ್ಮ ಉತ್ಪನ್ನ ಮತ್ತು ಸೇವೆಯ ಕುರಿತಾದ ಕೋರಿಕೆಯನ್ನು ಪೂರೈಸಲು, ನಿಮ್ಮನ್ನು ಸಂಪರ್ಕಿಸಲು, ಸಂಶೋಧನೆ ಮಾಡಲು ಹಾಗೂ ಆಂತರಿಕ ಮತ್ತು ಬಾಹ್ಯ ಗ್ರಾಹಕರಿಗೆ ಅನಾಮಧೇಯ ವರದಿ ನೀಡಲು. ನೀವು ನೋಡಬಹುದಾದ ಯಾವುದೇ ಜಾಹೀರಾತು ಅಥವಾ ವಿಷಯ, ಉತ್ಪನ್ನ ಅಥವಾ ಸೇವೆಗಳ ನಿಖರತೆ, ಸಮಗ್ರತೆ, ಸತ್ಯತೆ ಹಾಗೂ ಅವಲಂಬನೆಯ ಬಗ್ಗೆ Yahoo ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ ಮತ್ತು ಇದರಿಂದ ಉಂಟಾದ ಯಾವುದೇ ನಷ್ಟಕ್ಕೆ Yahoo ಬಾಧ್ಯರಾಗಿರುವುದಿಲ್ಲ.

ಮಕ್ಕಳು

Yahoo 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಯಾವುದೇ ವಿಶೇಷ ಕೊಡುಗೆ ಅಥವಾ ಮಾರುಕಟ್ಟೆಯ ವಿಚಾರವಾಗಿ ಹಿರಿಯರ ಅನುಮತಿ ಇಲ್ಲದೆ ಸಂಪರ್ಕಿಸುವುದಿಲ್ಲ.

Yahoo 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಂದ ನಿರ್ದಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನಿವಾರ್ಯವಾದುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಭಾಗವಹಿಸುವಿಕೆಯ ನಿಬಂಧನೆಯಾಗಿ ಕೇಳುವುದಿಲ್ಲ.

ಮಾಹಿತಿ ವಿನಿಮಯ ಮತ್ತು ಘೋಷಣೆ

Yahoo ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿಮಗೆ ಕೋರಿಕೆಯ ಉತ್ಪನ್ನ ಹಾಗೂ ಸೇವೆಗಳನ್ನು ಒದಗಿಸಲು ಹೊರತಾಗಿ, ಅಥವಾ ನಿಮ್ಮ ಅನುಮತಿ ಇಲ್ಲದೆ ಅಥವಾ ಈ ಕೆಳಗಿನ ಸಂದರ್ಭಗಳ ಹೊರತಾಗಿ ಬೇರೆ ವ್ಯಕ್ತಿಗಳೊಡನೆ ಅಥವಾ ಅಸಂಯೋಜಿತ ಕಂಪೆನಿಗಳ ಜೊತೆಗೆ ಮಾರಾಟ ಮಾಡುವುದಿಲ್ಲ, ಬಾಡಿಗೆಗೆ ಕೊಡುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ.

