Yahoo ಕೃತಿಸ್ವಾಮ್ಯಗಳು ಮತ್ತು ಕೃತಿಸ್ವಾಮ್ಯ ಏಜೆಂಟ್

Yahoo ಬೇರೆಯವರ ಬೌದ್ದಿಕ ಸ್ವತ್ತನ್ನು ಗೌರವಿಸುತ್ತದೆ, ಮತ್ತು ನಾವು ನಮ್ಮ ಬಳಕೆದಾರರು ಅದನ್ನು ಅನುಸರಿಸುವಂತೆ ಕೇಳಿಕೊಳ್ಳುತ್ತೇವೆ. Yahoo ಆವಶ್ಯಕ ಸಂದರ್ಭಗಳಲ್ಲಿ ಮತ್ತು ತನ್ನ ವಿವೇಚನೆಯ ಮೇರೆಗೆ, ಬೇರೆಯವರ ಬೌದ್ದಿಕ ಸ್ವತ್ತಿಗೆ ಹಕ್ಕಿಗೆ ಚ್ಯುತಿಯುಂಟು ಮಾಡುವ ಬಳಕೆದಾರರ ಖಾತೆಗಳನ್ನು ರದ್ದುಗೊಳಿಸಬಹುದು.

ನಿಮ್ಮ ಕೆಲಸವು ಕೃತಿಸ್ವಾಮ್ಯದ ಚ್ಯುತಿಗೆ ಕಾರಣವಾಗುವಂತಹ ರೀತಿಯಲ್ಲಿ ನಕಲು ಮಾಡಲ್ಪಟ್ಟಿದೆ ಎಂದು ನೀವು ನಂಬಿದ್ದರೆ, ದಯವಿಟ್ಟು Yahoo ನ ಕೃತಿಸ್ವಾಮ್ಯ ಏಜೆಂಟ್ ಗೆ ಈ ಕೆಳಗಿನ ಮಾಹಿತಿಯನ್ನು ಒದಗಿಸಿ:

  1. ಕೃತಿಸ್ವಾಮ್ಯದ ಹಿತಾಸಕ್ತಿಯ ಮಾಲೀಕನ ಪರವಾಗಿ ಕಾರ್ಯನಿರ್ವಹಿಸಲು ಅಧಿಕೃತನಾದ ವ್ಯಕ್ತಿಯ ಒಂದು ಎಲೆಕ್ಟ್ರಾನಿಕ್ ಅಥವಾ ಭೌತಿಕ ಸಹಿ;
  2. ಚ್ಯುತಿಯುಂಟಾಗಿದೆ ಎಂದು ನೀವು ಹೇಳುವ ಕೃತಿಸ್ವಾಮ್ಯ ಕೆಲಸದ ವಿವರಣೆ;
  3. ಚ್ಯುತಿಯುಂಟಾಗುತ್ತಿದೆ ಎಂದು ನೀವು ಕ್ಹೇಳುವ ಸಾಮಗ್ರಿಯು ಈ ಸೈಟ್ ನ ಯಾವ ಸ್ಥಳದಲ್ಲಿದೆ ಎಂಬುದರ ವಿವರಣೆ;
  4. ನಿಮ್ಮ ವಿಳಾಸ, ದೂರವಾಣಿ ಸಂಖ್ಯೆ, ಮತ್ತು ಇಮೇಲ್ ವಿಳಾಸ;
  5. ವಿವಾದಿತ ಬಳಕೆಯು ಕೃತಿಸ್ವಾಮ್ಯ ಮಾಲೀಕನಿಂದ, ಆತನ ಏಜೆಂಟ್ ನಿಂದ , ಅಥವಾ ಕಾನೂನಿನಿಂದ ಅಧಿಕೃತಗೊಂಡಿಲ್ಲ ಎಂಬ ಸದ್ಭಾವನೆಯನ್ನು ನೀವು ಹೊಂದಿರುವಿರಿ ಎಂಬ ನಿಮ್ಮ ಒಂದು ಹೇಳಿಕೆ.
  6. ನಿಮ್ಮ ತಿಳುವಳಿಕೆ ಪತ್ರದಲ್ಲಿನ ಮೇಲಿನ ಮಾಹಿತಿಯು ನಿಖರವಾಗಿದೆ ಮತ್ತು ನೀವು ಕೃತಿಸ್ವಾಮ್ಯ ಮಾಲೀಕರಾಗಿರುವಿರಿ ಅಥವಾ ಕೃತಿಸ್ವಾಮ್ಯ ಮಾಲೀಕನ ಪರವಾಗಿ ಕಾರ್ಯನಿರ್ವಹಿಸಲು ಅಧಿಕೃತರಾಗಿರುವಿರಿ ಎಂಬ, ಸುಳ್ಳುಪ್ರಮಾಣದ ದಂಡನೆಯ ಅಡಿಯಲ್ಲಿ ನಿಮ್ಮಿಂದ ಮಾಡಲ್ಪಟ್ಟ ಒಂದು ಹೇಳಿಕೆ.

ಕೃತಿಸ್ವಾಮ್ಯ ಚ್ಯುತಿಯ ಕ್ಲೈಮುಗಳ ತಿಳುವಳಿಕೆ ಪತ್ರವನ್ನು Yahoo ಕೃತಿಸ್ವಾಮ್ಯ ಏಜೆಂಟ್ ಗೆ ಈ ಕೆಳಗಿನ ರೀತಿಯಲ್ಲಿ ತಲುಪಿಸಬಹುದು:

ಆನ್ಲೈನ್ ಫಾರ್ಮ್ ಮುಖಾಂತರ:

https://ipr.yahoo.com/copyright?.lang=kn-IN

ಮೇಲ್ ಮೂಲಕ:

ಕೃತಿಸ್ವಾಮ್ಯ ಏಜೆಂಟ್
Yahoo! India Pvt Ltd
ಯೂನಿಟ್ ಸಂಖ್ಯೆ. 1261, 6ನೇ ಮಹಡಿ,
ಬಿಲ್ಡಿಂಗ್ ನಂ. 12, ಸಾಲಿಟೈರ್ ಕಾರ್ಪೊರೇಟ್ ಪಾರ್ಕ್
ನಂ. 167, ಗುರು ಹರ್ ಗೋವಿಂದಜಿ ಮಾರ್ಗ,
(ಅಂಧೇರಿ-ಘಾಟ್ಕೋಪರ್ ಲಿಂಕ್ ರಸ್ತೆ),
ಅಂಧೇರಿ (ಪೂರ್ವ), ಮುಂಬೈ -400 093
ಭಾರತ

ಇ-ಮೇಲ್ ಮೂಲಕ:

in-copyright@yahoo-inc.com

ಫ್ಯಾಕ್ಸ್ ಮೂಲಕ:

+91 22 3308 9700

  • oath