  • ನಾವು ನಮ್ಮ ಪರವಾಗಿ ಅಥವಾ ನಮ್ಮೊಂದಿಗೆ ಕೆಲಸ ಮಾಡುವ ವಿಶ್ವಾಸಾರ್ಹ ಪಾಲುದಾರರಿಗೆ ಮಾತ್ರ ಗೌಪ್ಯತೆಯ ಒಪ್ಪಂದದೊಂದಿಗೆ ಮಾಹಿತಿಯನ್ನು ಕೊಡುತ್ತೇವೆ. ಈ ಕಂಪೆನಿಗಳು ನಿಮ್ಮ ಮಾಹಿತಿಯನ್ನು Yahooಗೆ ನಿಮ್ಮೊಂದಿಗೆ ಕೊಡುಗೆಗಳ ಬಗ್ಗೆ ಸಂಪರ್ಕಿಸಲು ಸಹಾಯವಾಗಲು ಹಾಗೂ ಇತರ ವಾಣಿಜ್ಯ ಪಾಲುದಾರರಿಗೆ ಸಹಾಯವಾಗಲು ಉಪಯೋಗಿಸಬಹುದು. ಆದಾಗ್ಯೂ ಈ ಕಂಪೆನಿಗಳಿಗೆ ಸ್ವತಂತ್ರವಾಗಿ ನಿಮ್ಮ ಮಾಹಿತಿಯನ್ನು ಹಂಚುವ ಯಾವುದೇ ಹಕ್ಕು ಇರುವುದಿಲ್ಲ.
  • ನಾವು 13 ವರ್ಷಕ್ಕಿಂತ ಕಿರಿಯರ ಮಾಹಿತಿಯನ್ನು ಹಂಚಿಕೊಳ್ಳಲು ಪೋಷಕರ ಅನುಮತಿಯನ್ನು ಪಡೆದಿರುತ್ತೇವೆ. ಪೋಷಕರಿಗೆ, ತಮ್ಮ ಮಕ್ಕಳ ಮಾಹಿತಿಯನ್ನು ಸಂಗ್ರಹಿಸುವ ಅವಕಾಶವನ್ನು Yahooಗೆ ನೀಡಲು ಮತ್ತು ಇದನ್ನು ಇತರ ವ್ಯಕ್ತಿಗಳಿಗೆ ಅಥವಾ ಕಂಪೆನಿಗಳಿಗೆ ಅವರ ಅಗತ್ಯಕ್ಕೆ ತಕ್ಕಂತೆ ಬಳಸಲು ಹಂಚುವ ಅವಕಾಶವನ್ನು Yahooಗೆ ನೀಡದೆ ಇರುವ ಆಯ್ಕಯನ್ನು ನೀಡಲಾಗಿದೆ.
  • ನಾವು ನ್ಯಾಯಾಲಯದ ಆಜ್ಞೆಗೆ ಪ್ರತಿಕ್ರಿಯೆ ಅಥವಾ ನ್ಯಾಯಾಲಯದ ಆದೇಶಗಳು, ಕಾನೂನು ಪ್ರಕ್ರಿಯೆಯಲ್ಲಿ, ಅಥವಾ ನಮ್ಮ ಕಾನೂನು ಹಕ್ಕುಗಳನ್ನು ಸ್ಥಾಪಿಸಲು ಅಥವಾ ಚಟುವಟಿಕೆಗೊಳಿಸಲು ಅಥವಾ ಕಾನೂನುಬದ್ದ ಕ್ಲೈಮುಗಳ ವಿರುದ್ದದ ರಕ್ಷಣೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.
  • ತನಿಖೆ ಮಾಡಲು, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಅಥವಾ ಅವುಗಳ ವಿರುದ್ದ ಕ್ರಮ ತೆಗೆದುಕೊಳ್ಳಲು, ಮೋಸದ ಸಂದೇಹ, ಯಾವುದೇ ವ್ಯಕ್ತಿಯ ದೈಹಿಕ ���ುರಕ್ಷತೆಗೆ ಸಂಭವನೀಯ ಬೆದರಿಕೆಗಳನ್ನು ಒಳಗೊಂಡ ತುರ್ತು ಪರಿಸ್ಥಿತಿಗಳು, ಅಥವಾ Yahoo ನ ಸೇವಾ ಷರತ್ತುಗಳ ಉಲ್ಲಂಘನೆ ಅಥವಾ ಕಾನೂನಿನಿಂದ ಅಗತ್ಯತೆಯಂತೆ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂಬುದನ್ನು ನಾವು ನಂಬುತ್ತೇವೆ.
  • ಒಂದುವೇಳೆ Yahoo ಅನ್ನು ಬೇರೊಂದು ಕಂಪೆನಿ ಸ್ವಾಧೀನಪಡಿಸಿದರೆ ಅಥವಾ ಸಂಯೋಜನೆಗೊಂಡರೆ ನಿಮ್ಮ ಮಾಹಿತಿಯನ್ನು ನಾವು ವರ್ಗಾಯಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ Yahoo ನಿಮಗೆ ನಿಮ್ಮ ಮಾಹಿತಿಯು ವರ್ಗಾವಣೆ ಆಗುವ ಮೊದಲೇ ನಿಮ್ಮ ಮಾಹಿತಿ ವರ್ಗಾವಣೆ ಆಗಲಿದೆ ಮತ್ತು ನೀವು ಬೇರೊಂದು ಗೌಪ್ಯತಾ ನೀತಿಗೆ ಬದ್ಧರಾಗಿರುತ್ತೀರಿ ಎಂದು ತಿಳಿಸುತ್ತದೆ.

Yahoo ವೈಯಕ್ತಿಕ ಮಾಹಿತಿಯ ಆಧಾರದಲ್ಲಿ ಗುರಿ ನಿರ್ದೇಶಿತ ಜಾಹೀರಾತುಗಳನ್ನು ತೋರಿಸುತ್ತದೆ. ಗುರಿ ನಿರ್ದೇಶಿತ ಜಾಹೀರಾತನ್ನು ನೋಡುವ, ಪ್ರತಿಕ್ರಿಯಿಸುವ ಅಥವಾ ಕ್ಲಿಕ್ ಮಾಡುವ ಜನರು ನಿರ್ದೇಶಿತ ಗುರಿಯ ನಿಬಂಧನೆಗೆ ಒಳಪಡುತ್ತಾರೆ (ಉದಾ.ಒಂದು ಭೌಗೋಳಿಕ ಪ್ರದೇಶದ 18-24ರ ವಯೋಮಾನದ ಮಹಿಳೆಯರು) ಎಂದು ಜಾಹೀರಾತುದಾರರು (ಜಾಹೀರಾತು ಸೇವಾನಿರತ ಕಂಪೆನಿಗಳನ್ನು ಸೇರಿಸಿ) ಭಾವಿಸುತ್ತಾರೆ.

  • ನೀವು ಯಾವುದೇ ಗುರಿ ನಿರ್ದೇಶಿತ ಜಾಹೀರಾತನ್ನು ನೋಡುವಾಗ/ ಪ್ರತಿಕ್ರಿಯಿಸುವಾಗ , Yahoo ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಜಾಹೀರಾತುದಾರರಿಗೆ ನೀಡುವುದಿಲ್ಲ. ಆದಾಗ್ಯೂ, ಜಾಹೀರಾತನ್ನು ನೀವು ನೋಡುವಾಗ ಅಥವಾ ಪ್ರತಿಕ್ರಿಯಿಸುವಾಗ, ಆ ಗುರಿ ನಿರ್ದೇಶಿತ ಜಾಹೀರಾತಿನ ಮಾನದಂಡವನ್ನು ನೀವು ತಲುಪಿದ್ದೀರಿ ಎಂದು ಜಾಹೀರಾತುದಾರ ನಂಬುವುದಕ್ಕೆ ಒಪ್ಪಿಗೆ ನೀಡಿರುತ್ತೀರಿ.
  • Yahoo ಜಾಹೀರಾತುದಾರರು ಬ್ಯಾಂಕ್, ವಿಮಾ ಏಜೆಂಟ್, ಷೇರು ದಲ್ಲಾಳಿ, ಮುಂತಾದ ವಾಣಿಜ್ಯ ಸೇವಾ ಪೂರೈಕೆದಾರರಾಗಿರಬಹುದು ಅಥವಾ ಅಂಗಡಿ, ವಾಯುಯಾನ ಸಂಸ್ಥೆ ಅಥವಾ ಸಾಫ್ಟ್ ವೇರ್ ಕಂಪನಿ ಮುಂತಾದ ವಾಣಿಜ್ಯೇತರ ಕಂಪನಿಗಳಾಗಿರಬಹುದು.

Yahoo ಪೂರೈಕೆದಾರರು, ಪಾಲುದಾರರು ಜಾಹೀರಾತುದಾರರು ಹಾಗೂ ವಿವಿಧ ಕೈಗಾರಿಕೆ ಹಾಗೂ ವಿವಿಧ ವರ್ಗಗಳ ವ್ಯವಹಾರದ ಸೇವಾ ಪೂರೈಕೆದಾರರ ಜೊತೆಗೆ ಕೆಲಸ ಮಾಡುತ್ತದೆ. ಉತ್ಪನ್ನಗಳ ಪೂರೈಕೆದಾರರ ಬಗ್ಗೆ ಹಾಗೂ ಸೇವೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ನಮ್ಮ ವಿಸ್ತ್ರತ ರೆಫರೆನ್ಸ್ ಲಿಂಕ್ ಅನ್ನು ಓದಿ.

COOKIES

Yahoo ತನ್ನ Yahoo Cookies ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಸಿದ್ದಪಡಿಸಬಹುದು ಮತ್ತು ಅಥವಾ ಕಂಪ್ಯೂಟರ್ ನಲ್ಲಿರುವ cookies ಅನ್ನು ಪರಿಶೀಲಿಸಬಹುದು.

Yahoo, ತನ್ನ ಪುಟಗಳಲ್ಲಿ ಜಾಹೀರಾತುತೋರಿಸುವ ಕಂಪನಿಗಳಿಗೆ, ನಿಮ್ಮ ಕಂಪ್ಯೂಟರ್ ನಲ್ಲಿ cookiesಗಳನ್ನು ಸ್ಥಾಪಿಸುವ ಅಥವಾ ಪರಿಶೀಲಿಸಲು ಅವಕಾಶ ಕೊಡುತ್ತದೆ. ಬೇರೆ ಕಂಪನಿಗಳ cookiesಗಳ ಉಪಯೋಗ, ಅವರ ಗೌಪ್ಯತಾ ನಿಯಮಗಳಿಗೆ ಬದ್ಧವಾಗಿರುತ್ತದೆ ಮತ್ತು ನಮ್ಮ ನಿಯಮಗಳಿಗೆ ಅಲ್ಲ. ಜಾಹೀರಾತುದಾರರಿಗೆ ಅಥವಾ ಇತರ ಕಂಪನಿಗಳಿಗೆ Yahooನ cookiesಗಳಿಗೆ ಅನುಮತಿ ಇಲ್ಲ.

Yahoo, ತನ್ನ Yahoo ಉತ್ಪನ್ನಗಳುಹಾಗೂ ಸೇವೆಗಳು ಮತ್ತು ವೆಬ್ ಬಿಕಾನ್ ಗಳ ಮೂಲಕ ತನ್ನ ನೆಟ್-ವರ್ಕ್ ನ ಒಳಗಡೆ ಮತ್ತು ಹೊರಗಡೆ ಇರುವ Yahoo cookiesಗಳನ್ನು ಉಪಯೋಗಿಸುತ್ತದೆ.

ನಿಮ್ಮ ಅಕೌಂಟ್ ಮಾಹಿತಿ ಮತ್ತು ಪ್ರಾಶಸ್ತ್ಯಗಳನ್ನು ತಿದ್ದಲು ಅಥವಾ ಡಿಲಿಟ್ ಮಾಡುವ ನಿಮ್ಮ ಸಾಮರ್ಥ್ಯ.

ಸಾಮಾನ್ಯ

ನೀವು ನಿಮ್ಮ ಮಾರುಕಟ್ಟೆ ಪ್ರಾಶಸ್ತ್ಯವನ್ನೂ ಒಳಗೊಂಡಂತೆYahoo ಅಕೌಂಟ್ ಮಾಹಿತಿಯನ್ನು ಯಾವುದೇ ಸಮಯದಲ್ಲಿ ತಿದ್ದಬಹುದು.

ಹೊಸ ಬಗೆಯ ಮಾರುಕಟ್ಟೆ ಸಂವಹನಗಳು ಮಾರುಕಟ್ಟೆ ಪ್ರಾಶಸ್ತ್ಯ ಪುಟಕ್ಕೆ ಕಾಲ ಕಾಲಕ್ಕೆ ಸೇರ್ಪಡೆಗೊಳ್ಳಬಹುದು. ಈ ಪುಟವನ್ನು ನೋಡುವ ಗ್ರಾಹಕ, ಭವಿಷ್ಯದಲ್ಲಿ ಹೊಸ ಬಗೆಯ ಮಾರುಕಟ್ಟೆ ಕುರಿತ ಸಂವಹನಗಳನ್ನು ಸ್ವೀಕರಿಸದಂತೆ ಆಯ್ಕೆ ಮಾಡಬಹುದು ಅಥವಾ ಅವರು ತಮ್ಮ ಚಂದಾದಾರಿಕೆಯನ್ನು, ತಾವು ಸ್ವೀಕರಿಸಿದ ಸಂದೇಶದಲ್ಲಿ ಇರುವ ಸೂಚನೆಗಳನ್ನು ಅನುಸರಿಸುವ ಮೂಲಕ ನಿಲ್ಲಿಸಬಹುದು.

ನಾವು ನಿಮಗೆ ಸಂದೇಶಗಳನ್ನು ಸ್ವೀಕರಿಸದೆ ಇರುವ ಅವಕಾಶವನ್ನು ಕೊಡದೆ, Yahoo Service ಆಧಾರಿತ ಸಂದೇಶಗಳನ್ನು ಅಂದರೆ ಸೇವೆಗಳ ಘೋಷಣೆ, ಕಾರ್ಯನಿರ್ವಾಕರ ಸಂದೇಶಗಳು, Yahoo ನ್ಯೂಸ್ ಲೆಟರ್ ಮತ್ತು Yahoo ಅಕೌಂಟ್ ನ ಭಾಗ ಎಂದು ಪರಿಗಣಿಸಿರುವ ಸಂದೇಶಗಳನ್ನು, ಕಳೆುಹಿಸುವ ಹಕ್ಕನ್ನು ಕಾಯ್ದಿರಿಸಿದ್ದೇವೆ.

ನಮ್ಮ ಅಕೌಂಟ್ ಡಿಲಿಶನ್ ಪುಟಕ್ಕೆ ಹೋಗಿ ನಿಮ್ಮ ಅಕೌಂಟ್ ಅನ್ನು ಅಳಿಸಬಹುದು. ನಿಮ್ಮ ಅಕೌಂಟ್ ಅನ್ನು ಡಿಲಿಟ್ ಮಾಡಿದ ಬಳಿಕ ನಮ್ಮ ರಕ್ಷಿತ ಕೇಂದ್ರದಲ್ಲಿ ಇರಬಹುದಾದ ನಿಮ್ಮ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ದಯವಿಟ್ಟು ಇಲ್ಲಿ ಕ್ಲಿ���್ ಮಾಡಿ.

ಮಕ್ಕಳು

ಪೋಷಕರು ತಮ್ಮ ಮಕ್ಕಳ Yahoo ಅಕೌಂಟ್ ಅನ್ನು Yahoo Family Accounts ನಲ್ಲಿ ಒದಗಿಸಿರುವ ಸೌಲಭ್ಯಗಳ ಮೂಲಕ ಪರಿಶೀಲಿಸಬಹುದು, ತಿದ್ದಬಹುದು ಮತ್ತು ಡಿಲಿಟ್ ಮಾಡಬಹುದು.

ಒಂದು ವೇಳೆ ಪೋಷಕರು ನಮಗೆ ತಮ್ಮ ಮಕ್ಕಳ ಹೆಚ್ಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಬಿಡುವುದಿಲ್ಲ ಎಂದು ಆಯ್ಕೆ ಮಾಡಿದರೆ, Yahoo Family Accounts ನಲ್ಲಿ ನೊಂದಾಯಿಸಿದ ಪೋಷಕರು ಅವರ ಮಗುವಿನ ಅಕೌಂಟ್ ಗೆ ಲಾಗ್ ಇನ್ ಆಗಿ ನಂತರ ಅಕೌಂಟ್ ಡಿಲೀಶನ್ ಪುಟಕ್ಕೆ ಹೋಗಿ ಮಗುವಿನ ಅಕೌಂಟ್ ಅನ್ನು ಡಿಲೀಟ್ ಮಾಡಬಹುದು. ನಿಮ್ಮ ಅಕೌಂಟ್ ಅನ್ನು ಡಿಲಿಟ್ ಮಾಡಿದ ಬಳಿಕ ನಮ್ಮ ರಕ್ಷಿತ ಕೇಂದ್ರದಲ್ಲಿ ಇರಬಹುದಾದ ನಿಮ್ಮ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

ವಿಶ್ವಾಸಾರ್ಹತೆ ಮತ್ತು ಸುರಕ್ಷತೆ.

ನಮ್ಮ್ಮ ಉದ್ಯೋಗಿಗಳು ನಿಮಗೆ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಒದಗಿಸಲು ಅಥವಾ ಅವರ ಕೆಲಸವನ್ನು ಮಾಡಲು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಲೇಬೇಕಾದ ಪಕ್ಷದಲ್ಲಿ ನಾವು ನಮ್ಮ ಉದ್ಯೋಗಿಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿಯ ಪರಿಶೀಲನೆಯನ್ನು ನಿಯಂತ್ರಣದಲ್ಲಿ ಇಡುತ್ತೇವೆ.

ನಾವು ಭೌತಿಕ, ಎಲೆಕ್ಟ್ರೋನಿಕ್ ಹಾಗೂ ವಿಧಾನಬದ್ದ ರಕ್ಷಣಾ ವಿಧಾನಗಳನ್ನು ಹೊಂದಿದ್ದು ಅದು ಫೆಡೆರಲ್ ರೆಗ್ಯುಲೇಶನ್ ಗೆ ಅನುಗುಣವಾಗಿದ್ದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುತ್ತದೆ.

ಸುರಕ್ಷತೆಯ ಬಗ್ಗೆ ಮತ್ತು ನಾವು ತೆಗೆದುಕೊಳ್ಳುವ ಸುರಕ್ಷತೆಯ ಹೆಜ್ಜೆಗಳ ಬಗ್ಗೆ ಮತ್ತು ನೀವು ತೆಗೆದುಕೊಳ್ಳಬಹುದಾದ ಸುರಕ್ಷತೆಯ ಹೆಜ್ಜೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ದಯವಿಟ್ಟು Yahoo ನ ಇದ್ದಲ್ಲಿ ದಯವಿಟ್ಟು ಫೀಡ್ ಬ್ಯಾಕ್ ಫಾರಂ ಅನ್ನು ಭರ್ತಿ ಮಾಡಿ ಅಥವಾ ನಮ್ಮನ್ನು ಸಂಪರ್ಕಿಸಬಹುದಾದ ವಿಳಾಸ:

Yahoo India Private Limited
ಯೂನಿಟ್ ಸಂಖ್ಯೆ. 1261, 6ನೇ ಮಹಡಿ, ಬಿಲ್ಡಿಂಗ್ ನಂ. 12,
(ಅಂಧೇರಿ-ಘಟ್ಕೊಪರ್ ಲಿಂಕ್ ರಸ್ತೆ),
ಅಂಧೇರಿ (ಪೂರ್ವ), ಮುಂಬೈ -400 093

ಕೊನೆಯದಾಗಿ ನವೀಕರಿಸಿರುವುದು: ಜೂನ್ 13, 2017

  • oath